Covid Time Research: ಕೋವಿಡ್ ಸಮಯದಲ್ಲಿ ನೀವು ಈ ರೂಲ್ಸ್ ಫಾಲೋ ಮಾಡಿಲ್ವಾ? ಹಾಗಿದ್ರೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್

Covid Time Research: ಜಗತ್ತಿನ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಈ ಕೊರೋನಾ ಎಂಬ ಸಾಂಕ್ರಾಮಿಕ ರೋಗದಿಂದ ಭಾಧಿಸಿದ್ದಾರೆ. ಆದರೆ ಈಗ ಜಗತ್ತು ಈ ಕೊರೋನಾ ಎಂಬ ಮಹಾಮಾರಿಯಿಂದ ಮುಕ್ತವಾಗಿರುವ ಅವಧಿಯಲ್ಲಿ ವಿಜ್ಞಾನಿಗಳು (Scientists) ಮತ್ತು ಸಂಶೋಧಕರು (Research) ಹೊಸ ಮಾಹಿತಿ ನೀಡಿದ್ದಾರೆ.

ಲಾಕ್‌ಡೌನ್ ಮುಗಿದ ನಂತರ ಕೋವಿಡ್ ನಿರ್ಬಂಧಗಳನ್ನು ಹೆಚ್ಚು ನಿಕಟವಾಗಿ ಫಾಲೋ ಮಾಡಿದ್ದ ಜನರು ಒತ್ತಡ, ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿದ್ದಾರೆ ಎಂದು ವೇಲ್ಸ್‌ನ ಬ್ಯಾಂಗೋರ್ ವಿಶ್ವವಿದ್ಯಾಲಯದ ಶಿಕ್ಷಣ ತಜ್ಞರು ಅಧ್ಯಯನದಲ್ಲಿ (Covid Time Research) ಕಂಡುಕೊಂಡಿದ್ದಾರೆ.

ಸಂಶೋಧನಾ ಅಧ್ಯಯನಗಳು ತಿಳಿಸುವ ಪ್ರಕಾರ, ಹೆಚ್ಚು ಸಂವೇದನಾಶೀಲ, ಕಾಳಜಿಯುಳ್ಳ ಮತ್ತು ಇತರ ಜನರ ಅಗತ್ಯತೆಗಳ ಬಗ್ಗೆ ತಿಳಿದಿರುವ ಜನರು ಹೆಚ್ಚು ಸ್ವತಂತ್ರ, ಸ್ಪರ್ಧಾತ್ಮಕ ಮತ್ತು ತಮ್ಮ ಜೀವನದ ಮೇಲೆ ಹೆಚ್ಚು ನಿಯಂತ್ರಣವನ್ನು ಹೊಂದಲು ಬಯಸುವ ಜನರಿಗಿಂತ ಲಾಕ್‌ಡೌನ್ ನಿಯಮಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ ಎಂದು ಅಧ್ಯಯನಗಳು ಹೇಳುತ್ತಿವೆ.

“ಲಾಕ್‌ಡೌನ್ ಸಮಯದಿಂದ ಹೆಚ್ಚು ವ್ಯಕ್ತಿಗಳು ಆರೋಗ್ಯ ಸಲಹೆಯನ್ನು ಬಹಳ ಕಾಳಜಿಯಿಂದ ಅನುಸರಿಸುತ್ತಾರೆ. ಆದರೆ ಲಾಕ್‌ಡೌನ್ ನಂತರದ ಅವರ ಆರೋಗ್ಯವು ಹದಗೆಡುತ್ತಿದೆ” ಎಂದು ಡಾ. ಮಾರ್ಲಿ ವಿಲ್ಲೆಗರ್ಸ್ ಮತ್ತು ಸಹೋದ್ಯೋಗಿಗಳು ಸುದ್ದಿ ಮಾಧ್ಯಮ ದಿ ಗಾರ್ಡಿಯನ್ ನಲ್ಲಿ ಉಲ್ಲೇಖಿಸಿದ್ದಾರೆ. ಕೋವಿಡ್ ನಿಂದ ಬಹುತೇಕ ವ್ಯಕ್ತಿಗಳಲ್ಲಿ ಭಯದಿಂದ ಜೀವನದಲ್ಲಿ ಏರುಪೇರುಗಳು ಮತ್ತು ದುಷ್ಪರಿಣಾಮಗಳು ಕಾಣಿಸಿಕೊಂಡಿವೆ ಎಂದು ಸಂಶೋಧಕರು ಗಮನಿಸಿದ್ದಾರೆ.

ಸೋಂಕಿನ ಬಗ್ಗೆ ವ್ಯಕ್ತಿಗಳಲ್ಲಿ ಇರುವ ಚಿಂತೆಯು ಈಗಲೂ ಇದೆ. ಅದರಲ್ಲೂ ಇನ್ನೂ ಆ ಚಿಂತೆ ಹೆಚ್ಚಾಗಿರುವುದು ಸಹ ಕಂಡು ಬಂದಿದೆ. ಇದು ಜನರ ಆರೋಗ್ಯ ಮತ್ತು ಚೇತರಿಕೆಯ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ, ”ಎಂದು ಸಂಶೋಧಕರು ತಿಳಿಸಿದ್ದಾರೆ .

ಇದನ್ನು ಓದಿ: BMRCL Recruitment: ಲಕ್ಷ ಲಕ್ಷ ಸಂಬಳ ಸಿಗೋ ಮ್ಯಾನೇಜರ್ ಪೋಸ್ಟ್ ಗಳಿಗೆ ಅರ್ಜಿ ಆಹ್ವಾನ – ಈ ಅರ್ಹತೆಗಳಿದ್ರೆ ಸಾಕು, ತಕ್ಷಣ ಅರ್ಜಿ ಸಲ್ಲಿಸಿ

 

1 Comment
  1. […] ಇದನ್ನು ಓದಿ: Covid Time Research: ಕೋವಿಡ್ ಸಮಯದಲ್ಲಿ ನೀವು ಈ ರೂಲ್ಸ್… […]

Leave A Reply

Your email address will not be published.