Shocking news: ಉತ್ತರ ಕಾಶಿ ಸುರಂಗದಿಂದ ಕಾರ್ಮಿಕರು ಹೊರ ಬರುತ್ತಿದ್ದಂತೆ ನಡೆದೇ ಹೋಯ್ತು ಹೃದಯವಿದ್ರಾವಕ ಘಟನೆ – ಬಹಳ ಹೊತ್ತು ಉಳಿಯಲಿಲ್ಲ ಈ ಕುಟುಂಬದ ಸಂಭ್ರಮ !!

Uttar khand news Uttarkashi tunel workers father dies hours before rescue

Uttarkashi tunel workers: ಉತ್ತರಾಖಂಡ ರಾಜ್ಯದ ಉತ್ತರಕಾಶಿ(Uttara kashi) ಜಿಲ್ಲೆಯ ಸಿಲ್ಕ್ಯಾರಾದ ಸುರಂಗದಲ್ಲಿ ಕಳೆದ 17 ದಿನಗಳಿಂದ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು (Uttarkashi tunel workers) ಯಶಸ್ವಿಯಾಗಿ ಹೊರ ಕರೆತದಿಂದಿದ್ದು ಭಾರತದ ಸಾಧನೆಗೆ ಇಡೀ ವಿಶ್ವವೇ ಕೊಂಡಾಡಿದೆ. ಕಾರ್ಮಿಕರ ಸಂಭ್ರಮ ಮುಗಿಲುಮುಟ್ಟಿದೆ. ಆದರೆ ಸುರಂಗದಿಂದ ಎಲ್ಲಾ ಕಾರ್ಮಿಕರು ಹೊರ ಬರುತ್ತಿದ್ದಂತೆ ಹೃದಯವಿದ್ರಾವಕ ಘಟನೆಯೊಂದು ನಡೆದುಬಿಟ್ಟಿದೆ.

41 ಕಾರ್ಮಿಕರರು ಕುಸಿದ ಸುರಂಗದಿಂದ ಪ್ರಾಣಾಪಾಯದಿಂದ ಹೊರಬರುತ್ತಿದ್ದಂತೆ ಎಲ್ಲಾ ಕುಟುಂಬಗಳು ಸಂಭ್ರಮವನ್ನಾಚರಿಸಿವೆ. ಆದರೆ ಈ 41 ಕಾರ್ಮಿಕರಲ್ಲಿ ಒಬ್ಬ ಕಾರ್ಮಿಕನ ಮನೆಯಲ್ಲಿ ಈ ಸಂಭ್ರಮ ತುಂಬಾ ಹೊತ್ತು ಉಳಿಯಲಿಲ್ಲ. ಯಾಕೆಂದರೆ ಜಾರ್ಖಂಡ್‌ನ ನಿವಾಸಿ ಬಕ್ತು ಮುರ್ಮು ಅವರ ತಂದೆ, ಮಗ ಸುರಂಗದಿಂದ ಹೊರಬಂದ ಕೆಲವೇ ಗಂಟೆಗಳಲ್ಲಿ ನಿಧನರಾಗಿದ್ದಾರೆ.

ಹೌದು, ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತ ಘಟನೆಯಲ್ಲಿ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರುವ ಬೃಹತ್ ಸಾಹಸಮಯ ಕಾರ್ಯಾಚರಣೆ ಫಲ ಕೊಟ್ಟಿತು. ಜಾರ್ಖಂಡ್‌ನ ನಿವಾಸಿ ಬಕ್ತು ಮುರ್ಮು ಕೂಡ ಸುರಕ್ಷಿತವಾಗೇ ಹೊರ ಬಂದರು. ಆದರೆ ಅವರ 70 ವರ್ಷದ ತಂದೆ ಬರ್ಸಾ ಮುರ್ಮು ಈ ಸಂಭ್ರಮವನ್ನಾಚರಿಸುವ ಮೊದಲೇ ಮಗ ಸುರಂಗದಿಂದ ಹೊರಬಂದ ಕೆಲವೇ ಗಂಟೆಗಳಲ್ಲಿ ತನ್ನ ಮಗ ಸುರಂಗದಲ್ಲಿ ಸಿಲುಕಿಕೊಂಡಿದ್ದಾನೆ ಎಂಬ ಆತಂಕದಿಂದ ಸಾವನ್ನಪ್ಪಿದ್ದಾರೆ

ಅಂದಹಾಗೆ ಮಂಚದ ಮೇಲೆ ಕುಳಿತಿದ್ದಾಗಲೇ ಪ್ರಾಣ ಬಿಟ್ಟರು ನವೆಂಬರ್ 12 ರಂದು ಸುರಂಗ ಕುಸಿತದ ಸುದ್ದಿ ಕೇಳಿದ ನಂತರ ಮುರ್ಮು ಅವರು ತಮ್ಮ ಮಗ ಬಕ್ತು ಬಗ್ಗೆ ಚಿಂತಿತರಾಗಿದ್ದರು ಎಂದು ಬಕ್ತು ಮುರ್ಮು ಅವರ ಕುಟುಂಬ ಸದಸ್ಯರು ಬುಧವಾರ ಹೇಳಿದ್ದಾರೆ. ವೈದ್ಯರು ಕೂಡ ಇವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Plight of Nut Growers : ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್- ಗಾಯದ ಮೇಲೆ ಬರೆ ಎಳೆದೇ ಬಿಟ್ಟ ಸರ್ಕಾರ !!

Leave A Reply

Your email address will not be published.