Nonavinakere shree: ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೋ, ಇಲ್ವೋ?! ಡಿಕೆಶಿ ನಂಬೋ ನೊಣವಿನಕೆರೆ ಶ್ರೀಗಳಿಂದಲೇ ಸ್ಫೋಟಕ ಭವಿಷ್ಯ!!
politics news NonaVinakere Shree Shiva Yogeshwara Swamiji prediction about Karnataka CM
Nonavinakere shree: ಡಿಕೆ ಶಿವಕುಮಾರ್(DK Shivkumar) ಅವರು ಮುಖ್ಯಮಂತ್ರಿ ಆಗಬೇಕೆಂಬುದು ಅನೇಕರ ಬಯಕೆ. ಅಲ್ಲದೆ ಮುಂದಿನ ಮುಖ್ಯಮಂತ್ರಿ ಡಿಕೆಶಿ ಅವರೇ ಎಂದು ಹೇಳಲಾಗುತ್ತಿದೆ. ಆದರೀಗ ಅಚ್ಚರಿ ಎಂಬಂತೆ ಡಿಕೆಶಿ ತುಂಬಾ ನಂಬುವ, ಸದಾ ನಡೆದುಕೊಳ್ಳುವ ನೊಣವಿನಕೆರೆ ಶ್ರೀ(Nonavinakere Shree)ಗಳವರೇ ಡಿಕೆಶಿ ಅವರು ಮುಂದಿನ ಮುಖ್ಯಮಂತ್ರಿ ಆಗುತ್ತಾರೋ,, ಇಲ್ವೋ ಎಂಬುದರ ಬಗ್ಗೆ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ಹೌದು, ಮಂಡ್ಯದ (Mandya) ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ನಡೆದ ಶ್ರೀ ಪಟ್ಟಲದಮ್ಮ ದೇವಿಯ ದೀಪೋತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿ ಭಾಗವಹಿಸಿದ್ದ ನೊಣವಿನಕೆರೆಯ ಶ್ರೀ ಕರಿವೃಷಭ ದೇಶಿಕೇಂದ್ರ ಶಿವ ಯೋಗೇಶ್ವರ ಸ್ವಾಮೀಜಿ (Shri Shiva Yogeshwara Swamiji) ಡಿ.ಕೆ ಶಿವಕುಮಾರ್ (DK Sivakumar) ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗ್ತಾರೆ, ಅದಕ್ಕೆ ಎಲ್ಲಾ ಅವಕಾಶಗಳಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಅಲ್ಲದೆ ಬಳಿಕ ಮಾತನಾಡಿದ ಶ್ರೀಗಳು “ಅವರು ಕೂಡ ನಮ್ಮ ಮಠದ ಭಕ್ತರು ಅದಕ್ಕೆ ನಾವು ಕೂಡ ಸಂಕಲ್ಪ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಅವಕಾಶ ಇದೆ. ಮೀಸಲಾತಿ ವಿಚಾರವಾಗಿ ಶಾಸಕರು ಹೋರಾಟ ಮಾಡುತ್ತಾರೆ. ರಾಜಕೀಯ ವ್ಯವಸ್ಥೆಯಲ್ಲಿ ಆ ಹೋರಾಟಕ್ಕೆ ಅವಕಾಶ ಇದೆ. ಎಲ್ಲಾ ಸಮುದಾಯಗಳು ಇನ್ನಷ್ಟು ಹೆಚ್ಚಾಗಿ ಸಂಘಟನೆಯಲ್ಲಿ ಬೆಳೆಯುವವರೆಗೆ ಸರ್ಕಾರ ಮೀಸಲಾತಿ ಕೊಟ್ಟು, ಅವಕಾಶ ಮಾಡಿಕೊಡಬೇಕು” ಎಂದು ಹೇಳಿದರು.
ಇದನ್ನೂ ಓದಿ: Bramhanda guruji: ನಟಿ ಲೀಲಾವತಿ ಕುರಿತು ಯಾರೂ ತಿಳಿದ ಅಚ್ಚರಿ ಸತ್ಯ ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ !!