Eclipse 2024: 2024 ರಲ್ಲಿ ಸಂಭವಿಸಲಿದೆ 4 ಪ್ರಮುಖ ಗ್ರಹಣಗಳು – ಏನೆಲ್ಲಾ ಎಫೆಕ್ಟ್ ಇದೆ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Solar And Lunar Eclipse 2024: ಎಲ್ಲರಿಗೂ ಗೊತ್ತಿರುವ ಹಾಗೆ ಪ್ರತಿ ವರ್ಷ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ(Solar Eclipse 2024)ಸಂಭವಿಸುತ್ತದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋದ ಸಂದರ್ಭ ಚಂದ್ರ ಗ್ರಹಣ(Lunar Eclipse) ಸಂಭವಿಸುತ್ತವೆ. ಇದರಿಂದಾಗಿ ಚಂದ್ರನು ಭೂಮಿಯ ನೆರಳಿನಲ್ಲಿ ಚಲಿಸುತ್ತಾನೆ. ಹೀಗಾಗಿ, ಕೆಲವು ಗ್ರಹಣಗಳು ಕೆಲ ಅಡ್ಡಪರಿಣಾಮಗಳನ್ನು ಬೀರುತ್ತವೆ. ಸೂರ್ಯ ಗ್ರಹಣ ಹಾಗೂ ಚಂದ್ರ ಗ್ರಹಣ ಖಗೋಳ ವಿಜ್ಞಾನದ ಸಾಮಾನ್ಯ ಪ್ರಕ್ರಿಯೆಯಾಗಿದ್ದು, 2024ರಲ್ಲಿ ಕೂಡ ಗ್ರಹಣಗಳಿದ್ದು(Eclipse 2024)ಯಾವಾಗ ಯಾವ ಗ್ರಹಣವಿದೆ ಎಂಬ ಮಾಹಿತಿ ಇಲ್ಲಿದೆ.
ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಗ್ರಹಣದ ಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಇನ್ನು 2024ರಲ್ಲಿ 4 ಗ್ರಹಣಗಳು ನಡೆಯಲಿದ್ದು, 2 ಚಂದ್ರ ಗ್ರಹಣಗಳಾದರೆ ಮತ್ತೆ 2 ಸೂರ್ಯ ಗ್ರಹಣಗಳು ಸಂಭವಿಸಲಿದೆ.2024 ರ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 08 ರಂದು ಸಂಭವಿಸಲಿದ್ದು, ಇದು ಭಾರತದಲ್ಲಿ ಗೋಚರಿಸದು. ಅದೇ ರೀತಿ , ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 02 ರಂದು ಸಂಭವಿಸುತ್ತದೆ.
ಚಂದ್ರಗ್ರಹಣ ಮಾರ್ಚ್ 25 ರ ಸೋಮವಾರ ಸಂಭವಿಸಲಿದೆ ಎನ್ನಲಾಗಿದೆ. 2024 ರ ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ 18, 2024 ಬುಧವಾರದಂದು ನಡೆಯಲಿದೆ. ಅದೇ ರೀತಿ 2ನೇ ಮತ್ತು ಕೊನೆಯ ಗ್ರಹಣ ಸೂರ್ಯಗ್ರಹಣವಾಗಿದ್ದು, ಅಕ್ಟೋಬರ್ 2, 2024 ರಂದು ನಡೆಯಲಿದೆ ಎನ್ನಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024 ರ ಮೊದಲ ಗ್ರಹಣವು ಮಾರ್ಚ್ 25 ರಂದು ನಡೆಯಲಿದ್ದು, ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸದು.