Cricket World cup: ಭಾರತ ವರ್ಲ್ಡ್ ಕಪ್ ಸೋಲಲು ಅಮಿತಾಬ್ ಬಚ್ಚನ್ ಕಾರಣ ?!
Sports news reason for India losing world cup is because Amitabh bachchan
Cricket World cup: ಭಾರತೀಯರ ಹತ್ತಾರು ವರ್ಷಗಳ ಕನಸು ಕೊನೆಗೂ ನನಸಾಗಲಿಲ್ಲ. ಹೌದು, ಇಡೀ ವಿಶ್ವವೇ ಎದುರು ನೋಡುತ್ತಿದ್ದ ಕ್ರಿಕೆಟ್ ವಿಶ್ವಕಪ್(Cricket World cup) ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲುಂಡಿದೆ. ಇದರಿಂದಾಗಿ ಅನೇಕ ಕ್ರಿಕೆಟ್ ಪ್ರಿಯರು ಕಣ್ಣುಗಳೂ ಒದ್ದೆಯಾಗಿದ್ದುಂಟು. ಆದರೆ ಇದೀಗ ಈ ಸೋಲಿಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕಾರಣ ಎಂಬ ಸ್ವರವೊಂದು ಕೇಳಿಬರುತ್ತಿದೆ.
ಮೊನ್ನೆ ಮೊನ್ನೆ ತಾನೆ ಗುಜರಾತ್(Gujarath) ನ ನರೇಂದ್ರ ಮೋದಿ ಸ್ಟೇಟಿಯಂನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಪರಾಭಾವಗೊಂಡಿದೆ. ಒಂದು ರೀತಾಯಲ್ಲಿ ಇದು ಭಾರತೀಯರಿಗೆ ನೋವಿನ ಸಂಗತಿ. ಆದರೂ ರೋಹಿತ್ ಶರ್ಮ ನೇತೃತ್ವದ ತಂಡಕ್ಕೆ ಎಲ್ಲರೂ ಸಪೋರ್ಟ್ ಮಾಡುತ್ತಿದ್ದಾರೆ. ಈ ನಡುವೆ ನಟ ಅಮಿತಾಭ್ ಬಚ್ಚನ್ ಸಕತ್ ಸುದ್ದಿಯಾಗುತ್ತಿದ್ದು ಭಾರತ ತಂಡವು ಫೈನಲ್ನಲ್ಲಿ ಸೋಲಲು ನಟ ಅಮಿತಾಭ್ ಬಚ್ಚನ್(Amithab bacchan) ಅವರೇ ಕಾರಣ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.
ಹೌದು, ಆಸ್ಟ್ರೇಲಿಯಾ ಎದುರು ಭಾರತ ಸೋಲಲು ನಟ ಅಮಿತಾಬ್ ಬಚ್ಚನ್ ಕಾರಣ ಎಂದು ಕೆಲವು ಕ್ರಿಕೆಟ್ ಪ್ರೇಮಿಗಳು ನಟನ ಕಾಲೆಳೆಯುತ್ತಿದ್ದಾರೆ. ಅಷ್ಟಕ್ಕೂ ಕ್ರಿಕೆಟ್ ವಿಶ್ವಕಪ್ ಗೆಲಲ್ಲು ಭಾರತ ವಿಫಲವಾಗಿರುವುದಕ್ಕೂ, ನಟ ಅಮಿತಾಭ್ ಬಚ್ಚನ್ ಅವರಿಗೂ ಏನು ಕಾರಣ ಎಂದು ಅಚ್ಚರಿಯಾಗಬಹುದು. ಅಲ್ಲದೆ ಕ್ರಿಕೆಟ್ ಆರಂಭಕ್ಕೂ ಮುನ್ನ ಕೆಲ ದಿನಗಳ ಹಿಂದೆ ಹಲವು ಅಭಿಮಾನಿಗಳು ಅಮಿತಾಬ್ ದಯವಿಟ್ಟು ನೀವು ಈ ಸಲದ ವರ್ಡ್ ಕಪ್ ಮ್ಯಾಚ್ ನೋಡಬೇಡಿ ಎಂದು ಮನವಿ ಮಾಡಿದ್ರು. ಹಾಗಿದ್ರೆ ಈ ಬಾಲಿವುಡ್ ಬಿಗ್’ಬಿ ಗೂ ಕ್ರಿಕೆಟ್ ಮ್ಯಾಚ್ ಗೂ ಏನು ಸಂಬಂಧ?!
ಅಂದಹಾಗೆ ನ.15ರಂದು ಅಮಿತಾಭ್ ತಮ್ಮ ಎಕ್ಸ್ (ಈ ಹಿಂದೆ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ನಾನು ವೀಕ್ಷಣೆ ಮಾಡದ ಪಂದ್ಯಗಳನ್ನೆಲ್ಲ ಭಾರತ ಗೆದ್ದಿದೆ ಎಂದಿದ್ದರು. ಅದಕ್ಕೆ ಅಭಿಮಾನಿಗಳು ಈ ಸಲ ದಯವಿಟ್ಟು ವಿಶ್ವಕಪ್ ನೋಡಬೇಡಿ ಎಂದು ಮನವಿ ಮಾಡಿದ್ದರು. ನಂತರ ಮತ್ತೊಂದು ಪೋಸ್ಟ್ ಶೇರ್ ಮಾಡಿದ ಅಮಿತಾಭ್, ಫೈನಲ್ ಪಂದ್ಯ ನೋಡಲು ಹೋಗಬೇಕೋ ಬೇಡವೋ? ಎಂದು ಬರೆದುಕೊಂಡಿದ್ದರು. ಅಮಿತಾಭ್ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಬಹುತೇಕರು ಫೈನಲ್ ಪಂದ್ಯಕ್ಕೆ ಹೋಗದಂತೆ ಬಾಲಿವುಡ್ ಸಿನಿಮಾ ದಿಗ್ಗಜನ ಬಳಿ ಮನವಿ ಮಾಡಿದ್ದಲ್ಲದೆ ದಯವಿಟ್ಟು ಹೋಗಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರು.
ಆದರೆ ಅಮಿತಾಭ್ ಅವರು ವಿಶ್ವಕಪ್ ಮ್ಯಾಚ್ ನೋಡಿದ್ದಾರೆ. ಭಾರತ ಸೋಲುತ್ತಿದ್ದಂತೆ ಈ ಬಗ್ಗೆ ನೋವನ್ನು ತೋಡಿಕೊಂಡಿದ್ದರು. ಜೊತೆಗೆ ಭಾರತ ಸರ್ವ ಪ್ರಯತ್ನ ಮಾಡಿ ಫೈನಲ್ ತಲುಪಿರುವಕ್ಕೆ ಹೆಮ್ಮೆ ಎನ್ನಿಸುತ್ತದೆ ಎಂದಿದ್ದರು. ಆದರೆ ಕಾಕತಾಳೀಯ ಎನ್ನುವಂತೆ ಅಮಿತಾಭ್ ಅವರು ಮ್ಯಾಚ್ ನೋಡಿದಾಗಲೇ ಭಾರತ ಸೋಲನ್ನು ಅನುಭವಿಸಿದ್ದು, ಅದಕ್ಕೆ ನೀವೇ ಕಾರಣ ಎಂದು ಫ್ಯಾನ್ಸ್ ನಟನ ಕಾಲೆಳೆಯುತ್ತಿದ್ದಾರೆ.
ಇದನ್ನೂ ಓದಿ: Yuva Nidhi: ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಜಾರಿಗೆ ದಿನಾಂಕ ಫಿಕ್ಸ್ !!
[…] […]
[…] […]