Liquor Price Hike: ಮದ್ಯಪ್ರಿಯರಿಗಿಲ್ಲ ಹೊಸ ವರ್ಷದ ಸಂಭ್ರಮ – ಜನವರಿಯಿಂದಲೇ ಈ ಎಲ್ಲಾ ಮದ್ಯದ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆ !!

Liquor Price Hike: ಡಿಸೆಂಬರ್ ತಿಂಗಳು ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಹೊಸ ವರ್ಷದ ಹೊಸ್ತಿಲಲ್ಲಿ (New year Celebration) ಮದ್ಯಪ್ರಿಯರಿಗೆ(Liquor Price Hike)ಬಿಗ್ ಶಾಕ್ ಎದುರಾಗಿದ್ದು, ಮದ್ಯ ದರ ಏರಿಕೆ ಬಿಸಿ ತಟ್ಟಲಿದೆ ಎನ್ನಲಾಗಿದೆ.

ಜನವರಿ 1ರಿಂದ ದರ ಏರಿಕೆ ಮಾಡುವಂತೆ ಕಂಪನಿಗಳು ಬಾರ್ ಮಾಲೀಕರಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆ ದರ ಏರಿಕೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಕಂಪನಿಗಳು ಗ್ರಾಹಕರಿಗೆ ಬೆಲೆ ಏರಿಕೆ ಮಾಡಿ ಆರ್ಥಿಕ ಹೊರೆ ತಗ್ಗಿಸಲು ಮುಂದಾಗಿವೆ.

ಜನವರಿ 1ರಿಂದ ಮದ್ಯ ದರ (Liquor Price)ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಹಾಲಿ ಓಟಿ 180 ಎಂಎಲ್‌ಗೆ 100 ರೂಪಾಯಿಯಿರುವ ದರ, ಜ.1 ರಿಂದ ಓಟಿ ಬೆಲೆ 123 ರೂ.ಗೆ ಹೆಚ್ಚಳ ಕಾಣಲಿದೆ. ಬಿಪಿ ದರ ಹಾಲಿ 123 ರೂ. ಯಿದ್ದು, ಜನವರಿಯಿಂದ 159 ರೂ. ಹೆಚ್ಚಳವಾಗಲಿದೆ . 8ಪಿಎಂ ದರ ಹಾಲಿ 100 ರೂ. ಯಿದ್ದು, 123 ರೂ.ಗೆ ಹೆಚ್ಚಳವಾಗಲಿದೆ.ಈ ಕುರಿತು, ಎಂಆರ್‌ಪಿ ಬಾರ್ ಮಾಲೀಕರಿಗೆ ಮೆಸೇಜ್ ಮೂಲಕ ಕಂಪನಿಗಳು ಮಾಹಿತಿ ಕಳುಹಿಸಿದ್ದು, ಸೂಚನೆಯ ಅನುಸಾರ ದರ ನಿಗದಿ ಮಾಡಿದಂತೆ ಸಹಕರಿಸುವಂತೆ ಮನವಿ ಮಾಡಿದೆ.

ಇದನ್ನು ಓದಿ: Parliment Attack: ಸಂಸತ್ ಅಟ್ಯಾಕ್ ಪ್ರಕರಣ – ಸ್ಮೋಕ್ ದಾಳಿ ಹಿಂದಿನ ಸ್ಪೋಟಕ ಸತ್ಯ ಬಿಚ್ಚಿಟ್ಟ ದುಷ್ಕರ್ಮಿಗಳು !!

Leave A Reply

Your email address will not be published.