DA Hike: ಸರ್ಕಾರಿ ನೌಕರರಿಗೆ ಹೊಡೀತು ಲಾಟ್ರಿ- ಹೊಸ ವರ್ಷಕ್ಕೆ ‘ಡಿಎ’ ಯಲ್ಲಿ ಭರ್ಜರಿ ಏರಿಕೆ

Business news 7th pay commission update Government employees da hike up to 51 percent

DA Hike: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ಕಾದಿದೆ. ಹೌದು, ಮುಂದಿನ ವರ್ಷ ಅವರ ವೇತನ ಮತ್ತು ಪಿಂಚಣಿಗಳಲ್ಲಿ ಹೆಚ್ಚಳ ಕಾಣಲಿದ್ದು, ಹೊಸ ವರ್ಷದಲ್ಲಿ ತುಟ್ಟಿಭತ್ಯೆ (DA Hike) ಪ್ರಮಾಣ ಮತ್ತೇ ಹೆಚ್ಚಾಗಲಿದೆ.

ಈಗಾಗಲೇ ಅಕ್ಟೋಬರ್ ನಲ್ಲಿ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿದ ಸರ್ಕಾರ ಜುಲೈನಿಂದ ಬಾಕಿ ಉಳಿದಿದ್ದ ಡಿಎ ಹಣವನ್ನೂ ನೌಕರರ ಖಾತೆಗೆ ವರ್ಗಾಯಿಸಿದೆ. ಜುಲೈ 1, 2023 ರಿಂದ, ಉದ್ಯೋಗಿಗಳು 46 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಜನವರಿ 2024 ರಲ್ಲಿ, ತುಟ್ಟಿಭತ್ಯೆಯಲ್ಲಿ ಮತ್ತೊಂದು ಬದಲಾವಣೆಯಾಗಲಿದೆ. ಅದಲ್ಲದೆ ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ಬೆಲೆಯನ್ನು ಲೆಕ್ಕಹಾಕಲಾಗುತ್ತದೆ ಎನ್ನಲಾಗಿದೆ.

ತುಟ್ಟಿಭತ್ಯೆ ಸುಮಾರು ಜನವರಿಯಲ್ಲಿ ಗರಿಷ್ಠ 5% ರಷ್ಟು ಹೆಚ್ಚಾಗುತ್ತದೆ ಎಂದು ಎನ್ನಲಾಗುತ್ತಿದೆ . AICPI ಸೂಚಕದಿಂದ ಪಡೆದ DA ಸ್ಕೋರ್ ಇದನ್ನು ಸೂಚಿಸುತ್ತದೆ. ಪ್ರಸ್ತುತ ದರದ ಪ್ರಕಾರ ಹೇಳುವುದಾದರೆ ಡಿಎ 51% ತಲುಪುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನ AICPI ಸೂಚ್ಯಂಕ ಡೇಟಾ ಪ್ರಕಾರ ಪ್ರಸ್ತುತ ಇದು 48.54% ನಲ್ಲಿದೆ ಮತ್ತು ಸೂಚ್ಯಂಕವು 137.5 ಅಂಕಗಳಲ್ಲಿದೆ. ಅಕ್ಟೋಬರ್ ವೇಳೆಗೆ ಈ ಸಂಖ್ಯೆ 49% ಕ್ಕಿಂತ ಹೆಚ್ಚಿರುತ್ತದೆ. ನವೆಂಬರ್ ಮತ್ತು ಡಿಸೆಂಬರ್‌ನ ಅಂಕಿಅಂಶಗಳು ಇನ್ನೂ ಬರಬೇಕಿದೆ. ಡಿಸೆಂಬರ್ 2023 ರ AICPI ಸೂಚ್ಯಂಕ ಡೇಟಾವನ್ನು ಆಧರಿಸಿ ಭತ್ಯೆಯ ಒಟ್ಟು ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ.

ಸದ್ಯ 7 ನೇ ವೇತನ ಆಯೋಗದ ಅಡಿಯಲ್ಲಿ , ಜುಲೈನಿಂದ ಡಿಸೆಂಬರ್ 2023 ರ AICPI ಸಂಖ್ಯೆಗಳ ಆಧಾರದ ಮೇಲೆ ಜನವರಿ 2023ರ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. AICBI ಅಂಕಿಅಂಶಗಳ ಪ್ರಕಾರ, ತುಟ್ಟಿಭತ್ಯೆ ದರವು ಸುಮಾರು 48.50 ಪ್ರತಿಶತವನ್ನು ತಲುಪಿದೆ. ಇಲ್ಲಿಯವರೆಗೆ ಮೂರು ತಿಂಗಳ ಸಂಖ್ಯೆಗಳು ಬರುತ್ತಿವೆ. 2.5ರಷ್ಟು ಹೆಚ್ಚುವರಿ ಏರಿಕೆಯಾಗಬಹುದು ಡಿಎ ಕ್ಯಾಲ್ಕುಲೇಟರ್ ಪ್ರಕಾರ ಈ ಬಾರಿ ತುಟ್ಟಿಭತ್ಯೆ 51 ಪ್ರತಿಶತವನ್ನು ತಲುಪುತ್ತದೆ.

ಕೆಳಗಿನ ಕೋಷ್ಟಕವು (CPI(IW) BY2016=100 DA%) ಮಾಸಿಕ ಬೆಳವಣಿಗೆಯನ್ನು ತೋರಿಸುತ್ತದೆ:

ಜನವರಿ 2023 132.8 43.09,
ಫೆಬ್ರವರಿ 2023 132.7 43.80,
ಮಾರ್ಚ್ 2023 133.3 44.47 ,
ಏಪ್ರಿಲ್ 2023 134.2, 45.07,
ಮೇ 2023 134.7 42.59,
ಜೂನ್ 420.59 139.7 47 ,
ಆಗಸ್ಟ್ 2023 139.2 47.98,
ಸೆಪ್ಟೆಂಬರ್ 2023 137.5 48.54,
ಅಕ್ಟೋಬರ್ 2023 49.45
ನವೆಂಬರ್ 2023 50.21
ಡಿಸೆಂಬರ್ 2023 50.93.

ಇದನ್ನೂ ಓದಿ: Heart Attack: ಆರು ವರ್ಷದ ಮಗು ಹೃದಯಾಘಾತದಿಂದ ಸಾವು!

Leave A Reply

Your email address will not be published.