Influenza: ಚೀನಾದಲ್ಲಿ ಹೊಸ ಕಾಯಿಲೆ ಪತ್ತೆ – ಸರ್ಕಾರದಿಂದ ದಿಢೀರ್ ಸಭೆ !!

Influenza:ಕೋವಿಡ್ ಮಾದರಿಯಲ್ಲಿಯೇ ಮತ್ತೊಂದು ಮಾರಕ ವೈರಸ್ ಚೀನಾದಲ್ಲಿ ಪತ್ತೆಯಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ವೈರಸ್‌ ತಡೆಗೆ ಪೂರ್ವ ತಯಾರಿ ನಡೆಸಲಾಗಿದೆ. ಜಗತ್ತು ಕಂಡು ಕೇಳರಿಯದ ಕೊರೋನಾ(COVID 19)ಮಹಾಮಾರಿ ಸಾವು ನೋವಿನ ನಡುವೆ ಎಲ್ಲರನ್ನು ತಲ್ಲಣಗೊಳಿಸಿದ್ದು ಗೊತ್ತಿರುವ ಸಂಗತಿ. ಈಗ ಇದೇ ಮಾದರಿಯಲ್ಲಿ ಮತ್ತೊಂದು ಮಾರಕ ವೈರಸ್ ಚೀನಾದಲ್ಲಿ ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲವು ಮಾರ್ಗಸೂಚಿಗಳನ್ನ ಹೊರಡಿಸಿದೆ. ಈ ನಡುವೆ, ರಾಜ್ಯ ಸರ್ಕಾರದಿಂದ ಚೀನಾ ವೈರಸ್‌ನಿಂದ ಆಗುವ ರೋಗವನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಜ್ಞರ ನೇತೃತ್ವದಲ್ಲಿ ಸಭೆ ನಡೆಸಲು ಮುಂದಾಗಿದೆ.

ಚೀನಾದಲ್ಲಿ(China)ನ್ಯುಮೋನಿಯಾ ಮಾದರಿಯ ಸೋಂಕು ಏರಿಕೆ ಕಂಡಿದೆ. ಚೀನಾದಲ್ಲಿ ಎಲ್ಲ ಆಸ್ಪತ್ರೆಗಳು ರೋಗಿಗಳಿಂದ ಬೆನ್ನಲ್ಲೇ, ನಮ್ಮ ದೇಶದ ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ. ಚೀನಾ ನಿಗೂಢ ವೈರಸ್ ಪತ್ತೆ ಆದ ಬೆನ್ನಲ್ಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ರಾಜ್ಯದಲ್ಲಿ ಆಸ್ಪತ್ರೆಗಳನ್ನು ರೆಡಿ ಮಾಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆಸ್ಪತ್ರೆಗಳಲ್ಲಿ ಜ್ವರಕ್ಕೆ ಸಂಬಂಧಿಸಿದ ಔಷಧ, ಲಸಿಕೆ, ಆಕ್ಸಿಜನ್, ಆ್ಯಂಟಿಬಯೋಟಿಕ್, ಪಿಪಿಇ ಕಿಟ್ ಹಾಗೂ ವೈರಸ್ ಟೆಸ್ಟ್ ಕಿಟ್ ಸಜ್ಜು ಗೊಳಿಸಲು ಸೂಚನೆ ನೀಡಲಾಗಿದೆ.

ಈಗ ಪತ್ತೆಯಾಗಿರುವ ಮಾರಕ ವೈರಸ್‌ ಇನ್ ಫ್ಲುಯೆಂಜಾ ಮಾದರಿ ಜ್ವರ ಹಾಗೂ ಗಂಭಿರ ಸ್ವರೂಪದ ಉಸಿರಾಟದ ತೊಂದರೆಯನ್ನು ಉಂಟು ಮಾಡಲಿದೆ. ದೀರ್ಘಕಾಲಿಕ ರೋಗಗಳಿಂದ ಬಳಲುವವರ (ಕೋಮಾರ್ಬಿಟೀಸ್) ಪ್ರಕರಣಗಳ ಮೇಲೆ‌ ಹೆಚ್ಚು ಕ್ರಮ ವಹಿಸಲು ಸರ್ಕಾರ ಸೂಚನೆ ನೀಡಿದೆ. ಈ ವೈರಸ್‌ ಕೂಡ ಕೊರೊನಾ ವೈರಸ್‌ನ ಗುಣಲಕ್ಷಣಗಳನ್ನು ಒಳಗೊಂಡಿದೆ. ಹೀಗಾಗಿ, ರಾಜ್ಯದ ಎಲ್ಲಾ ಆಸ್ಪತ್ರೆಗಳನ್ನು ಸಜ್ಜಾಗುವಂತೆ ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಗಳು ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಾತ್ರಿ ಪಡಿಸಲು ಸೂಚಿಸಲಾಗಿದೆ.

ರಾಜ್ಯದಲ್ಲಿ ಚೀನಾದ ಹೊಸ ಸೋಂಕಿನ ಆತಂಕ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ತಾಂತ್ರಿಕ ಸಲಹಾ ಸಮಿತಿಯನ್ನು ಕರೆಯಲಾಗಿದೆ. ವೈರಸ್ ಭೀತಿ ಹಿನ್ನಲೆ ರಾಜ್ಯದಲ್ಲಿ ಹೊಸ ಗೈಡ್ ಲೈನ್ಸ್ ಬಿಡುಗಡೆ ಸಾಧ್ಯತೆಯಿದ್ದು, ರಾಜ್ಯದಲ್ಲಿಯೂ ಹೆಚ್ಚಾಗಿರುವ ಉಸಿರಾಟದ ತೊಂದರೆ, ಜ್ವರ, ಕೆಮ್ಮು ಒಳಗೊಂಡಂತೆ ಸಾಂಕ್ರಾಮಿಕ ಖಾಯಿಲೆ ನಿಯಂತ್ರಣಕ್ಕೆ ಸಭೆ ನಡೆಸಲಾಗುತ್ತದೆ. ವೈರಸ್‌ ತಡೆಗಟ್ಟುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ದೃಷ್ಠಿಯಿಂದ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಇದನ್ನು ಓದಿ: KSRTC Special Bus:: ಶಬರಿ ಮಲೆಗೆ ತೆರಳುವವರಿಗೆ ಸಿಹಿ ಸುದ್ದಿ – KSRTC ಯಿಂದ ಸಿಗ್ತಿದೆ ವಿಶೇಷ ಸೌಲಭ್ಯ !!

Leave A Reply

Your email address will not be published.