Ashok shanabhag: ‘ಮೂರು ಮುತ್ತು’ ಖ್ಯಾತಿಯ ಅಶೋಕ್ ಶ್ಯಾನಭಾಗ್ ನಿಧನ !!

Entertainment news mooru Muthu fame drama artist Ashok shanbag passes away

Ashok shanabhag: ಸುಮಾರು ಇಪ್ಪತ್ತಾರು ವರ್ಷಗಳಿಂದ ಸಾವಿರಾರು ಬಾರಿ ಪ್ರದರ್ಶನ ಕಂಡು, ಜನರನ್ನು ರಂಜಿಸಿ, ನಗಗಿಸಿದ ‘ಮೂರು ಮುತ್ತು'(Muru muttu)ನಾಟಕ ಖ್ಯಾತಾಯ ಅಶೋಕ್ ಶಾನಭಾಗ್‌ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ.

 

ಅಶೋಕ್ ಶ್ಯಾನಭಾಗ್‌(Ashok Shanabhag) ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಡಿ. 8ರಂದು ರಾತ್ರಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂರು ಮುತ್ತು ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಶೋಕ್ ಶಾನಭಾಗ್ ಅವರ ಮಾತು ಹಾಗೂ ನಟನೆ ಕಂಡು ವೀಕ್ಷಕರು ಹೊಟ್ಟೆ ಹುಣ್ಣಾಗೊಸುವಷ್ಟು ನಗಿಸುತ್ತಿದ್ದರು.

ಮೂರು ಮುತ್ತು ನಾಟಕ ಮಾತ್ರವಲ್ಲದೇ ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಇನ್ನು ಹಲವಾರು ನಾಟಕಗಳಲ್ಲಿ ಹಾಸ್ಯ ಪಾತ್ರದಲ್ಲಿ ಅಶೋಕ್ ಶಾನಭಾಗ್ ನಟಿಸಿದ್ದರು. ಇನ್ನು ಕಿರುತೆರೆಯ ಜನಪ್ರಿಯ ಶೋ ಆಗಿದ್ದ ಸೃಜನ್‌ ಲೋಕೇಶ್‌ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್‌ನಲ್ಲೂ ಅಶೋಕ್ ಶಾನಭಾಗ್ ಭಾಗವಹಿಸಿದ್ದರು. ಮೃತರ ಅಂತ್ಯ ಸಂಸ್ಕಾರ ಶನಿವಾರ ಬೆಳಗ್ಗೆ ಕುಂದಾಪುರ ದಲ್ಲಿ ನಡೆಯಲಿದೆ.

ಇದನ್ನೂ ಓದಿ: Vartur santosh: ಮತ್ತೊಂದು ವಿವಾವದಕ್ಕೆ ಸಿಲುಕಿದ ವರ್ತೂರು ಸಂತೋಷ್ – ‘ಹಳ್ಳಿಕಾರ್’ ಒಡೆಯನ ಮೇಲೆ ಸಿಡಿದೆದ್ದ ರೈತರು !!

Leave A Reply

Your email address will not be published.