Marriage: ನಡು ರಾತ್ರಿ ಪ್ರಿಯತಮೆ ನೋಡಲು ಬಂದ ಪ್ರಿಯಕರ – ಗ್ರಾಮಸ್ಥರ ಕೈಗೆ ತಗಲಾಕೊಂಡು ಲಾಟ್ರಿ ಹೊಡೆದೇ ಬಿಟ್ಟ !!
Marriage: ಪ್ರೀತಿಯ ಅಮಲಿನಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ನೋಡಲು ಊರಿನ ಬೇಲಿ ಹಾರಿದ್ದಾನೆ. ಆದ್ರೆ ಆತನ ಅದೃಷ್ಟ ಚೆನ್ನಾಗಿತ್ತು ಅನ್ನೋದು ಇಲ್ಲಿ ಸ್ಪಷ್ಟವಾಗಿದೆ. ಹೌದು, ಬಿಹಾರದ ಜಮುಯಿಯಲ್ಲಿ ರಾತ್ರಿಯ ಕತ್ತಲಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ಬಂದ ಪ್ರೇಮಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು ಇಬ್ಬರಿಗೂ ಮದುವೆ (Marriage) ಮಾಡಿಸಿದ್ದಾರೆ.
ಇದೀಗ ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪ್ರಕರಣವು ಜಮುಯಿ ಜಿಲ್ಲೆಯ ಚರ್ಕಪಥರ್ ಪೊಲೀಸ್ ಠಾಣೆ ವ್ಯಾಪ್ತಿಯ ಪನನ್ಮಾ ಗ್ರಾಮದಲ್ಲಿ ನಡೆದಿದ್ದು , ರಾತ್ರಿಯ ಕತ್ತಲೆಯಲ್ಲಿ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಿಶನ್‌ಪುರ ಗ್ರಾಮದ 24 ವರ್ಷದ ಮನೋರಂಜನ್ ಕುಮಾರ್ ತನ್ನ 19 ವರ್ಷದ ಗೆಳತಿ ರಂಜು ಕುಮಾರಿ ಮನೆಗೆ ತಲುಪಿದ್ದ. ಈ ಸುದ್ದಿ ಗ್ರಾಮದ ಜನರಿಗೆ ತಿಳಿದು ಬಂದಿದ್ದು, ಈ ವೇಳೆ ಗ್ರಾಮಸ್ಥರು ಗಲಾಟೆ ಮಾಡಿ ಇಬ್ಬರನ್ನೂ ಹಿಡಿದಿದ್ದಾರೆ. ಗ್ರಾಮಸ್ಥರು ಪ್ರಿಯಕರನನ್ನು ತಮ್ಮ ವಶಕ್ಕೆ ಪಡೆದು ಆತನ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ನಂತರ ಪ್ರೇಮಿಯ ಕುಟುಂಬಸ್ಥರನ್ನು ಸ್ಥಳಕ್ಕೆ ಆಗಮಿಸಿದ್ದಾರೆ.
ನಂತರ ತಡರಾತ್ರಿ ಗ್ರಾಮಸ್ಥರು ತೀರ್ಮಾನ ಕೈಗೊಂಡು ಪಂಡಿತರನ್ನು ಕರೆಸಿ ಮನೆಯ ಅಂಗಳದಲ್ಲಿ ಹಿಂದೂ ಪದ್ಧತಿಯಂತೆ ಇಬ್ಬರಿಗೂ ಮದುವೆ ಮಾಡಿದರು. ಒಟ್ಟಿನಲ್ಲಿ ಅವರಿಬ್ಬರ ಒಪ್ಪಿಗೆ ಮತ್ತು ಆಸೆಯಂತೆ ಮದುವೆಯೂ ಆಯಿತು.
ಇದನ್ನು ಓದಿ: Nandibetta: ಇನ್ಮುಂದೆ ನಂದಿಬೆಟ್ಟ ಬೆಟ್ಟಕ್ಕೆ ಹೋಗುವುದು ಬಹಳ ಸುಲಭ- ಪ್ರವಾಸಿಗರಿಗೆ ಹೊಸ ಸೌಲಭ್ಯ ಘೋಷಿಸಿದ ಸರ್ಕಾರ!!