Symptoms of Vitamin D Deficiency : ದೇಹದಲ್ಲಿ ಇದೊಂದು ವಿಟಮಿನ್ ಕೊರತೆಯಾದರೆ ಮೂಳೆಗೆ ಕಾದಿದೆ ಅಪಾಯ – ವಿಟಮಿನ್ ಕೊರತೆಯಾದ್ರೆ ಹೇಗೆ ತಿಳಿಯುತ್ತೆ ?!

Helath care symptoms of vitamin d deficiency causes these health issues

Symptoms of Vitamin D Deficiency : ನಮ್ಮ ದೇಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿವೆ. ದೇಹದಲ್ಲಿ ಯಾವುದೇ ಪೋಷಕಾಂಶದ ಕೊರತೆ ಉಂಟಾದರು ಕೂಡ ದೇಹ ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ. ದೇಹದಲ್ಲಿ ವಿಟಮಿನ್ ಡಿ ಕೊರತೆ(Symptoms of Vitamin D Deficiency) ಉಂಟಾದರೆ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಗೊತ್ತಾ??

ಅತ್ಯಂತ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದು ವಿಟಮಿನ್ ಡಿ ಒಂದಾಗಿದ್ದು, ದೇಹವನ್ನು ಆರೋಗ್ಯವಾಗಿಡಲು ವಿಟಮಿನ್ ಡಿ (Vitamin D)ಬಹಳ ಅವಶ್ಯಕವಾಗಿದೆ. ವಿಟಮಿನ್ ಡಿ ಕೊರತೆಯಿಂದ ಮೂಳೆಗಳು, ಸ್ನಾಯುಗಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಈ ಪೋಷಕಾಂಶದ ಕೊರತೆಯ ಲಕ್ಷಣಗಳು ದೇಹದಲ್ಲಿ ಬೇಗನೆ ಕಂಡುಬರುತ್ತದೆ.ವಿಟಮಿನ್ ಡಿ ಕೊರತೆಯನ್ನು ನಿವಾರಿಸಲು, ನಿಮ್ಮ ಆಹಾರ ಕ್ರಮವನ್ನು ಬದಲಾಯಿಸ ಬೇಕು. ಇದಕ್ಕಾಗಿ,ಆಹಾರದಲ್ಲಿ ಮೊಟ್ಟೆ, ಮೀನು, ಹಾಲು, ಚೀಸ್ ನಂತಹ ಸೂಪರ್‌ಫುಡ್‌ಗಳನ್ನು ಸೇರಿಸಬೇಕು.

ವಿಟಮಿನ್ ಡಿ ಕೊರತೆಯಾದಾಗ ಕಾಣಿಸಿಕೊಳ್ಳುವ ಲಕ್ಷಣಗಳು :

* ಕೂದಲು ಉದುರುವಿಕೆ :
ವಿಟಮಿನ್ ಡಿ ಕೊರತೆಯಿಂದ ಅಲೋಪೆಸಿಯಾ ಏರಿಯಾಟಾ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ಕೂದಲು ಉದುರುವಿಕೆಯ ಸಮಸ್ಯೆ ಉಂಟಾಗಬಹುದು. ನೀವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇದಕ್ಕೆ ಕಾರಣ ವಿಟಮಿನ್ ಡಿ ಕೊರತೆಯಾಗಿರಬಹುದು.

* ಮೂಳೆ ನೋವು :
ವಿಟಮಿನ್ ಡಿ ಕೊರತೆಯಿಂದ ಮೂಳೆ ನೋವು ಕಾಣಬಹುದು. ಅಷ್ಟೇ ಅಲ್ಲದೆ, ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲದೆ, ಕ್ಯಾಲ್ಸಿಯಂ ಕಡಿಮೆಯಾಗಬಹುದು. ಮೂಳೆಗಳು ಮತ್ತು ಕೀಲುಗಳಲ್ಲಿ ನೋವಿದ್ದರೆ ಗಮನಿಸಿ,ಅದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು.

ಇದನ್ನು ಓದಿ: Petrol-desel price : ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ !!

* ಚರ್ಮ ರೋಗಗಳಿಗೆ ಕಾರಣ :
ವಿಟಮಿನ್ ಡಿ ಕೊರತೆಯಿಂದ ಚರ್ಮ ರೋಗಗಳು ಉಂಟಾಗ ಬಹುದು. ವಿಟಮಿನ್ ಡಿ ಕೊರತೆಯಿಂದ ಕೆಲವೊಮ್ಮೆ ಚರ್ಮದ ಮೇಲೆ ಕೆಂಪು ದದ್ದುಗಳು ಉಂಟಾಗುತ್ತವೆ. ಇದಲ್ಲದೇ,ತುರಿಕೆ, ಉರಿಯುವುದು, ಶುಷ್ಕತೆಯಂತಹ ರೋಗಗಳು ಕಂಡು ಬರಬಹುದು.

* ದುರ್ಬಲ ರೋಗ ನಿರೋಧಕ ಶಕ್ತಿ :
ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ದುರ್ಬಲ ರೋಗನಿರೋಧಕ ಶಕ್ತಿಯ ಪರಿಣಾಮ ಶೀತ, ಜ್ವರ ಮತ್ತು ಕೆಮ್ಮು ಮುಂತಾದ ರೋಗಗಳು ಕಂಡು ಬರುತ್ತದೆ. ಕೆಲವೊಮ್ಮೆ ವೈರಲ್ ಸೋಂಕು ಕೂಡ. ಕಂಡು ಬರಬಹುದು.

Leave A Reply

Your email address will not be published.