Shock For Car Customers: ಕಾರು ಖರೀದಿ ಕನಸು ಕಂಡವರಿಗೆ ಭಾರೀ ದೊಡ್ಡ ಆಘಾತ !! ಜನವರಿ 1 ರಿಂದ ಈ ಕಂಪೆನಿ ಕಾರುಗಳ ಬೆಲೆಯಲ್ಲಿ ಭಾರೀ ಏರಿಕೆ

Honda Cars India: ಟಾಟಾ ಮತ್ತು ಮಾರುತಿ ಕಾರ್ ಕಂಪನಿಗಳ ಬೆಲೆ ಏರಿಕೆ ಬಳಿಕ ಇದೀಗ ಜಪಾನಿನ ಕಾರು ತಯಾರಕ ಕಂಪನಿ ಗ್ರಾಹಕರಿಗೆ ಬಿಗ್ ಶಾಕ್ (Shock for customers)ನೀಡಿದೆ. ಹೊಸ ವರ್ಷದಿಂದ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದೆ. ಹೋಂಡಾ ಕಾರ್ಸ್ ಇಂಡಿಯಾ (Honda Cars India)ಜನವರಿ 2024ರಿಂದ ಭಾರತದಲ್ಲಿ ತನ್ನ ಸಂಪೂರ್ಣ ಶ್ರೇಣಿಯ ಪ್ರಯಾಣಿಕ ವಾಹನಗಳ ಬೆಲೆ ಏರಿಕೆಯಾಗುವ ಬಗ್ಗೆ ಮಾಹಿತಿ ನೀಡಿದೆ.

ಉತ್ಪಾದನಾ ವೆಚ್ಚಗಳು ದುಬಾರಿಯಾಗಿರುವ ಹಿನ್ನೆಲೆ ಹೋಂಡಾ ಕಾರ್ಸ್ ಇಂಡಿಯಾ(Honda Cars India) ಬೆಲೆ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಂಡಿದೆ. ಜನವರಿ 2024 ರಿಂದ ಟಾಟಾ ಮೋಟಾರ್ಸ್, ಮರ್ಸಿಡಿಸ್-ಬೆನ್ಜ್ ಇಂಡಿಯಾ, ಮಾರುತಿ ಸುಜುಕಿ, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಆಡಿ ಇಂಡಿಯಾ ಕೂಡ ತಮ್ಮ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ.

ಇದನ್ನು ಓದಿ: Fixed Deposit Rates: FD ಇಡುವವರಿಗೆ ಮುಖ್ಯ ಮಾಹಿತಿ- ದುಪ್ಪಟ್ಟು ಬಡ್ಡಿ ನೀಡುತ್ತೆ ನೋಡಿ ಈ ಬ್ಯಾಂಕ್!!

Leave A Reply

Your email address will not be published.