Dimple Prediction: ಹುಡುಗಿಯರೇ ನಿಮ್ಮ ಕೆನ್ನೆ ಮೇಲೂ ಈ ರೀತಿಯ ಡಿಂಪಲ್ ಬೀಳುತ್ತಾ ?! ಹಾಗಿದ್ರೆ ಇಲ್ಲಿದೆ ನೋಡಿ ನಿಮ್ಮ ಭವಿಷ್ಯ
Dimple Prediction: ಸಾಮಾನ್ಯವಾಗಿ ಕೆಲವರು ನಗುವಾಗ ಕೆನ್ನೆಯಲ್ಲಿ ಡಿಂಪಲ್’ಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಕೆಲವೇ ಜನರ ಕೆನ್ನೆಗಳಲ್ಲಿ ಡಿಂಪಲ್ ಕಾಣಿಸಿಕೊಳ್ಳುತ್ತದೆ. ಈ ಡಿಂಪಲ್ ಎರಡೂ ಕೆನ್ನೆಗಳಲ್ಲಿ ಇರುತ್ತದೆ. ಯಾರಿಗೇ ಆಗಲಿ ಕೆನ್ನೆಗಳಲ್ಲಿನ ಡಿಂಪಲ್’ಳು ಅದ್ಭುತವಾದ ಸೌಂದರ್ಯವನ್ನು ನೀಡುತ್ತವೆ. ಆದರೆ ಕೆನ್ನೆಗಳಲ್ಲಿನ ಈ ಡಿಂಪಲ್’ಗಳು ನಮ್ಮ ಜೀವನ ಮತ್ತು ಭವಿಷ್ಯದ ಬಗ್ಗೆ ಅನೇಕ ರಹಸ್ಯಗಳನ್ನು ಹೇಳುತ್ತವೆ.
ಹೌದು, ಕೆನ್ನೆಗಳಲ್ಲಿನ ಡಿಂಪಲ್’ಗಳು ಸಹ ವ್ಯಕ್ತಿಗೆ ಬಹಳ ಅದೃಷ್ಟ. ಶಾಸ್ತ್ರಗಳ ಪ್ರಕಾರ (Dimple Prediction) , ಕೆನ್ನೆಯ ಮೇಲೆ ಡಿಂಪಲ್ ಇರುವವರು ಗುಣದಲ್ಲಿ ಸೌಮ್ಯ ಮತ್ತು ಸೂಕ್ಷ್ಮ ಸ್ವಭಾವದವರು. ಈ ಜನರು ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ ಎನ್ನಲಾಗುತ್ತದೆ.
ಇದನ್ನು ಓದಿ: Skin Care: ಈ ಆಹಾರಗಳ ಸೇವನೆ ರೂಡಿಸಿಸಿಕೊಳ್ಳಿ – ಕೆಲವೇ ದಿನಗಳಲ್ಲಿ ಮುಖದ ಸೌಂದರ್ಯ ಹೇಗೆ ಹೆಚ್ಚುತ್ತೆ ನೋಡಿ
ಇನ್ನು ನಗುವಾಗ ಕೆನ್ನೆಯ ಮೇಲೆ ಡಿಂಪಲ್ ಇರುವವರು ಅತ್ಯಂತ ಸಂತೋಷದಾಯಕ ಮತ್ತು ಅದ್ಭುತವಾದ ದಾಂಪತ್ಯ ಜೀವನವನ್ನು ನಡೆಸುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಕೆನ್ನೆಗಳಲ್ಲಿನ ಡಿಂಪಲ್ಗಳು ವಿಶೇಷವಾಗಿ ಹುಡುಗಿಯರಿಗೆ ತುಂಬಾ ಒಳ್ಳೆಯದು. ಡಿಂಪಲ್ ಇರುವ ಹುಡುಗಿಯರು ತಮ್ಮ ಗಂಡಂದಿರೊಂದಿಗೆ ತುಂಬಾ ಸಂತೋಷದ ಜೀವನವನ್ನು ನಡೆಸುತ್ತಾರೆ. ಆದರೆ, ಡಿಂಪಲ್’ಗಳ ಸಮಸ್ಯೆಯೂ ಇದೆ. ಕೆನ್ನೆಯಲ್ಲಿ ಡಿಂಪಲ್ ಇರುವ ಹುಡುಗಿಯರಿಗೆ ಅತ್ತೆಯಿಂದ ಖುಷಿ ಸಿಗುವುದಿಲ್ಲ ಎನ್ನುತ್ತಾರೆ.
ಇನ್ನು ಡಿಂಪಲ್’ಗಳನ್ನು ಸಾಮಾನ್ಯವಾಗಿ ಆನುವಂಶಿಕವೆಂದು ಪರಿಗಣಿಸಲಾಗುತ್ತದೆ. ಆದರೆ ಡಿಂಪಲ್ ಇರುವವರ ಮಕ್ಕಳಿಗೂ ಕೆನ್ನೆಯಲ್ಲಿ ಡಿಂಪಲ್ ಬರುತ್ತೆ ಅಂತಲ್ಲ. ಕೆನ್ನೆಯ ಸ್ನಾಯುಗಳು ಇತರರಿಗಿಂತ ಚಿಕ್ಕದಾಗಿರುವ ಜನರು ತಮ್ಮ ಕೆನ್ನೆಗಳಲ್ಲಿ ಡಿಂಪಲ್ಗಳನ್ನು ಹೊಂದಿರುತ್ತಾರೆ. ಡಿಂಪಲ್‌ಗಳಿಗೆ ಕಾರಣವಾದ ಕೆನ್ನೆಯ ಸ್ನಾಯುವನ್ನು ಜೈಗೋಮ್ಯಾಟಿಕಸ್ ಎಂದು ಕರೆಯಲಾಗುತ್ತದೆ.