Vartur santosh: ಮತ್ತೊಂದು ವಿವಾವದಕ್ಕೆ ಸಿಲುಕಿದ ವರ್ತೂರು ಸಂತೋಷ್ – ‘ಹಳ್ಳಿಕಾರ್’ ಒಡೆಯನ ಮೇಲೆ ಸಿಡಿದೆದ್ದ ರೈತರು !!
Entertainment news bigg boss kannada season 10 contestant Varthur santhosh in another controversy
Vartur santosh: ಬಿಗ್ ಬಾಸ್ ಮನೆಯಲ್ಲಿರೋ ವರ್ತೂರು ಸಂತೋಷ್ ಅವರು ಹಲವು ಕಾರಣಗಳಿಂದ ಸುದ್ಧಿಯಲ್ಲಿದ್ದಾರೆ. ಹುಲಿ ಉಗುರಿನ ಪ್ರಕರಣದಡಿ ಇಡೀ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಜೈಲಿಗೆ ಹೋಗಿ ಬಂದಿದ್ದಾರೆ. ಆದರೀಗ ಈ ವಿಚಾರ ಎಲ್ಲರಿಂದಲೂ ಮಾಸುವ ಹೊತ್ತಲ್ಲೇ ವರ್ತೂರು ಸಂತೋಷ್(Vartur santosh) ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಅದೂ ಕೂಡ ರೈತರೇ ವರ್ತೂರ್ ಅವರ ಮೇಲೆ ಆಕ್ರೋಶಗೊಂಡಿದ್ದಾರೆ ಎಂಬುದು ಆಶ್ಚರ್ಯ.
ಹೌದು, ಸಂತೋಷ್ ಅವರನ್ನು ‘ಹಳ್ಳಿಕಾರ್’ ಒಡೆಯ ಅನ್ನುವುದು ಎಲ್ಲರಿಗೂ ಗೊತ್ತೇ ಇದೆ. ಈ ಹೇಸರೇ ಇದೀಗ ಸಂತೋಷ್ ಅವರಿಗೆ ಸಂಚಕಾರ ತಂದೊಡ್ಡಿದೆ. ಹೌದು, ಹಳ್ಳಿಕಾರ್ (Hallikar) ಹೆಸರಿಗೆ ಅಪಮಾನ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಹಳ್ಳಿಕಾರ್ ರೈತರು ಸಂತೋಷ್ ಮೇಲೆ ಆಕ್ರೋಶಗೊಂಡಿದ್ದು ತಮ್ಮ ವರ್ಚಸ್ಸಿಗಾಗಿ ಹಳ್ಳಿಕಾರ್ ಹೆಸರು ಸಂತೋಷ್ ಬಳಸಿಕೊಂಡಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.
ಮಂಡ್ಯದಲ್ಲಿ (Mandya) ಜಮಾಯಿಸಿದ್ದ ಹಳ್ಳಿಕಾರ್ ಗೋವು ಸಾಕಾಣಿಕೆ ರೈತರು, ಹಳ್ಳಿಕಾರ್ ತಳಿ ಹೆಸರಿಗೆ ವರ್ತೂರ್ ಸಂತೋಷ್ ರಿಂದ ಅಪಮಾನವಾಗಿದೆ ಎಂದು ರೈತರು ಆರೋಪ ಮಾಡಿದ್ದಾರೆ. ಅಲ್ಲದೆ ಹಳ್ಳಿಕಾರ್ ಕುರಿತು ಚರ್ಚಾಗೋಷ್ಟಿಯನ್ನೇ ಏರ್ಪಡಿಸಿದ್ದು ಬಿಗ್ ಬಾಸ್ ನಿಂದ ಬಂದ ತಕ್ಷಣ ವರ್ತೂರ್ ಸಂತೋಷ್ ಈ ಕುರಿತಂತೆ ಚರ್ಚೆಗೆ ಬರಬೇಕು. ಈ ತಳಿಯ ಕುರಿತಂತೆ ವರ್ತೂರು ಸಂತೋಷ ಸ್ಪಷ್ಟೀಕರಣ ನೀಡಬೇಕು ಮಂಡ್ಯ ರೈತರು ಆಗ್ರಹಿಸಿದ್ದಾರೆ.
ರೈತರ ವಾದ ಏನು?
ಹಳ್ಳಿಕಾರ್ ಹೆಸರು ಒಂದು ಇತಿಹಾಸ ಇರುವಂತಹದ್ದು. ಅಂತಹ ಹೆಸರಿಗೆ ಅಪಮಾನ ಮಾಡುವುದು ಸರಿಯಲ್ಲ. ತಲೆಮಾರಿನಿಂದ ನಮ್ಮ ಹಿರಿಯರು ಹಳ್ಳಿಕಾರ್ ಗೋ ತಳಿ ಬೆಳೆಸಿಕೊಂಡು ಬಂದಿದ್ದಾರೆ. ಹಳ್ಳಿಕಾರ್ ಒಡೆಯ ಎನ್ನುವುದಕ್ಕೆ ಒಂದು ಮಹತ್ವ ಇದೆ. ವರ್ತೂರ್ ಸಂತೋಷ್ ಇತ್ತೀಚೆಗೆ ಬಂದು ಹಳ್ಳಿಕಾರ್ ಒಡೆಯರ್ ಹೆಸರು ಇಟ್ಟುಕೊಳ್ಳೋದು ಸರಿಯಲ್ಲ. ವರ್ತೂರ್ ಸಂತೋಷ್ ಅವರು ಒಬ್ಬ ಹಳ್ಳಿಕಾರ್ ಗೋವು ಸಾಕಾಣಿಕೆದಾರ ಅಷ್ಟೇ. ಅವರಿಗೆ ಅವರೇ ಹಳ್ಳಿಕಾರ್ ಒಡೆಯ ಅನ್ನೋದು ಸರಿಯಲ್ಲ. ಅಲ್ಲದೆ ವರ್ತೂರು ಅವರು ಆ ಹೆಸರನ್ನು ಇನ್ನು ಬಳಸಬಾರದು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Arjuna death matter: ಅರ್ಜುನ ಆನೆ ಸಾವಿನ ವಿಚಾರ- ಬಯಲಾಯ್ತು ಮತ್ತೊಂದು ರೋಚಕ ಸತ್ಯ!! ವೈರಲ್ ಆಯ್ತು ಮಾವುತ ಮಾತಾಡಿದ ಆಡಿಯೋ!!