Home latest Inter Caste Marriage: ಅಂತರ್ಜಾತಿ ವಿವಾಹಕ್ಕೆ ಒಪ್ಪಿಗೆ ನೀಡಿದ ಸಿಎಂ!!!

Inter Caste Marriage: ಅಂತರ್ಜಾತಿ ವಿವಾಹಕ್ಕೆ ಒಪ್ಪಿಗೆ ನೀಡಿದ ಸಿಎಂ!!!

Inter Caste Marriage
Image credit: Hindu media

Hindu neighbor gifts plot of land

Hindu neighbour gifts land to Muslim journalist

Inter-Caste Marriage: ಅಂತರ್ಜಾತಿ ವಿವಾಹ(Inter-Caste Marriage) ವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan)ಹೇಳಿದ್ದು ಯುವಕ-ಯುವತಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಲು ಇಚ್ಛಿಸಿ ತೀರ್ಮಾನ ಕೈಗೊಂಡರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇಂತಹ ಸಮಯದಲ್ಲಿ ಯಾವುದೇ ಜಾತಿ ಇಲ್ಲವೇ ಧರ್ಮ ಅಡ್ಡಿಯಾಗುವುದಿಲ್ಲ ಎಂದಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan)ಇದು ಬದಲಾವಣೆಯ ಭಾಗ ಎಂದು ತಿಳಿಸಿದ್ದಾರೆ.

ಈ ರೀತಿಯ ಮದುವೆಗಳಿಗೆ ಮೊದಲಿನಿಂದ ಕೂಡ ವಿರೋಧ ವ್ಯಕ್ತವಾಗುತ್ತಿದೆ. ಕೆಲವೊಮ್ಮೆ ಒಂದು ಕಡೆಯವರು ಮಾತ್ರ ವಿರೋಧ ವ್ಯಕ್ತಪಡಿಸಬಹುದು. ಇನ್ನು ಕೆಲವೊಮ್ಮೆ ಎರಡೂ ಕಡೆಯಿಂದಲೂ ವಿರೋಧವಿರಬಹುದು. ಆದರೆ ಈ ರೀತಿಯ ಮದುವೆಗಳು ನಿಂತಿಲ್ಲ. ಮುಸ್ಲಿಂ ಮುಖಂಡರೊಬ್ಬರು ತಮ್ಮ ಪಕ್ಷದ ಮೇಲೆ ಮಾಡಿರುವ ಆರೋಪದ ಕುರಿತು ಪತ್ರಕರ್ತರ ಪ್ರಶ್ನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೀಗೆ ಉತ್ತರ ನೀಡಿದ್ದಾರೆ.

ಇದನ್ನು ಓದಿ: SBI Recruitment: SBI ಬ್ಯಾಂಕಿನಲ್ಲಿ ಭರ್ಜರಿ ಉದ್ಯೋಗಾವಕಾಶ – ಮಿಸ್ ಮಾಡ್ಲೇಬೇಡಿ ಕೈತುಂಬಾ ಸಂಬಳ ಸಿಗೋ ಈ ಕೆಲ್ಸ!!

ಮುಖ್ಯಮಂತ್ರಿಗಳ ಪ್ರಕಾರ, ಈ ವಿದ್ಯಾರ್ಥಿ ಸಂಘಟನೆಗಳು ಅಂತರ್ಜಾತಿ ವಿವಾಹದ ಬ್ಯೂರೋ ಆಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದು ಸಮಯದೊಂದಿಗೆ ನಡೆಯುತ್ತಿರುವ ಬದಲಾವಣೆಯ ಸೂಚಕವಾಗಿದೆ. ಸರ್ಕಾರ ಇಲ್ಲವೇ ಸಂಸ್ಥೆಗಳು ಈ ರೀತಿಯ ಯಾವುದೇ ಬದಲಾವಣೆಗಾಗಿ ಕಾರ್ಯ ನಡೆಸುತ್ತಿಲ್ಲ. ಈ ರೀತಿಯ ಬದಲಾವಣೆ ನಿಲ್ಲಿಸುತ್ತೇವೆ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಸುನ್ನಿ ಯುವಜನ ಸಂಘದ ಕಾರ್ಯದರ್ಶಿ ನಾಸರ್ ಫೈಝಿ ಅವರು, ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯದ ಎಡ ಸಮ್ಮಿಶ್ರ ಸರ್ಕಾರವು ಅಂತರ್ ಧರ್ಮೀಯ ವಿವಾಹಗಳನ್ನು ಉತ್ತೇಜನ ನೀಡುತ್ತದೆ. ಇದಕ್ಕೆ ನಾಸರ್ ಫೈಝಿ ಎಡಪಕ್ಷಕ್ಕೆ ಸಂಬಂಧಿಸಿದ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳನ್ನು ದೂರಿದ್ದಾರೆ. ಪಕ್ಷದ ಮೇಲಿನ ಈ ಆರೋಪ ನಿರಾಧಾರ ಎಂದು ಮುಖ್ಯಮಂತ್ರಿ ವಿಜಯನ್ ಹೇಳಿದ್ದಾರೆ.

ಇದನ್ನೂ ಓದಿ: Social Media star: ಕಿಂಗ್ ಮೇಕರ್ ದಾಸ ಅರೆಸ್ಟ್ – ಎಡ್ವಟ್ ಆಯ್ತಾ ಆ ಒಂದು ದುಡುಕಿನ ನಿರ್ಧಾರ!!