Water Heater: ಚಳಿಗಾಲದಲ್ಲಿ ಗೀಸರ್ ನಲ್ಲಿ ಇಷ್ಟಿರಬೇಕು ಟೆಂಪರೇಚರ್ – ನೀರಲ್ಲಿರೋ ಬ್ಯಾಕ್ಟೀರಿಯಾವೆಲ್ಲ ಸಾಯುತ್ತೆ !!

Tech news must set geyser temperature at winter

Water Heater: ಚಳಿಗಾಲದಲ್ಲಿ ಗೀಸರ್ ನೀರು ಹೆಚ್ಚಾಗಿ ತಣ್ಣಗಿರುತ್ತದೆ ಎಂದು ವಿದ್ಯುತ್ ಉಳಿಸುವ ನಿಟ್ಟಿನಲ್ಲಿ ಗೀಸರ್ ನ(Water Heater) ತಾಪಮಾನವನ್ನು ಕಡಿಮೆ ಮಾಡುವ ಅಭ್ಯಾಸ ಹೆಚ್ಚಿನವರಿಗೆ ಇದೆ.ಆದರೆ, ಈ ಅಭ್ಯಾಸದಿಂದ ಗೀಸರ್ ನೀರಿನಲ್ಲಿ ಬ್ಯಾ ಕ್ಕ್ಟೀರಿಯಾ (bacteria)ಹಾಗೂ ವೈರಸ್‌ಗಳ(Virus)ಅಪಾಯ ಹೆಚ್ಚಾಗುವ ಸಾಧ್ಯತೆಗಳಿವೆ. ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಅನೇಕ ರೀತಿಯ ಕಾಯಿಲೆ ಉಂಟು ಮಾಡುವ ಸಾಧ್ಯತೆಯಿದೆ.

ಗೀಸರ್ ನೀರು ವಿಶೇಷ ರೀತಿಯ ಬ್ಯಾಕ್ಟೀರಿಯಾವನ್ನು ಒಳಗೊಂಡಿದ್ದು, ಇದನ್ನು ಲೀಜಿಯೋನೆಲ್ಲಾ ಎಂದು ಕರೆಯಲಾಗುತ್ತದೆ. ಚಳಿಗಾಲದಲ್ಲಿ ಹಾಗೂ ಗೀಸರ್ ನೀರು 50 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿದ್ದರೆ ಈ ಬ್ಯಾಕ್ಟೀರಿಯಾ ವೇಗವಾಗಿ ಬೆಳೆಯುತ್ತದೆ. ಗೀಸರ್ ನೀರಿನಲ್ಲಿ ಬೆಳೆಯುತ್ತದಂತೆ. ಚಳಿಗಾಲದಲ್ಲಿ ಗೀಸರ್ ತಾಪಮಾನವನ್ನು 60 ರಿಂದ 65 ಡಿಗ್ರಿಗಳಲ್ಲಿ ಇಡಬೇಕು. ಇದು ಲೀಜಿಯೋನೆಲ್ಲಾ ಬ್ಯಾಕ್ಟೀರಿಯಾದ ಬೆಳವಣಿಗೆ ಆಗುವುದನ್ನು ತಪ್ಪಿಸುತ್ತದೆ. ಬೇಸಿಗೆಯಲ್ಲಿ, ಗೀಸರ್ ತಾಪಮಾನವನ್ನು 50 ರಿಂದ 55 ಡಿಗ್ರಿಗಳಲ್ಲಿ ಇರಿಸಬಹುದಾಗಿದೆ. ಆದರೆ, ಗೀಸರ್ 70-75 ಡಿಗ್ರಿಗಿಂತ ಹೆಚ್ಚು ತಾಪಮಾನದಲ್ಲಿ ಕೆಲಸ ಮಾಡಿದರೆ ಇದು ಗೀಸರ್‌ನ ಟ್ಯಾಂಕ್ ಮತ್ತು ಪೈಪ್‌ಗಳಿಗೆ ಹಾನಿಯನ್ನು ಉಂಟು ಮಾಡುವ ಸಾಧ್ಯತೆಯಿದೆ.

ಇದನ್ನು ಓದಿ: Dimple Prediction: ಹುಡುಗಿಯರೇ ನಿಮ್ಮ ಕೆನ್ನೆ ಮೇಲೂ ಈ ರೀತಿಯ ಡಿಂಪಲ್ ಬೀಳುತ್ತಾ ?! ಹಾಗಿದ್ರೆ ಇಲ್ಲಿದೆ ನೋಡಿ ನಿಮ್ಮ ಭವಿಷ್ಯ

ಕೆನಡಾದಲ್ಲಿ ಲೀಜಿಯೋನೆಲ್ಲಾ ಪ್ರಕರಣಗಳು2000 ರ ದಶಕದ ಹೆಚ್ಚಾಯಿತಂತೆ. ಈ ಕಾಯಿಲೆಯ ಪರಿಣಾಮ ಅನೇಕ ಮಂದಿ ಮೃತಪಟ್ಟರು. ಈ ಸಮಸ್ಯೆಯನ್ನು ಗಮನದಲ್ಲಿರಿಸಿ, ಕೆನಡಾ ಸರ್ಕಾರವು ‘ಸೇಫ್ ಕಿಡ್ಸ್ ಕೆನಡಾ ಅಭಿಯಾನ’ವನ್ನು ಪ್ರಾರಂಭ ಮಾಡಿದೆ. ಮನೆಗಳಲ್ಲಿ ಬಳಸುವ ನೀರಿನ ತಾಪಮಾನವನ್ನು ಕಡಿಮೆ ಮಾಡದಂತೆ ಜನರಿಗೆ ಅರಿವು ಮೂಡಿಸಿದೆ. ಮನೆಗಳಲ್ಲಿ ಗೀಸರ್ ನೀರಿನ ತಾಪಮಾನವು 49 ರಿಂದ 60 ಡಿಗ್ರಿಗಳ ನಡುವೆ ಇರಿಸಿದರೆ ಲೀಜಿಯೋನೆಲ್ಲಾ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಬಹುದಾಗಿದೆ.

Leave A Reply

Your email address will not be published.