Sagar Sharma: ಲೋಕಸಭೆಯೊಳಗೆ ನುಗ್ಗಿದ ಸಾಗರ್ ಶರ್ಮ ಮನೆಯಲ್ಲಿ ಡೈರಿ ಪತ್ತೆ – ಏನಿದೆ ಗೊತ್ತಾ ಅದರಲ್ಲಿ?!

Security Breach in LokSabha accused Sagar Sharma wrote dairy

Security Breach: ಲೋಕಸಭೆಯಲ್ಲಿ ಉಂಟಾದ ಭದ್ರತಾ ಲೋಪ(Security Breach)ಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್ ಶರ್ಮಾ( Sagar Sharma) ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ, ಈತನ ಮನೆಯಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಅನೇಕ ಸ್ಪೋಟಕ ಮಾಹಿತಿಗಳನ್ನ ಒಳಗೊಂಡಿದೆ ಎನ್ನಲಾಗಿದೆ.

ಲೋಕಸಭೆಯಲ್ಲಿ ಬುಧವಾರ ಮಧ್ಯಾಹ್ನದ ವೇಳೆಗೆ ಸಾಗರ್ ಶರ್ಮಾ ಹಾಗೂ ಮನೋರಂಜನ್ ಎಂಬ ಇಬ್ಬರು ಯುವಕರು ಏಕಾಏಕಿ ಸದನದೊಳಗೆ ನುಗ್ಗಿ ಅಶ್ರುವಾಯು ಸಿಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಐವರನ್ನು ಬಂಧಿಸಲಾಗಿದೆ. ಆರೋಪಿ ಸಾಗರ್ ಮನೆ ತನಿಖೆ ನಡೆಸುವ ಸಂದರ್ಭ ಮನೆಯಲ್ಲಿ ಡೈರಿಯೊಂದು ದೊರೆತಿದ್ದು, 2015ರ ಸುಮಾರಿಗೆ ಸಾಗರ್ ಈ ಡೈರಿಯನ್ನು ಬರೆಯಲು ಶುರುಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಡೈರಿಯಲ್ಲಿ ಅನೇಕ ಟಿಪ್ಪಣಿಗಳು, ದೇಶಭಕ್ತಿಯ ಕವನಗಳು ಮತ್ತು ಕ್ರಾಂತಿಕಾರಿ ಚಿಂತನೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಇದಲ್ಲದೇ, ಡೈರಿಯಲ್ಲಿ ಈಗ ಮನೆಯಿಂದ ಹೋಗುವ ಸಮಯ ಎಂದು ಬರೆಯಲಾಗಿತ್ತು ಎಂದು ತಿಳಿದುಬಂದಿದೆ.

Sagar Sharma

ಇದನ್ನು ಓದಿ: Good News For Couples: ಹೊಸ ವರ್ಷಕ್ಕೆ ಕಪಲ್ಸ್ ಗಳಿಗೆ ಭರ್ಜರಿ ಗುಡ್ ನ್ಯೂಸ್ – ಇಲ್ಲಿದೆ ನೋಡಿ ನಿಮಗೊಂದು ಹೊಸ ಅವಕಾಶ !!

ಸಾಗರ್ ಅವರ ಮನೆಯವರ ಮಾಹಿತಿ ಅನುಸಾರ, 2018 ರಲ್ಲಿ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡಲು ಬೆಂಗಳೂರಿಗೆ ತೆರಳಿದ್ದನಂತೆ. ಕೊರೋನಾ ಮಹಾಮಾರಿ ಕಂಡುಬಂದ ಬಳಿಕ ಹಿಂತಿರುಗಿದ್ದನಂತೆ. 2015ರ ಜೂನ್ 8ರಂದು ಬರೆದ ಡೈರಿಯ ಮೊದಲ ಪುಟದಲ್ಲಿ ಇಂಕ್ವಿಲಾಬ್ ಜಿಂದಾಬಾದ್ನಿಂದ ಆರಂಭವಾಗಲಿದೆ.

ನಾನು ಶ್ರೀಮಂತನಲ್ಲ ಮಧ್ಯಮ ವರ್ಗದ ಕುಟುಂಬದವನು, ದೇಶಕ್ಕಾಗಿ ದುಡಿಯುವ ಪ್ರಾಮಾಣಿಕತೆ ಹೊಂದಿರುವ ಕೆಲವು ಸ್ನೇಹಿತರು ನನಗೆ ಬೇಕು ಎಂದು ಬರೆದಿದ್ದ ಎನ್ನಲಾಗಿದೆ. 2016ರಲ್ಲಿ ಮತ್ತೊಂದು ಕಡೆ ದೇಶದ ಶಿಕ್ಷಣ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಬರೆದುಕೊಂಡಿದ್ದ. ಸಾಗರ್ ಅವರ ಡೈರಿಯಲ್ಲಿ 30ಕ್ಕೂ ಹೆಚ್ಚು ಹೆಸರುಗಳಿದ್ದು, ಫೋನ್ ನಂಬರ್ ಗಳನ್ನು ಒಳಗೊಂಡಿದೆ. ಅವುಗಳಲ್ಲಿ ಹೆಚ್ಚಿನ ಫೋನ್ ಕಾರ್ಯನಿರ್ವಹಿಸುತ್ತಿಲ್ಲ. ನಾನು ನನ್ನ ದೇಶಕ್ಕಾಗಿ ಹಾಗೂ ಅದರ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಮಾತ್ರ ಕೆಲಸ ಮಾಡುತ್ತೇವೆ. ಅತ್ಯಾಚಾರ, ಭ್ರಷ್ಟಾಚಾರ, ಕೊಲೆ, ಅಪಹರಣ, ಕಳ್ಳಸಾಗಣೆ ಮುಂತಾದ ವಿಚಾರಗಳು ದೇಶದ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಬರೆದುಕೊಂಡಿದ್ದ.

Leave A Reply

Your email address will not be published.