Sullia: ತಂದೆ-ತಾಯಿಯ ಮೇಲೆ ಮಗನಿಂದ ಕತ್ತಿಯಿಂದ ಹಲ್ಲೆ ,ಆರೋಪಿ ಬಂಧನ

Dakshina Kannada crime news Man attempts to murder his parents in sullia

Share the Article

Sullia : ತಂದೆ-ತಾಯಿಯ ಮೇಲೆ ಮಗ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕೊಡಿಯಾಲ ಗ್ರಾಮದ ಕಲ್ಲಗದ್ದೆ ಎಂಬಲ್ಲಿಂದ ವರದಿಯಾಗಿದೆ.

ಸುಳ್ಯ (Sullia)ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲಗದ್ದೆ ನಿವಾಸಿಗಳಾದ ಮಂಜುನಾಥ್ ಆಚಾರ್, ಧರ್ಮಾವತಿ ಗಾಯಗೊಂಡ ದಂಪತಿಗಳು.ಹಲ್ಲೆ ಮಾಡಿದ ಮಗ ದೇವಿಪ್ರಸಾದ್‌ನನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಗದ ವಿಚಾರವಾಗಿ ಮನೆಯಲ್ಲಿ ಜಗಳ ನಡೆದಿದ್ದು, ಈ ವೇಳೆ ಮಗ ತಂದೆ-ತಾಯಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Yuva Nidhi: ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಜಾರಿಗೆ ದಿನಾಂಕ ಫಿಕ್ಸ್ !!

Leave A Reply