Old Phone Sell: ಹಳೆಯ ಸ್ಮಾರ್ಟ್‌ಫೋನ್ ಮಾರೋ ಯೋಚನೆ ಉಂಟಾ? ಹಾಗಿದ್ರೆ ಇಲ್ಲಿ ಚಿನ್ನದ ಬೆಲೆಗೆ ಮಾರಾಟ ಮಾಡಿ
Old Phone Sell: ಬಹುತೇಕರು ಆರು ತಿಂಗಳಿಗೊಮ್ಮೆ ಮೊಬೈಲ್ ಬದಲಾಯಿಸುತ್ತಲೇ ಇರುತ್ತಾರೆ. ಹಾಗಂತ ಮೊಬೈಲನ್ನು ಅತಿ ಕಡಿಮೆ ಬೆಲೆಗೆ ಕೂಡ ಮಾರಾಟ ಮಾಡಬೇಡಿ. ಈ ಸ್ಮಾರ್ಟ್‌ಫೋನ್‌ಗೆ ನೀವು ಉತ್ತಮ ಬೆಲೆಯನ್ನು ಪಡೆಯಬಹುದು. ಹೌದು, ನಿಮ್ಮ ಬಳಿ ಹಳೆಯ ಮೊಬೈಲ್ (Old Phone Sell) ಇದ್ದರೆ ಅದು ಯೂಸ್ ಇಲ್ಲವೆಂದು ಮೂಲೆಯಲ್ಲಿ ಇಡಬೇಡಿ. ಉತ್ತಮ ಸ್ಥಿತಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ಸಹ ಅತ್ಯುತ್ತಮ ಬೆಲೆಯನ್ನು ಪಡೆಯುತ್ತವೆ.
ಅದಲ್ಲದೆ ಹಳೆಯ ಮೊಬೈಲ್ ಮಾರಾಟ ಮಾಡಲು ನೀವು ಅಂಗಡಿಗಳಿಗೆ ಅಲೆಯಬೇಕಿಲ್ಲ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡುವುದು ತುಂಬಾ ಸುಲಭ. ಈ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಮಾಹಿತಿಯನ್ನು ಒಮ್ಮೆ ಆ್ಯಡ್ ಮಾಡಿದರೆ, ಅದರ ಬೆಲೆಯನ್ನು ಕೂಡ ಅಂದಾಜು ಮಾಡಬಹುದು. ಸ್ಮಾರ್ಟ್‌ಫೋನ್ ಮಾರಾಟ ಮಾಡಲು ಇರುವ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ವಿವರ ಇಲ್ಲಿದೆ ನೋಡಿ.
Quikr: ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ನೀವು ನಿಮ್ಮ ಸೆಕಂಡ್ ಹ್ಯಾಂಡ್ ಮೊಬೈಲ್ ಬಗ್ಗೆ ಸುಲಭವಾಗಿ ಜಾಹೀರಾತು ಕೊಡಬಹುದು. ಸುರಕ್ಷಿತ ಪಾವತಿ ಗೇಟ್‌ವೇ ಕೂಡ ಇಲ್ಲಿ ಲಭ್ಯವಿದೆ. ಆದ್ದರಿಂದ ನೀವು ಸುಲಭವಾಗಿ ಹಣವನ್ನು ಪಡೆಯಬಹುದು.
OLX: ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಮನೆಯಿಂದಲೇ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಬಹುದು. ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲು ಅನೇಕ ಜನರ ಮೊದಲ ಆಯ್ಕೆ ಒಎಲ್ಎಕ್ಸ್ ಆಗಿದೆ. ಇದರಲ್ಲಿ ಜಾಹೀರಾತಿನ ವಿಧಾನವೂ ಸರಳವಾಗಿದೆ.
ಇದನ್ನು ಓದಿ: 7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್- ವೇತನದಲ್ಲಿ 20, 484 ರೂ ಏರಿಕೆ !! ಹೇಗೆ ಗೊತ್ತಾ?
ಕ್ಯಾಶಿಫೈ: ಇದು ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದೆ. ಇಲ್ಲಿ ಹಳೆಯ ಮೊಬೈಲ್‌ಗಳನ್ನು ಮಾರಾಟ ಮಾಡಬಹುದು. ಈ ವೇದಿಕೆಯಲ್ಲಿ ಗ್ರಾಹಕರು ತಮ್ಮ ಮೊಬೈಲ್‌ಗೆ ಸರಿಯಾದ ಬೆಲೆಯನ್ನು ತಿಳಿದುಕೊಳ್ಳಬಹುದು. ಈ ಪ್ಲಾಟ್‌ಫಾರ್ಮ್ ಉಚಿತ ಪಿಕಪ್ ಅನ್ನು ಕೂಡ ನೀಡುತ್ತದೆ.
Budli.in: ಹಳೆಯ ಫೋನ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡಲು ಇದು ವಿಶೇಷ ವೆಬ್‌ಸೈಟ್ ಆಗಿದೆ. ಬಳಸಿದ ಮೊಬೈಲ್ ಫೋನ್‌ಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ನಿಮ್ಮ ಫೋನ್ಗೆ ಉಚಿತ ಪಿಕಪ್ ಸೇವೆ ಕೂಡ ಲಭ್ಯವಿದೆ.
Cashkar: ಈ ಪ್ಲಾಟ್‌ಫಾರ್ಮ್‌ನಲ್ಲಿ, ಗ್ರಾಹಕರು ಹಳೆಯ ಸ್ಮಾರ್ಟ್‌ಫೋನ್ ಅಥವಾ ಇತರೆ ಯಾವುದೇ ಸಾಧನವನ್ನು ಸುಲಭವಾಗಿ ಮಾರಾಟ ಮಾಡಬಹುದು. ಇದರಲ್ಲಿ ಉತ್ತಮವಾದ ಬೆಲೆಯನ್ನು ಪಡೆಯುತ್ತೀರಿ.
ಅಮೆಜಾನ್-ಫ್ಲಿಪ್ಕಾರ್ಟ್: ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಾದ ಫ್ಲಿಪ್ಕಾರ್ಟ್- ಅಮೆಜಾನ್ ಹಳೆಯ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡುವ ಸೌಲಭ್ಯವನ್ನು ಸಹ ನೀಡುತ್ತವೆ.
ಮುಖ್ಯವಾಗಿ ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಮೊಬೈಲ್‌ನ ಬೆಲೆಯನ್ನು ಪರಿಶೀಲಿಸಿದನಂತರ, ಬ್ರಾಂಡ್, ಮಾದರಿ, ಸ್ಥಿತಿ ಮತ್ತು ಆದ್ಯತೆಗಳ ಆಧಾರದ ಮೇಲೆ ಸ್ಮಾರ್ಟ್‌ಫೋನ್ ಖರೀದಿಸುತ್ತಾರೆ ಎಂಬುದು ನೆನಪಿರಲಿ.