Bhavani Revanna: ಭವಾನಿ ರೇವಣ್ಣರ ಐಷಾರಾಮಿ ಕಾರಿಗೆ ಗುದ್ದಿದ್ದ ಬೈಕ್ ಸವಾರ – ಕಾರಿಂದ ಹೊರಬಂದ ಭವಾನಿ ಮಾತು ಕೇಳಿ ಶಾಕ್ ಆದ ಜನ

Bhavani Revanna: ಮೈಸೂರು ಜಿಲ್ಲೆ ಸಾಲಿಗ್ರಾಮ ಸಮೀಪ ಭವಾನಿ ರೇವಣ್ಣ(Bhavani Revanna) ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಎದುರಿನಿಂದ ಬಂದ ಬೈಕ್ ಸವಾರ(Car Accident)ಬಲಭಾಗದಿಂದ ಬಂದು ಡಿಕ್ಕಿ ಹೊಡೆದ ಘಟನೆ ಭಾನುವಾರ ನಡೆದಿದೆ ಎನ್ನಲಾಗಿದೆ. ಈ ಅವಘಡದ ಪರಿಣಾಮ ಭವಾನಿ ರೇವಣ್ಣ ಅವರ ಕಾರ್ ಮುಂಭಾಗಕ್ಕೆ ಹಾನಿಯಾಗಿದೆ. ಇದರಿಂದ ಭವಾನಿ ರೇವಣ್ಣ ಕೋಪಗೊಂಡು ಕಾರ್ ನಿಂದ ಕೆಳಗಿಳಿದು ಬೈಕ್ ಸವಾರನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಮೈಸೂರಿನಲ್ಲಿ ಬೈಕ್ ನಲ್ಲಿ ಬಂದು ಕಾರ್ ಗೆ ಡಿಕ್ಕಿ ಹೊಡೆದ ವ್ಯಕ್ತಿಗೆ ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ (Bhavani Revanna)ಕುಪಿತರಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೆ ಅಲ್ಲದೇ, ಅವಾಚ್ಯ ಪದಗಳಿಂದ ಬೈಕ್‌ ಸವಾರನನ್ನು (Bike Rider)ಹಿಗ್ಗ ಮುಗ್ಗ ಬೈದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media)ವೈರಲ್ ಆಗಿದೆ.

” ದೇಶ ಮುಳುಗಿ ಹೋಗಿತ್ತಾ ಬಲಗಡೆಯಿಂದ ಬಂದು ಗುದ್ದಿದಿಯಲ್ಲ. ಸಾಯೋಕೆ ನನ್ನ ಒಂದೂವರೆ ಕೋಟಿ ಕಾರೇ ಬೇಕಾಗಿತ್ತಾ?? ಯಾವುದಾದರೂ ಬಸ್ ಗೆ ಹೋಗಿ ಸಾಯಲು ಆಗಲ್ವಾ? ಸುಟ್ಟು ಹಾಕ್ರೋ ಈ ಗಾಡಿನ ಎಂದು ಬೈಕ್ ಸವಾರನನ್ನು ಭವಾನಿ ರೇವಣ್ಣ ಕೋಪಗೊಂಡು ಹಿಗ್ಗ ಮುಗ್ಗ ಬೈದಿದ್ದಾರೆ. ಈ ಸಂದರ್ಭ ಅಲ್ಲಿದ್ದವರು ಸಮಾಧಾನಪಡಿಸಲು ಮುಂದಾಗಿದ್ದು, ಗಾಡಿ ರಿಪೇರಿಗೆ 50 ಲಕ್ಷ ನೀವು ಕೊಡುವ ಹಾಗಿದ್ದರೆ ನ್ಯಾಯ ತೀರ್ಮಾನ ಮಾಡುವುದಕ್ಕೆ ಮುಂದೆ ಬನ್ನಿ” ಎಂದು ಅವರನ್ನು ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ

ಅಷ್ಟೆ ಅಲ್ಲದೇ, ಭವಾನಿ ರೇವಣ್ಣ, ಬೈಕ್ ಸವಾರ ಸತ್ತು ಹೋಗುವ ಬಗ್ಗೆ ಸಣ್ಣ ಯೋಚನೆ ಕೂಡ ಮಾಡದೇ ಒಂದೂವರೆ ಕೋಟಿ ರೂಪಾಯಿ ಗಾಡಿ ಡ್ಯಾಮೇಜ್ ಆಗಿದೆ ಯಾರು ಕಟ್ಟಿಕೊಡುತ್ತಾರೆ ಎಂದು ಕೂಗಾಡಿದ್ದಾರೆ. ಸದ್ಯ, ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಸಿಪಿಐ ಜಿ. ಕೃಷ್ಣರಾಜು ಭೇಟಿ ನೀಡಿದ್ದಾರೆ. ಬೈಕ್ ಸವಾರ ಶಿವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ಇದನ್ನು ಓದಿ: Govt Scheme For Farmers: ರೈತರಿಗೆ ಹೊಸ ಯೋಜನೆ ಘೋಷಣೆ- ಪ್ರತೀ ತಿಂಗಳು ಸಿಗುತ್ತೆ 3,000 !! ಬೇಗ ಹೀಗೆ ಅರ್ಜಿ ಹಾಕಿ

Leave A Reply

Your email address will not be published.