PM Candidate: ‘ಇಂಡಿಯಾ’ ಮೈತ್ರಿ ಕೂಟದಿಂದ ಪ್ರಧಾನಿ ಅಭ್ಯರ್ಥಿ ಘೋಷಣೆ – ಭಾರೀ ಕುತೂಹಲ ಕೆರಳಿಸಿದೆ ಹೆಸರು !!

PM Candidate: ಮುಂಬರುವ ಲೋಕಸಭಾ ಚುನಾವಣೆಯ(Parliament election)ಕಾವು ಇದೀಗ ದೇಶಾದ್ಯಂತ ರಂಗೇರಿದೆ. ಎಲ್ಲಾ ಪಕ್ಷಗಳು ಗೆಲುವಿನ ಮಂತ್ರವನ್ನು ಪಠಿಸುತ್ತಿವೆ. ಕೆಲವು ಪಕ್ಷಗಳು ಮೈತ್ರಿ ಮಾಡಿಕೊಂಡು ಈಗಲೇ ಗೆಲುವಿನ ನಗೆ ಬೀರುತ್ತಿದೆ. ಇದರ ನಡುವೆಯೇ ಅಭ್ಯರ್ಥಿಗಳ ಆಯ್ಕೆ ಕೂಡ ನಡೆಯುತ್ತಿದೆ. ಈ ನಡುವೆಯೇ ಇಂಡಿಯಾ ಮೈತ್ರಿ ಕೂಟದಿಂದ ಪ್ರಧಾನಿ ಅಭ್ಯರ್ಥಿ(PM Candidate)ಯಾರು ಎಂಬುದಕ್ಕೆ ಒಂದು ಅಂತ್ಯದ ನಿರ್ಧಾರ ಕೈಗೊಂಡಿದ್ದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikharjun Kharge) ಅವರ ಹೆಸರನ್ನು ಸೂಚಿಸಲಾಗಿದೆ.

 

ಹೌದು, ಇಂಡಿಯಾ ಮೈತ್ರಿ ಕೂಟದಿಂದ ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಫೈನಲ್ ಆಗೋದು ಬಹುತೇಕ ಫಿಕ್ಸ್ ಆಗಿದೆ. ಭಾರತ ಮೈತ್ರಿಕೂಟದ ಸಭೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ(Mamata bannergy) ಅವರು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯ ಹೆಸರನ್ನು ಚರ್ಚಿಸಿದ್ದಾರೆ. ಈ ವೇಳೆ ಮಮತಾ ಬ್ಯಾನರ್ಜಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವುದು ಸೂಕ್ತ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನು ಓದಿ: Chikkamagaluru: ಕಾಂಗ್ರೆಸ್ ನ ತತ್ವ, ಸಿದ್ದಾಂತಗಳನ್ನೆಲ್ಲ ಬದಿಗೊತ್ತಿ ಭಜರಂಗಿ ದತ್ತ ಮಾಲೆ ಹಾಕಿದ ‘ಕೈ’ ಶಾಸಕ !!

ಅಂದಹಾಗೆ ಖರ್ಗೆ ಅವರು ದಲಿತ ಮುಖಂಡರಾಗಿರುವುದರಿಂದ ಮಮತಾ ಅವರ ಪ್ರಸ್ತಾಪಕ್ಕೆ ಮೈತ್ರಿಕೂಟದಲ್ಲಿ ಪಕ್ಷಗಳಿಂದ ವ್ಯಾಪಕ ಅನುಮೋದನೆ ಸಿಕ್ಕಿದೆ ಎನ್ನಲಾಗಿದೆ. ಸಭೆಯಲ್ಲಿ ಪಾಲ್ಗೊಂಡ 12 ಪಕ್ಷಗಳು ಈ ಪ್ರಸ್ತಾಪವನ್ನು ಶ್ಲಾಘಿಸಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ಖರ್ಗೆ ಅವರು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಈ ಕುರಿತು ಇನ್ನೂ ಸ್ಪಷ್ಟೀಕರಣ ದೊರಕಬೇಕು.

Leave A Reply

Your email address will not be published.