Nandibetta: ಇನ್ಮುಂದೆ ನಂದಿಬೆಟ್ಟ ಬೆಟ್ಟಕ್ಕೆ ಹೋಗುವುದು ಬಹಳ ಸುಲಭ- ಪ್ರವಾಸಿಗರಿಗೆ ಹೊಸ ಸೌಲಭ್ಯ ಘೋಷಿಸಿದ ಸರ್ಕಾರ!!
Nandibetta: ಇನ್ನೇನು ಹೊಸವರ್ಷಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಪ್ರತಿವರ್ಷ ಹೊಸ ವರ್ಷಾಚಾರಣೆಗೆ ನಂದಿಬೆಟ್ಟಕ್ಕೆ (Nandibetta) ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಈ ಹಿನ್ನೆಲೆ ಇದೀಗ ನಂದಿಬೆಟ್ಟಕ್ಕೆ ಪ್ರವಾಸ ಕೈಗೊಂಡವರಿಗೆ ರೈಲ್ವೇ ಕಡೆಯಿಂದ ಸಿಹಿಸುದ್ದಿ ನೀಡಲಾಗಿದೆ.
ಹೌದು, ನೆಚ್ಚಿನ ಪ್ರವಾಸಿ ತಾಣವಾಗಿರುವ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮಕ್ಕೆ ಇದೇ ಡಿಸೆಂಬರ್ 11 ರಿಂದ ವಿದ್ಯುತ್ ರೈಲು ಆರಂಭಿಸಲು ನೈಋತ್ಯ ರೈಲ್ವೆ ನಿರ್ಧರಿಸಿದ್ದು, ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ವಿಮಾಣ ನಿಲ್ದಾಣ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿರುವ ರೈಲು, ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲುಗಳನ್ನು ವಿಸ್ತರಿಸಲು ಇಲಾಖೆ ನಿರ್ಧರಿಸಿದೆ.
ಇದನ್ನು ಓದಿ: Shakthi yojane: ಕಾಂಗ್ರೆಸ್ ‘ಶಕ್ತಿ ಯೋಜನೆ’ಗೆ ಬಿಗ್ ಶಾಕ್- ರಾಜ್ಯದ್ಯಂತ ಹಬ್ಬುತ್ತಾ ಈ ಕಿಚ್ಚು !!
ಸದ್ಯ 6531/06532 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ – ಕಂಟೋನ್ಮೆಂಟ್, 06535/06583 ಬೆಂಗಳೂರು, ಕಂಟೋನ್ಮೆಂಟ್ – ಚಿಕ್ಕಬಳ್ಳಾಪುರ, 06593/06594 ಯಶವಂತಪುರ – ಚಿಕ್ಕಬಳ್ಳಾಪುರ – ಯಶವಂತಪುರ ರೈಲುಗಳು ಸಂಚರಿಸಲಿವೆ.
ಅಲ್ಲದೇ ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯನ್ನು ವೀಕ್ಷಣೆ ಮಾಡಲು ವಿದ್ಯಾರ್ಥಿಗಳು ಸೇರಿದಂತೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ. ಈ ಹಿನ್ನೆಲೆ ಚಿಕ್ಕಬಳ್ಳಾಪುರಕ್ಕೆ ರೈಲು ಸೇವೆಗಳನ್ನು ವಿಸ್ತರಿಸುವುದರಿಂದ ಪ್ರಯೋಜನವಾಗಲಿದೆ.