Bigg boss kannada: ಕನ್ನಡ ಬಿಗ್ ಬಾಸ್ ವಿರುದ್ಧ FIR ದಾಖಲು !! ಶೋನಿಂದ ಕಿಚ್ಚ ಸುದೀಪ್ ಹೊರಕ್ಕೆ ?!!

Entertainment news bbk 10 tv show complaint against bigg boss kannada reality show

Bigg boss kannada: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್-10 ಹಲವು ಅಚ್ಚರಿಗೆ ಕಾರಣವಾಗಿದ್ದಲ್ಲದೆ ಈಗೀಗಂತೂ ಹಲವು ವಿವಾದಗಳಿಂದಲೇ ಸುದ್ದಿಯಾಗ್ತಿದೆ. ಆದರೂ ಕೂಡ ಇದನ್ನು ನೋಡುಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆದರೀಗ ಕನ್ನಡ ಬಿಗ್ ಬಾಸ್(Bigg Boss kannada) ವಿರುದ್ಧ ದೂರು ದಾಖಲಾಗಿದ್ದು ಕಿಚ್ಚ ಸುದೀಪ್ ಈ ಶೋನಿಂದ ಹೊರ ಬರುವಂತೆ ಮನವಿ ಮಾಡಲಾಗಿದೆ.

ಹೌದು, ಬಿಗ್ ಬಾಸ್ 10ರ ಮನೆಯೊಳಗೆ ಸ್ಪರ್ಧಿಗಳ ವರ್ತನೆ ವಿರುದ್ಧ ಅಪಸ್ವರವೂ ಕೇಳಿ ಬರುತ್ತಿದೆ. ಈ ಸಂಬಂಧ ದೂರನ್ನು ದಾಖಲು ಮಾಡಲಾಗಿದೆ. ಆದರೀಗ ಬಿಗ್ ಬಾಸ್ ವಿರುದ್ಧವೇ ದೂರು ದಾಖಲಾಗಿದೆ. ಈ ರಿಯಾಲಿಟಿ ಶೋ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಶೋ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲರಾದ ಕೆವಿ ಪ್ರವೀಣ ಎಂಬುವವರು ದೂರು ದಾಖಲಿಸಿದ್ದಾರೆ.

ಅಂದಹಾಗೆ ಕಳೆದ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ರಾಕ್ಷಸರು, ಗಂಧರ್ವರು ಎಂದು ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಎಲ್ಲಾ ಸ್ಪರ್ಧಿಗಳು ಮಾನವೀಯತೆ ಮರೆತು ವರ್ತಿಸಿದರು. ಕೆರಲು ಸ್ಪರ್ಧಿಗಳಿ ತೀರ್ವವಾದ ಅಪಾಯಗಳು ಉಂಟಾದವು. ಬೇಡದ ಪದಗಳು ಬಳಕೆಯಾಗಿ ಚಪ್ಪಲಿಗಳು ಕೂಡ ಕೈಗೆ ಬಂದವು. ಇದೆಲ್ಲದರ ಬಗ್ಗೆ ವೀಕೆಂಡ್ ನಲ್ಲಿ ಕಿಚ್ಚನ ಪಂಚಾಯ್ತಿಯಲ್ಲಿ ಸರಿಯಾದ ಪಾಠವೂ ಆಯಿತು. ಆದರೂ ಈಗ ಈ ಕಾರ್ಯಕ್ರಮವು ತೀರ ನೈತಿಕ ಗುಣಮಟ್ಟವನ್ನು ಕಳೆದುಕೊಂಡಿದೆ. ಅಶ್ಲೀಲ ಪದ ಮತ್ತು ಚಪ್ಪಲಿಯಿಂದ ಹೊಡೆದಾಡುವ ದೃಶ್ಯಗಳು, ಬೆದರಿಕೆ ಹಾಕುತ್ತಿರುವುದು ಸ್ಪರ್ಧಿಗಳ ನಡುವೆ ಬಿತ್ತರಗೊಳ್ಳುತ್ತಿವೆ. ಇದು ಕೌಟುಂಬಿಕ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇಷ್ಟೇ ಅಲ್ಲದೆ ಹಲವರು ಸುದೀಪ್ ಅವರಿಗೆ ಬಿಗ್ ಬಾಸ್ ಶೋ ಯಿಂದ ಹೊರಬರುವಂತೆ ಮನವಿ ಮಾಡಿದ್ದು, ಈ ಕೆಟ್ಟ ಶೋ ನಿಂದ ಸುದೀಪ್ ಸರ್ ಹೊರ ಬನ್ನಿ. ನಿಮ್ಮ ವ್ಯಕ್ತಿತ್ವಕ್ಕೆ ದಕ್ಕೆಯಾಗುತ್ತಿದೆ. ಇಂತಹ ಶೋ ನಡೆಸಿಕೊಡಬೇಡಿ ಅಂತ ಸಾರ್ವಜನಿಕರು, ಅಭಿಮಾನಿಗಳು ಕಿಚ್ಚನಿಗೆ ಮನವಿ ಮಾಡುತ್ತಿದ್ದಾರೆ. ಹಲವರು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಪೋಲೀಸರಿಗೂ ಟ್ಯಾಗ್ ಮಾಡಿದ್ದಾರೆ.

ಚೇತನ ಸೂರ್ಯ ಎಂಬುವವರು ಟ್ವೀಟ್ ಮಾಡಿ ‘ನಾನು ಮತ್ತೆ ಹೇಳ್ತಿದ್ದೀನಿ ದಯವಿಟ್ಟು ಮನೆಗಳಲ್ಲಿ ಸಣ್ಣ ಮಕ್ಕಳು ಇದ್ದರೆ ಈ ಬಿಗ್ ಬಾಸ್ ನೋಡಲೇಬೇಡಿ. ಈ ಹಿಂದಿನ ಸೀಸನ್ ಗಳು ಅದ್ಭುತ, ಇದೊಂದು ಸೀಸನ್ ಹಲವರ ಮನಸ್ಥಿತಿ ಹಾಳು ಮಾಡ್ತಿದೆ. ಬಿಗ್ ಬಾಸ್ ವೇದಿಕೆ ಎಷ್ಟೋ ಜನರ ಕನಸು. ಆದ್ರೆ ಎಲ್ಲೆ ಮೀರಿದ ವರ್ತನೆ ಇದು. ಅಬ್ಬಬ್ಬಾ ಅದೇನು ಜೀವ ಬೆದರಿಕೆ, @BlrCityPolice ಕಣ್ಣಿಡಿ ಎಂದಿದ್ದಾರೆ.

ಇದನ್ನೂ ಓದಿ: Vinod raj: ಅಬ್ಬಬ್ಬಾ.. ಮಗ-ಸೊಸೆಯನ್ನು ಈ ಕಾರಣಕ್ಕಾಗಿ ಲೀಲಾವತಿ ಅವ್ರು ದೂರ ದೂರ ಇಟ್ಟಿದ್ರಂತೆ – ಶಾಕಿಂಗ್ ಹೇಳಿಕೆ ನೀಡಿದ ವಿನೋದ್ ರಾಜ್ !!

2 Comments
  1. MichaelLiemo says

    ventolin prices in canada: Buy Albuterol for nebulizer online – generic ventolin medication
    buy ventolin nz

  2. Josephquees says

    lasix furosemide 40 mg: cheap lasix – lasix furosemide 40 mg

Leave A Reply

Your email address will not be published.