December New Rule Changes: ಜನಸಾಮಾನ್ಯರಿಗೆ ಮುಖ್ಯ ಮಾಹಿತಿ- ಡಿಸೆಂಬರ್ ನಲ್ಲಿ ತಪ್ಪದೇ ಈ ಕೆಲಸಗಳನ್ನು ಮಾಡಿ, ಇಲ್ಲಾಂದ್ರೆ ನಿಮಗೆ ಸಿಗಲ್ಲ ಸರ್ಕಾರಿ ಸವಲತ್ತು!!

Business news financial new rule changes complete these 4 important works in December

December New Rule Changes: ವರ್ಷದ ಕೊನೆಯ ತಿಂಗಳು ಡಿಸೆಂಬರ್ ಈಗಾಗಲೇ ಆರಂಭವಾಗಿದ್ದು, ಆಧಾರ್ ಕಾರ್ಡ್ ನವೀಕರಣ ಮತ್ತು ಮ್ಯೂಚುವಲ್ ಫಂಡ್ ನಾಮನಿರ್ದೇಶನದಿಂದ ಹಿಡಿದು ಬ್ಯಾಂಕ್ ಲಾಕ‌ರ್ ಒಪ್ಪಂದದವರೆಗೆ, 2023 ರ ಡಿಸೆಂಬರ್ನಲ್ಲಿ ಹಲವಾರು ಹಣಕಾಸು ಕಾರ್ಯಗಳನ್ನು ಮುಗಿಸುವುದು ಉತ್ತಮ(December New Rule Changes).

ಡಿಸೆಂಬರ್ ನಲ್ಲಿ ಈ ನಾಲ್ಕು ನಿರ್ಣಾಯಕ ಗಡುವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ:
# ಆಧಾರ್ ಕಾರ್ಡ್ ನವೀಕರಣ
ಆಧಾರ್ ಕಾರ್ಡ್ನಲ್ಲಿ ವಿವರಗಳನ್ನು ಉಚಿತವಾಗಿ ನವೀಕರಿಸಲು ಡಿಸೆಂಬರ್ 14, 2023 ಕೊನೆಯ ದಿನವಾಗಿದೆ. ಯುಐಡಿಎಐ(UIDAI)ಬಳಕೆದಾರರಿಗೆ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದೆ. ಆಧಾರ್ ಕಾರ್ಡ್ ನವೀಕರಣ ಹಾಗೂ ವಿವರಗಳನ್ನು ನವೀಕರಿಸಲು ನೀವು ಮೈ ಆಧಾರ್ ಪೋರ್ಟಲ್ಲೆ ಭೇಟಿ ನೀಡಬೇಕಾಗುತ್ತದೆ.

# ಮ್ಯೂಚುವಲ್ ಫಂಡ್ ನಾಮನಿರ್ದೇಶನ
ಮ್ಯೂಚುವಲ್ ಫಂಡ್ ನಾಮನಿರ್ದೇಶನ ಮಾಡಲು ಸೆಪ್ಟೆಂಬರ್ 30, 2023 ವರೆಗಿದ್ದ ಗಡುವನ್ನು ಸೆಬಿ ವಿಸ್ತರಣೆ ಮಾಡಿದ್ದು, ಹೀಗಾಗಿ, ಡಿಸೆಂಬರ್ 31 ಕಡೆಯ ದಿನವಾಗಿದೆ. ಅಸ್ತಿತ್ವದಲ್ಲಿರುವ ಡಿಮ್ಯಾಟ್ ಖಾತೆದಾರರು ಮತ್ತು ಮ್ಯೂಚುವಲ್ ಫಂಡ್ ಘಟಕ ಹೊಂದಿರುವವರು ನಾಮನಿರ್ದೇಶಿತರನ್ನು ಆಯ್ಕೆ ಮಾಡಲು ಡಿಸೆಂಬರ್ 31, 2023 ಕೊನೆಯ ದಿನವಾಗಿದೆ.

# ನಿಷ್ಕ್ರಿಯ ಯುಪಿಐ ಐಡಿಗಳನ್ನು ಪುನಃ ಸಕ್ರಿಯಗೊಳಿಸಿ

ನವೆಂಬರ್ 7 ರಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸುತ್ತೋಲೆ ಹೊರಡಿಸಿದ್ದು, ಪಾವತಿ ಅಪ್ಲಿಕೇಶನ್ಗಳು ಮತ್ತು ಬ್ಯಾಂಕುಗಳಿಗೆ ಯುಪಿಐ ಐಡಿಗಳು ಮತ್ತು ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸುವಂತೆ ನಿರ್ದೇಶನ ನೀಡಿದೆ. ಇದಲ್ಲದೇ, ಥರ್ಡ್-ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ಸ್ ಮತ್ತು ಪಾವತಿ ಸೇವಾ ಪೂರೈಕೆದಾರರು (ಪಿಎಸ್ಪಿ) ಇತ್ತೀಚಿನ ಮಾರ್ಗಸೂಚಿಗಳ ಅನುಸಾರ ನಿಷ್ಕ್ರಿಯ ಯುಪಿಐ ಐಡಿಗಳನ್ನು ಪುನಃ ಸಕ್ರಿಯಗೊಳಿಸಲು ಡಿಸೆಂಬರ್ 31, 2023 ವರೆಗೆ ಅವಕಾಶವಿದೆ.

# ಬ್ಯಾಂಕ್ ಲಾಕ‌ರ್ ಒಪ್ಪಂದ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI )ಸುರಕ್ಷಿತ ಠೇವಣಿ ಲಾಕರ್ಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಅನುಸಾರ, ಗ್ರಾಹಕರು ಪ್ರತಿವರ್ಷ ತಮ್ಮ ಬ್ಯಾಂಕುಗಳೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕುವಂತೆ ಮನವಿ ಮಾಡಿದೆ. ಇದರಿಂದ ಬಳಕೆದಾರರು ಬಾಡಿಗೆ ಪಾವತಿಸುವುದನ್ನು ಮುಂದುವರಿಸಿದಲ್ಲಿ ಲಾಕರ್ ಗಳನ್ನು ಬಳಸಬೇಕಾಗಿದ್ದು, ಈ ಒಪ್ಪಂದವನ್ನು ಅನುಸರಿಸಲು ಡಿಸೆಂಬರ್ 31, 2023 ಕೊನೆಯ ದಿನವಾಗಿದೆ.

ಇದನ್ನೂ ಓದಿ: Bank Robbery: ಬೆಳ್ಳಂಬೆಳಗ್ಗೆ ಬ್ಯಾಂಕ್ ದರೋಡೆ: ಹತ್ತೆ ನಿಮಿಷಕ್ಕೆ ಕೋಟಿಗಟ್ಟಲೆ ನಗ ಲೂಟಿ!

1 Comment
  1. […] ಇದನ್ನೂ ಓದಿ: ಜನಸಾಮಾನ್ಯರಿಗೆ ಮುಖ್ಯ ಮಾಹಿತಿ- ಡಿಸೆಂಬರ್… […]

Leave A Reply

Your email address will not be published.