Govt Scheme For Farmers: ರೈತರಿಗೆ ಹೊಸ ಯೋಜನೆ ಘೋಷಣೆ- ಪ್ರತೀ ತಿಂಗಳು ಸಿಗುತ್ತೆ 3,000 !! ಬೇಗ ಹೀಗೆ ಅರ್ಜಿ ಹಾಕಿ

Govt Scheme for Farmers: ಕೇಂದ್ರ ಸರ್ಕಾರ(Central Government)ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು(Pension Scheme) ಜಾರಿಗೆ ತಂದಿದೆ. ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಮಂದನ್ ಯೋಜನೆಯನ್ನು (Govt Scheme for Farmers)ಪ್ರಾರಂಭಿಸಿದ್ದು, ಈ ಯೋಜನೆಯಡಿ ರೈತರಿಗೆ ಮಾಸಿಕ 3 ಸಾವಿರ ರೂಪಾಯಿ ಪಿಂಚಣಿ ಸಿಗಲಿದೆ.

ನಿಮ್ಮ ವಯಸ್ಸು 18 ರಿಂದ 40 ವರ್ಷ ಆಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗುತ್ತಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರು ಎರಡು ಹೆಕ್ಟೇರ್ ಭೂಮಿ ಹೊಂದಿರಬೇಕು. ಈ ಯೋಜನೆಗೆ ಮನೆಯಲ್ಲಿ ಕುಳಿತು ಆನ್ಲೈನ್ ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದು. ಮೊದಲು maandhan.in ವೆಬ್ಸೈಟ್ ಹೋಗಿ ಸ್ವಯಂ ನೋಂದಣಿ ಮಾಡಬೇಕು. ಇದಾದ ಬಳಿಕ ಮೊಬೈಲ್ ಸಂಖ್ಯೆಗೆ OTP ಬರಲಿದ್ದು, ಇದಾದ ಬಳಿಕ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ರೈತರು ಕುಟುಂಬದ ವಾರ್ಷಿಕ ಆದಾಯ, ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕಾಗುತ್ತದೆ.ಈ ಎಲ್ಲಾ ದಾಖಲೆಗಳ ಜೊತೆಗೆ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿ ನೀಡಬೇಕು. ಅರ್ಜಿ ಭರ್ತಿ ಮಾಡುವ ಸಂದರ್ಭ ಕಡ್ಡಾಯವಾಗಿ ಆಧಾರ್ ಸಂಖ್ಯೆ ನಮೂದಿಸಿದ ನಂತರ ನಿಮಗೆ ಪಿಂಚಣಿ ಖಾತೆಯ ನಂಬರ್ ನೀಡಲಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ನಿಮ್ಮ ವಯಸ್ಸು 18 ಆಗಿದ್ದಲ್ಲಿ 55ರೂಪಾಯಿ ಠೇವಣಿ ಇಡಬೇಕು. ಒಂದು ವೇಳೆ, 30 ವರ್ಷದವರಾಗಿದ್ದರೆ 110 ರೂ ಮತ್ತು 40 ಆಗಿದ್ದಲ್ಲಿ 200 ರೂಪಾಯಿ ಠೇವಣಿ ಇರಿಸಬೇಕಾಗುತ್ತದೆ. 60 ವರ್ಷದ ನಂತರ ರೈತರು ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ರೈತರು ವೃದ್ಯಾಪದಲ್ಲಿ ಆರ್ಥಿಕ ಲಾಭ ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯಡಿ ಮಾಸಿಕ ಮೂರು ಸಾವಿರ ರೂಪಾಯಿ ಒದಗಿಸಲಾಗಿ, ವಾರ್ಷಿಕವಾಗಿ ಇದು 36 ಸಾವಿರ ರೂಪಾಯಿ ಸಿಗಲಿದೆ.

ಇದನ್ನು ಓದಿ: Cyclone ಎಫೆಕ್ಟ್, ರಾಜ್ಯದಲ್ಲಿ ಇನ್ನೆರಡು ದಿನ ಭಾರೀ ಮಳೆ, ಕೆಲವೆಡೆ ಬಿರುಗಾಳಿ ಕೂಡಾ ಸಾಧ್ಯತೆ !

Leave A Reply

Your email address will not be published.