Kolara: ಹೆಂಡತಿ ಸುಂದರವಾಗಿದ್ದಾಳೆಂದು ಕೊಂದೇ ಬಿಟ್ಟ ಪಾಪಿ ಗಂಡ !! ಇಲ್ಲಿದೆ ನೋಡಿ ಮನಮಿಡಿಯೋ ಸ್ಟೋರಿ

Karnataka crime news Kolar man murdered his wife for dowry in millat nagar

Kolara crime: ತಾವು ಹೇಗಿದ್ದರೂ ಪರವಾಗಿಲ್ಲ ತಮ್ಮ ಹೆಂಡತಿಯರು ಸುಂದವಾಗಿರಬೇಕು ಅನ್ನೋ ಗಂಡಂದಿರೇ ಹೆಚ್ಚು. ಅಲ್ಲದೆ ಆಕೆ ಚಂದವಾಗಿ ಕಾಣಲು ಗಂಡಂದಿರು ಏನು ಬೇಕಾದರೂ ಮಾಡುವುದುಂಟು. ಆದರೆ ಇಲ್ಲೊಬ್ಬ ಪಾಪಿ ಪತಿ ತನ್ನ ಹೆಂಡತಿ ಸುಂದರವಾಗಿರುವುದನ್ನು ಸಹಿಸದೇ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ.

 

ಹೌದು, ಕೋಲಾರದ(Kolara) ಮಿಲ್ಲತ್ ನಗರದಲ್ಲಿ ಸಯ್ಯದ್ ಶುಹೇಬ್ ಎಂಬ ಪಾಪಿ ಗಂಡನೊಬ್ಬ ತನ್ನ
ಮಾಹೇನೂರ್ ( 22) ಎಂಬ ಹೆಂಡತಿ ನೋಡೋಕೆ ಸುಂದರವಾಗಿದ್ದಾಳೆ ಅಂತ ನಿನ್ನಷ್ಟೇ ಸುಂದರವಾದ ಆಭರಣ ಹಾಗೂ ಹಣವನ್ನು ನಿನ್ನ ತವರು ಮನೆಯಿಂದ ತರಬೇಕು ಎಂದು ವರದಕ್ಷಿಣೆ ಕಿರುಕುಳ ಕೊಟ್ಟು ತನ್ನ ಮುದ್ದಾದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಅಘಾತಕಾರಿ ಘಟನೆಯೊಂದು(Kolara crime) ಬೆಳಕಿಗೆ ಬಂದಿದೆ.

ಇಷ್ಟೇ ಅಲ್ಲದೆ ಕೊಲೆ ಮಾಡಿ ಗ್ಯಾಸ್ ಗೀಸರ್ ಲೀಕ್‍ನಿಂದ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಘಟನೆಯ ಬಳಿಕ ಆತ ಕಳೆದ ಕೆಲವು ತಿಂಗಳುಗಳಿಂದ ಹಣ, ಜಾಗ ಹಾಗೂ ಬುಲೆಟ್ ಬೈಕ್‍ಗಾಗಿ ಪತ್ನಿಯ ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಸದ್ಯ ಗಲ್ ಪೇಟೆ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸಯ್ಯದ್ ಶುಹೇಬ್‍ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Odisha: ಕ್ಲಾಸಿಗೆ ಚಕ್ಕರ್ ಹಾಕಿದ್ದಕ್ಕೆ ಟೀಚರ್ ಕೊಟ್ರು ಶಿಕ್ಷೆ- ಬಸಕಿ ಹೊಡೆಯುತ್ತಲೇ ಸಾವನ್ನಪ್ಪಿದ ಬಾಲಕ !!

Leave A Reply

Your email address will not be published.