Interesting Fact: ಲಕ್ಷ ಲಕ್ಷ ಸಂಬಳ ಸಿಗೋ ಲಾಯರ್ ಕೆಲಸ ಬಿಟ್ಟ ಮಹಿಳೆ- ನಂತರ ಈಕೆ ಮಾಡೋ ಕೆಲಸ ಕೇಳಿದ್ರೆ ನೀವೇ ಹುಬ್ಬೇರಿಸ್ತೀರಾ!!!
World news Lawyer quits job to become a full time pet psychic and speak to animals
Lawyer quits job: ಕೆಲವರು ಹಣಕ್ಕಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಆತ್ಮ ತೃಪ್ತಿಗಾಗಿ ಕೆಲಸ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರಿಗೆ ಕೆಲಸದ ಅನಿವಾರ್ಯ ಇರುತ್ತದೆ. ಇವರೆಲ್ಲರ ನಡುವೆ ಇಲ್ಲೊಬ್ಬ ಮಹಿಳೆ ಬಗ್ಗೆ ( Interesting Fact) ನೀವು ತಿಳಿಯಲೇ ಬೇಕು.
ಹೌದು, ಅಮೆರಿಕಾರ ಫಿಲಡೆಲ್ಫಿಯಾ ಪ್ರಾಪರ್ಟಿ ವಕೀಲೆಯಾಗಿರುವ 33 ವರ್ಷದ ನಿಕ್ಕಿ ವಾಸ್ಕೊನೆಜ್ ಅವರು ವಾರ್ಷಿಕವಾಗಿ 62 ಲಕ್ಷ ರೂಪಾಯಿ ಸಂಪಾದನೆ ನಡೆಸುತ್ತಿದ್ದರು. ಆದ್ರೆ ಇದ್ದಕ್ಕಿದ್ದಂತೆ ಆ ಕೆಲಸ ಬಿಟ್ಟ (Lawyer quits job)ನಿಕ್ಕಿ ವಾಸ್ಕೊನೆಜ್ ಸಾಕುಪ್ರಾಣಿ (Pet) ತಜ್ಞೆಯಾಗಿ ಬದಲಾಗಿದ್ದಾರೆ. ಅದಕ್ಕಾಗಿ ನಿಕ್ಕಿ 2020 ರಲ್ಲಿ ತಯಾರಿ ಆರಂಭಿಸಿದ್ದರು. ಪ್ರಾಣಿಗಳನ್ನು ಅರ್ಥ ಮಾಡಿಕೊಳ್ಳುವ ತರಬೇತಿ ಪಡೆದರು. ಇದಾದ ನಂತ್ರ ಫೇಸ್ಬುಕ್ (Facebook), ಇನ್ಸ್ಟಾಗ್ರಾಮ್ ಹಾಗೂ ಟಿಕ್ ಟಾಕ್ ನಲ್ಲಿ ಜಾಹೀರಾತು ನೀಡಲು ಶುರು ಮಾಡಿದ್ದರು.
ಕೊನೆಗೂ ಪ್ರಾಣಿಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಿಕ್ಕಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ಯಾಕೆಂದ್ರೆ ಅವರ ಕೆಲಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ನೂರಾರು ಬುಕ್ಕಿಂಗ್ ಬರಲು ಶುರುವಾಗಿದೆ. ನಿಕ್ಕಿ ಒಂದು ಅಪಾಯಿಂಟ್ಮೆಂಟ್ 47 ಸಾವಿರ ರೂಪಾಯಿ ಚಾರ್ಜ್ ಮಾಡ್ತಾರೆ.
ಅಷ್ಟಕ್ಕೂ ನಿಕ್ಕಿ ಸಾಕುಪ್ರಾಣಿ ಸೈಕಾಲಜಿಸ್ಟ್ (Pet Psychologist) ಆಗಲು ಕಾರಣವೇನು ಎಂಬುದನ್ನು ಹೇಳಿದ್ದಾರೆ. ಮೊದಲು ಮಾಡ್ತಿದ್ದ ಕೆಲಸದಲ್ಲಿ ಖುಷಿ ಇರಲಿಲ್ಲ ಎನ್ನುವ ನಿಕ್ಕಿ, ಗಂಟೆಗಟ್ಟಲೆ ಕೆಲಸ ಮಾಡ್ಬೇಕಿತ್ತು. ಆದ್ರೆ ಆ ಕೆಲಸದಿಂದ ನನಗೆ ನೆಮ್ಮದಿ ಸಿಗ್ತಿರಲಿಲ್ಲ. ಈಗ ನನ್ನಿಷ್ಟದ ಕೆಲಸ ಮಾಡ್ತಿದ್ದೇನೆ. ಅದ್ರಲ್ಲಿ ಸಂಪೂರ್ಣ ಖುಷಿ ಇದೆ ಎನ್ನುತ್ತಾರೆ.
ನಿಕ್ಕಿ ಆರಂಭದಲ್ಲಿ ಮನೆಯ ಹಾಗೂ ಸ್ನೇಹಿತರ ಮನೆಯ ಸಾಕು ಪ್ರಾಣಿಗಳ ಜೊತೆ ಪ್ರಾಕ್ಟೀಸ್ ಶುರು ಮಾಡಿದ್ದರು. ಬೀದಿ ನಾಯಿಗಳು, ಪ್ರಾಣಿಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದರು. ಅದಕ್ಕೆ ಅವರು ಯಾವುದೇ ಚಾರ್ಜ್ ಮಾಡ್ತಿರಲಿಲ್ಲ. ನಂತ್ರ ಈ ಕೆಲಸವನ್ನು ವೃತ್ತಿಯಾಗಿ ಸ್ವೀಕರಿಸುವ ನಿರ್ಧಾರಕ್ಕೆ ಬಂದರು. ಸಾಮಾಜಿಕ ಜಾಲತಾಣದಲ್ಲಿ ಮೊದಲು ಅಕೌಂಟ್ ತೆರೆದರು. ಅಕೌಂಟ್ ತೆರೆಯುತ್ತಿದ್ದಂತೆ ಅನೇಕ ಫಾಲೋವರ್ಸ್ ಪಡೆದ ನಿಕ್ಕಿಗೆ ನಂತರ ಅಪಾಯಿಂಟ್ಮೆಂಟ್ ಸಿಗ್ತಾ ಹೋಯ್ತು. ಈಗ ನಿಕ್ಕಿ ಈ ಕೆಲಸದಲ್ಲಿ ತುಂಬಾ ಬ್ಯುಸಿಯಿದ್ದಾರೆ. ಸದ್ಯ ನಿಕ್ಕಿ ಅಪಾಯಿಂಟ್ಮೆಂಟ್ ಲೀಸ್ಟ್ ನಲ್ಲಿ 4000 ಜನರ ವೇಟಿಂಗ್ ಲಿಸ್ಟ್ ಇದೆ ಎನ್ನುವುದು ನಿಜಕ್ಕೂ ಆಶ್ಚರ್ಯ ಅನಿಸುತ್ತೆ.
ಇದನ್ನೂ ಓದಿ: ಇನ್ಮುಂದೆ ಮಕ್ಕಳನ್ನು ಹೀಗೂ ಪಡೆಯಬಹುದು – ಹೈಕೋರ್ಟ್ ಮಾಡಿಕೊಡ್ತು ಹೊಸ ಅವಕಾಶ