Rahul gandhi: ಈ ಒಂದು ವಿಚಾರದಲ್ಲಿ ಹೊಸ ದಾಖಲೆ ಸೃಷ್ಟಿದ ರಾಹುಲ್ ಗಾಂಧಿ- ಹುಬ್ಬೇರಿಸಿದ ಭಾರತೀಯರು

Rahul gandhi: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್‌ನ ಹೊಸ ಫೀಚರ್ ವಾಟ್ಸಾಪ್‌ ಚಾನೆಲ್ (WhatsApp Channel) ಆರಂಭಿಸಿರುವುದು ಎಲ್ಲರಿಗೂ ತಿಳಿದೇ ಇದೆ. ಇದು ಆರಂಭವಾದಾಗಿಂದ ಆನೇಕ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯರೂ ಕೂಡ ತಮ್ಮದೇ ಚಾನಲ್ ಸೃಷ್ಟಿಸಿಕೊಂಡಿದ್ದಾರೆ. ಅಂತೆಯೇ ಇದೀಗ ದೇಶದ ಯುವ ನಾಯಕ ರಾಹುಲ್ ಗಾಂಧಿ(Rahul Gandhi) ಯವರು ಕೂಡ ತಮ್ಮ ಚಾನೆಲ್ ಸೃಷ್ಟಿಸಿ ಹೊಸ ದಾಖಲೆ ಬರೆದಿದ್ದಾರೆ.

ಹೌದು, ವಾಟ್ಸಪ್ ಚಾನಲ್ ಅಂತೂ ಭಾರೀ ಜನಪ್ರಿಯವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯಿಂದ (PM Narendra Modi) ಹಿಡಿದು ಪ್ರಮುಖ ರಾಜಕಾರಣಿಗಳು ವಾಟ್ಸಾಪ್ ಚಾನೆಲ್ ಸೃಷ್ಟಿಸಿಕೊಂಡಿದ್ದಾರೆ. ಈ ಪಟ್ಟಿಗೆ ಈಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರೂ ಎಂಟ್ರಿ ಕೊಟ್ಟಿದ್ದು ಮೊದಲ ದಿನವೊಂದರಲ್ಲೇ 42 ಲಕ್ಷ ಜನರು ಚಾನೆಲ್‌ಗೆ ಸೇರಿದ್ದು ಹೊಸ ದಾಖಲೆ ನಿರ್ಮಿಸಿದಂತಾಗಿದೆ. ಯಾಕೆಂದರೆ ಈ ಪ್ರಮಾಣದಲ್ಲಿ ಜನರು ಚಾನಲ್ ಸೇರಿದ್ದ ಕೆಲವೇ ಮಂದಿಗಳಲ್ಲಿ ರಾಹುಲ್ ಕೂಡ ಒಬ್ಬರಾಗಿದ್ದಾರೆ.

ಇದನ್ನು ಓದಿ: Arjuna death matter: ಅರ್ಜುನ ಆನೆ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಆನೆ ಸತ್ತದ್ದು ಈ ಕಾರಣಕ್ಕಾ ?! ಮಾವುತ ಬಿಚ್ಚಿಟ್ಟ ಸತ್ಯವೇನು?

ಅಂದಹಾಗೆ ಈ ಕುರಿತು ದಿಲ್ಲಿ ಕಾಂಗ್ರೆಸ್ ಘಟಕವು ಪ್ರತಿಕ್ರಿಯಿಸಿದ್ದು ಪಕ್ಷದ ಕಾರ್ಯಕರ್ತರು ಮತ್ತು ಜನರೊಂದಿಗೆ ಸಂಪರ್ಕ ಬೆಸೆಯಲು ಅವರು ವಾಟ್ಸಾಪ್ ಚಾನೆಲ್ ಆರಂಭಿಸಿದ್ದಾರೆ. ಚಾನೆಲ್ ಆರಂಭವಾದ ಮೊದಲ ದಿನವೇ 42 ಲಕ್ಷ ಜನರು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದೆ. ಡಿಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರು ಹಾಗೂ ಜಿಲ್ಲಾ ಮತ್ತು ಬ್ಲಾಕ್ ಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ಚಾನೆಲ್ ಆರಂಭಿಸಲಾಯಿತು.

ಇದನ್ನು ಓದಿ: Senior citizens Saving Schemes: ಹಿರಿಯ ನಾಗರಿಕರಿಗೆ ಬೊಂಬಾಟ್ ನ್ಯೂಸ್- ಪ್ರತಿ ತ್ರೈಮಾಸಿಕಕ್ಕೆ ನಿಮಗೆ ಸಿಗಲಿದೆ 10,250 ರೂ. ! ಸರ್ಕಾರದ ಹೊಸ ಘೋಷಣೆ

ಚಾನಲ್ ಆರಂಭಿಸಿ ಮಾತನಾಡಿದ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ಭಾರತೀಯ ಜನತಾ ಪಾರ್ಟಿ ಮತ್ತು ಅದರ ಮಿತ್ರ ಪಕ್ಷಗಳು ಸುಳ್ಳು ಸುದ್ದಿಗಳನ್ನು ಹರಡಲು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಆದರೆ, ರಾಹುಲ್ ಗಾಂಧಿ ಅವರು ವಾಟ್ಸಾಪ್ ಚಾನೆಲ್ ಯಾವುದೇ ಪರಿಣಾಮ ಮತ್ತು ಹೆದರಿಕೆ ಇಲ್ಲದೇ ಸತ್ಯವನ್ನೇ ಹೇಳಲಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: Udupi: ಉಡುಪಿಯ ಪಿತ್ರೋಡಿಯಲ್ಲಿ ಅಸ್ಸಾಂ ಯುವಕನಿಗೆ ದೆವ್ವದ ಆವೇಶ – ಎದ್ದು ಬಿದ್ದು ಓಡಿದ ಕಾರ್ಮಿಕರು

Leave A Reply

Your email address will not be published.