Bantwala: ಅಕ್ಕಪಕ್ಕದ ಮನೆಯ ಯುವಕ-ಯುವತಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು!!!

Bantwal: ಬಂಟ್ವಾಳದಲ್ಲಿ (Bantwal)ನೆರೆಹೊರೆ ಮನೆಯ ಯುವಕ ಹಾಗೂ ಯುವತಿ ನವೆಂಬರ್ 24 ರಂದು ಶುಕ್ರವಾರ ಮುಂಜಾನೆ ವೇಳೆಗೆ ಪರಾರಿಯಾಗಿದ್ದು(Missing), ಇದೀಗ ನವಜೋಡಿಗಳು ಕೇರಳ ರಾಜ್ಯದ ಕಾಂಞಗಾಡ್ ಎಂಬಲ್ಲಿ ಪೋಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಕಾಣೆಯಾಗಿದ್ದ ಜೋಡಿಗಳನ್ನು ಸಜೀಪ ಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಮಗಳು ಆಯಿಸತ್ ರಸ್ಮಾ (18) ಹಾಗೂ ಹೈದರ್ ಎಂಬವರ ಮಗ ಮಹಮ್ಮದ್ ಸಿನಾನ್ (23) ಎಂದು ಗುರುತಿಸಲಾಗಿದೆ. ಆಸ್ಮಾ ಅವರು ದೇರಳಕಟ್ಟೆ ನಡುಪದವು ಪಿ.ಎ.ಕಾಲೇಜಿನಲ್ಲಿ ಫಾರ್ಮಸಿ ವಿಭಾಗದ ಪಿಯುಸಿ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಸಿನಾನ್ ಕೆಲ ವರ್ಷಗಳಿಂದ ಕತಾರ್ ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಎನ್ನಲಾಗಿದೆ.

ಎರಡು ಮನೆಯಲ್ಲಿ ಇವರಿಬ್ಬರ ಪ್ರೇಮ ಪ್ರಕರಣದ ಬಗ್ಗೆ ಗೊತ್ತಿತ್ತು ಎನ್ನಲಾಗಿದೆ. ಇವರಿಬ್ಬರು ಒಂದೇ ದಿನ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಈ ವಿಚಾರದ ಬಗ್ಗೆ ತಿಳಿದ ಪೋಲೀಸರು ಕಾಣೆಯಾದವರ ಬಗ್ಗೆ ಮಾಹಿತಿ ಕಲೆಹಾಕಿ ಕಾಂಞಗಾಡ್ ನಲ್ಲಿ ಪತ್ತೆ ಹಚ್ಚಿದ್ದಾರೆ. ಇಬ್ಬರನ್ನು ಬಂಟ್ವಾಳ ನಗರ ಠಾಣಾ ಪೊಲೀಸ್ ಠಾಣೆಗೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಪೊಲೀಸರು ಯುವಕ ಮತ್ತು ಯುವತಿಯ ಮನೆಯವರನ್ನು ಠಾಣೆಗೆ ಕರೆಸಿದ್ದು, ಮನೆಯವರೊಂದಿಗೆ ತೆರಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ನಡುವೆ, ಯುವತಿ ತಾನು ಯುವಕನನ್ನು ಪ್ರೀತಿಸುತ್ತಿದ್ದು, ಇಬ್ಬರು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿ ಯುವಕನ ಜೊತೆಗೆ ಹೋಗುವುದಾಗಿ ತಿಳಿಸಿದ್ದಾಳೆ ಎಂದು ಪೋಲೀಸರಿಗೆ ತಿಳಿಸಿದ್ದಾರೆ.

ಇದನ್ನು ಓದಿ: School Students: ಶಾಲಾ ಮಕ್ಕಳಿಗೆ ಬೊಂಬಾಟ್ ನ್ಯೂಸ್ – ಮಧ್ಯಾಹ್ನ ಊಟವಾದ ಕೂಡ್ಲೇ ನೀವಿನ್ನು ಮಲಗಬಹುದು !!

Leave A Reply

Your email address will not be published.