Rajasthan: ದೇಶಕ್ಕಾಗಿ ರಾಹುಲ್ ಗಾಂಧಿಯಿಂದ ಪ್ರಾಣತ್ಯಾಗ ?! ಅರೆ ಏನಪ್ಪಾ ಇದು ವಿಚಿತ್ರ ಸುದ್ದಿ !!

Political news Mallikarjun kharge statement about Congress leader Rahul Gandhi goes Viral

Mallikarjun kharge on RahulGandhi: ನಾವು ವೇದಿಕೆ ಮೇಲೆ ನಿಂತು ಭಾಷಣ ಮಾಡಿ ಎಷ್ಟೇ ಅಭ್ಯಾಸವಿದ್ದರೂ ಕೆಲವೊಮ್ಮೆ ಮಾತನಾಡುವಾಗ ತಪ್ಪಾಗುವುದು ಸಹಜ. ಇದು ಎಂತಹ ದೊಡ್ಡ ಭಾಷಣಕಾರರಾದವರಿಗೂ ಈ ಸಮಸ್ಯೆ ತಪ್ಪಿದ್ದಲ್ಲ. ಅಂತೆಯೇ ಇದೀಗ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ(Mallikharjun kharge) ಅವರು ತಮ್ಮ ಮಾತಿನ ನಡುವೆ ಪ್ರಮಾದವನ್ನು ಮಾಡಿಕೊಂಡಿದ್ದಾರೆ(Mallikarjun kharge viral statement).

ಹೌದು, ರಾಜಸ್ಥಾನದಲ್ಲಿ(Rajasthan) ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಜೀವ್ ಗಾಂಧಿ ಹೆಸರು ಹೇಳುವ ಬದಲು ರಾಹುಲ್ ಗಾಂಧಿಯಂತಹ ನಾಯಕರು ದೇಶದ ಏಕತೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ ಎಂದು ತಪ್ಪಾಗಿ ಹೇಳಿದ್ದಾರೆ(Mallikarjun kharge on RahulGandhi). ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.

ಇನ್ನು ಖರ್ಗೆಯವರು ಹೀಗೆ ಹೇಳುತ್ತಿದ್ದಂತೆ ವೇದಿಕೆಯಲ್ಲಿದ್ದವರು ಕೂಡಲೆ ಬಂದು ಎಚ್ಚರಿಸಿದ್ದಾರೆ. ಆಗ ಕೂಡಲೇ ಎಚ್ಚೆತ್ತ ಖರ್ಗೆಯವರು ಕ್ಷಮೆಯಾಚಿಸಿದ ಖರ್ಗೆ. ನಾನು ರಾಹುಲ್ ಗಾಂಧಿ… ರಾಜೀವ್ ಗಾಂಧಿ ಅವರು ರಾಷ್ಟ್ರದ ಐಕ್ಯತೆಗಾಗಿ ತಮ್ಮ ಪ್ರಾಣವನ್ನು ನೀಡಿದ್ದಾರೆ ಎಂದು ನಾನು ತಪ್ಪಾಗಿ ಹೇಳಿದ್ದೇನೆ. ಕಾಂಗ್ರೆಸ್‌ನಲ್ಲಿ ದೇಶಕ್ಕಾಗಿ ಪ್ರಾಣ ನೀಡಿದ ನಾಯಕರಿದ್ದಾರೆ ಮತ್ತು ಬಿಜೆಪಿಯಲ್ಲಿ ಜೀವ ತೆಗೆಯುವ ನಾಯಕರಿದ್ದಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಯು ಇದೆಲ್ಲ ಯಾವಾಗ ಆಯಿತು ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: Karnataka government: ‘ಅನ್ನಭಾಗ್ಯ’ ಹೆಸರಲ್ಲಿ ರಾಜ್ಯದ ಜನತೆಗೆ ಟೋಪಿ ಹಾಕಿದ ಸರ್ಕಾರ – ಬಿಲ್ಲೊಂದರಿಂದ ಬಯಲಾಯ್ತು ‘ಗ್ಯಾರಂಟಿ’ ನಾಟಕದ ಅಸಲಿಯತ್ತು !!

Leave A Reply

Your email address will not be published.