Home Karnataka State Politics Updates R Ashoka: ವಿಪಕ್ಷ ನಾಯಕರಾಗಿ ಆಯ್ಕೆ ಆಗುತ್ತಿದ್ದಂತೆ ಮಹತ್ವದ ನಿರ್ಧಾರ ಮಾಡಿದ ಆರ್ ಅಶೋಕ್ !!

R Ashoka: ವಿಪಕ್ಷ ನಾಯಕರಾಗಿ ಆಯ್ಕೆ ಆಗುತ್ತಿದ್ದಂತೆ ಮಹತ್ವದ ನಿರ್ಧಾರ ಮಾಡಿದ ಆರ್ ಅಶೋಕ್ !!

R Ashoka

Hindu neighbor gifts plot of land

Hindu neighbour gifts land to Muslim journalist

R Ashoka: ಕೆಲವು ದಿನಗಳ ಹಿಂದಷ್ಟೇ ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಿಜೆಪಿ ಶಾಸಕ ಆರ್ ಅಶೋಕ್(R Ashoka) ಅವರು ಇದೀಗ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ರಾಜ್ಯಾದ್ಯಂತ ಬರ ಅಧ್ಯಯನ ಪ್ರವಾಸ ಮಾಡುವ ನಿರ್ಧಾರ ಮಾಡಿದ್ದಾರೆ.

ಹೌದು, ವಿಧಾನಸಭೆಯ(Assembly) ವಿಪಕ್ಷ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಆರ್.ಅಶೋಕ್ (R.Ashok) ಅವರು ರಾಜ್ಯದಲ್ಲಿ ಬರ ಅಧ್ಯಯನಕ್ಕೆ (Drought Study) ಪ್ರವಾಸ ಕೈಗೊಂಡಿದ್ದಾರೆ. ನಿನ್ನೆ ದಿನ ಆರಂಭಿಕವಾಗಿ ಕಲಬುರಗಿ ಜಿಲ್ಲೆಗೆ ಪ್ರವಾಸ ಮಾಡಿ ಬರ ಅಧ್ಯಯನ ಮಾಡಿದ್ದಾರೆ.

ಅಂದಹಾಗೆ ಬೆಳಿಗ್ಗೆ ಕಲಬುರಗಿಯ(Kalaburagi) ಶ್ರೀನಿವಾಸ ಸರಡಗಿಯಲ್ಲಿ ಬರ ವೀಕ್ಷಣೆಗಾಗಿ ರೈತರ ಹೊಲಗಳಿಗೆ ಭೇಟಿ ನೀಡಿದ ಅಶೋಕ್ ಅವರು ಮಧ್ಯಾಹ್ನ ಆಳಂದ ತಾಲೂಕಿನ ಕಡಗಂಚಿ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು. ನಂತರ ಬರ ಪರಿಸ್ಥಿತಿ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ ಇನ್ನೂ ಪರಿಹಾರ ಬಿಡುಗಡೆಗೊಳಿಸದ ಸರ್ಕಾರದ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ:Rajasthan: ದೇಶಕ್ಕಾಗಿ ರಾಹುಲ್ ಗಾಂಧಿಯಿಂದ ಪ್ರಾಣತ್ಯಾಗ ?! ಅರೆ ಏನಪ್ಪಾ ಇದು ವಿಚಿತ್ರ ಸುದ್ದಿ !!