Coconut Husk Pealing: ಚಿಪ್ಪಿನಿಂದ ತೆಂಗಿನಕಾಯಿ ತೆಗೆಯಲು ಈ ವಿಧಾನ ಬಳಸಿ – ಜಸ್ಟ್ ಸೆಕೆಂಡಿನಲ್ಲಿ ಬೇರ್ಪಡಿಸಿ
here is a simple tricks to take kobbari from coconut shell
Coconut Husk Pealing: ಅಡಿಗೆಯಲ್ಲಿ ತೆಂಗಿನ ಕಾಯಿ(Coconut)ಬಳಕೆ ಮಾಡುವುದು ಸಹಜ. ಅದರಲ್ಲಿಯೂ ಸಸ್ಯಾಹಾರವಿರಲಿ ಇಲ್ಲವೇ ಮಾಂಸಾಹಾರ ನಳಪಾಕದಲ್ಲಿ ತೆಂಗಿನ ಬಳಕೆ ಮಾಡಲಾಗುತ್ತದೆ. ಆದರೆ, ಹೀಗೆ ಬಳಸುವಾಗ ಚಿಪ್ಪಿನಿಂದ ತೆಂಗಿನ ಕಾಯಿಯನ್ನು(Coconut Husk Pealing) ಸುಲಿಯುವುದೇ ಹೆಚ್ಚಿನವರಿಗೆ ಕಷ್ಟವಾಗುತ್ತದೆ. ನೀವೂ ಕೂಡ ಈ ಸಮಸ್ಯೆ ಎದುರಿಸುತ್ತಿದ್ದೀರಾ?? ಹಾಗಿದ್ರೆ, ಚಿಪ್ಪಿನಿಂದ ತೆಂಗಿನಕಾಯಿಯನ್ನು ಸುಲಭವಾಗಿ (Kitchen Hacks)ಹೊರಗೆ ತೆಗೆಯಲು ಈ ಟಿಪ್ಸ್ ಬಳಸಿ.
# ತೆಂಗಿನಕಾಯಿಯನ್ನು ಒಡೆಯುವ ಮುನ್ನ 30 ರಿಂದ 40 ನಿಮಿಷ ಫ್ರಿಜ್ನಲ್ಲಿಡಬೇಕು. ಆಗ ತೆಂಗಿನ ಕಾಯಿ ಒಡೆಯುತ್ತಿದ್ದ ಹಾಗೇ ಸುಲಭವಾಗಿ ಚಿಪ್ಪಿನಿಂದ ತೆಂಗಿನಕಾಯಿ ಬೇರ್ಪಡುತ್ತದೆ.
# ಒಂದು ವೇಳೆ ನಿಮ್ಮ ಮನೆಯಲ್ಲಿ ಫ್ರಿಜ್ ಇಲ್ಲ ಎಂದಾದರೆ ಕುದಿಯುವ ಬಿಸಿ ನೀರಿನಲ್ಲಿ ತೆಂಗಿನಕಾಯಿಯನ್ನು ಅರ್ಧ ಗಂಟೆ ನೆನೆಸಿಡಬೇಕು. ಹೀಗೆ ಮಾಡುವ ಮೂಲಕ ಚಿಪ್ಪು(Coconut shell)ಮತ್ತು ತೆಂಗಿನಕಾಯಿ ಬೇರ್ಪಡೆಯಾಗಲಿದೆ.
# ಸಮಾರಂಭಗಳಲ್ಲಿ ಈ ರೀತಿ ಫ್ರಿಜ್ ಮತ್ತು ಬಿಸಿನೀರಿನಲ್ಲಿ ತೆಂಗಿನಕಾಯಿ ಇರಿಸಲು ಸಾಧ್ಯವಾಗದು. ಈ ಸಂದರ್ಭ ದಲ್ಲಿ ತೆಂಗಿನಕಾಯಿ ಎರಡು ಸಮ ಭಾಗಗಳಾಗಿ ಒಡೆಯಬೇಕು. ಇದಾದ ಬಳಿಕ, ತೆಂಗಿನಕಾಯಿ ಮಧ್ಯ ಭಾಗದಲ್ಲಿ ಒಣ ಬಟ್ಟೆ ಇಟ್ಟು ಮೇಲಿಂದ ಮಚ್ಚು ಇಲ್ಲವೇ ಕಲ್ಲಿನಿಂದ ಸಮನಾಗಿ ಹೊಡೆದರೆ ತೆಂಗಿನ ಕಾಯಿ ಬೇರೆ ಬೇರೆಯಾಗುತ್ತದೆ.
ಇದಲ್ಲದೇ, ತೆಂಗಿನಕಾಯಿಯ ಮಧ್ಯ ಭಾಗವನ್ನು ನೆಲದ ಮೇಲೆ ಜೋರಾಗಿ ಹೊಡೆದರೆ, ತೆಂಗಿನಕಾಯಿ ಸೀಳು ಬಿಟ್ಟು ಎರಡು ಸಮ ಭಾಗವಾಗಿ ಬೇರೆ ಬೇರೆಯಾಗಲಿದೆ.