Mangalore News: ಎಸ್ಪಿ ಗೆ ಹೊಸ ಸವಾಲು! ಜಮೀರ್ ಅಹ್ಮದ್ನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲು ಧಮ್ ಇದ್ಯಾ ಎಂದು ಪ್ರಶ್ನಿಸಿದ ಸ್ವಾಮೀಜಿ!
Mangaluru News: ಸುಳ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ (Mangaluru News) ಮಾತನಾಡಿದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು, ಬಜರಂಗದಳ ಕಾರ್ಯಕರ್ತರ ಗಡಿಪಾರು ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ನನ್ನು ಗಡಿಪಾರು ಮಾಡಿ ಎಂದು ಏಕವಚನದಲ್ಲಿ ಸಚಿವರ ವಿರುದ್ಧ ಮಾತನಾಡಿದ್ದಾರೆ.
ಈಗಾಗಲೇ ಗಡಿಪಾರಾದ ಹಿಂದೂ ಸಂಘಟನೆಯ ಕಾರ್ಯಕರ್ತರ ಪರ ಸ್ವಾಮೀಜಿ ಮಾತನಾಡಿ, ಅನಾಮತ್ತಾಗಿ ಬಂದವ ವಕ್ಫ್ ಬೋರ್ಡ್ ಸಚಿವ ಜಮೀರ್. ತಾಕತ್ತಿದ್ರೆ ಜಮೀರ್ ಅಹ್ಮದ್ ಖಾನ್ನನ್ನು ಗಡಿಪಾರು ಮಾಡಿ ಎಂದರು. ಇಲ್ಲೆಲ್ಲೂ ಅಲ್ಲ ಜಮೀರ್ ನನ್ನ ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು
ನಿಮಗೆ ತಾಕತ್ತಿದ್ಯಾ ಎಸ್ಪಿ ಸಾಹೇಬ್ರೆ ಎಂದು ಎಂದು ಪೊಲೀಸ್ ಇಲಾಖೆಗೆ ಸ್ವಾಮೀಜಿ ಅವರು ಹಿಂದೂ ಸಂಘಟನೆ ಪರವಾಗಿ ಸವಾಲ್ ಹಾಕಿದರು.
ಈಗಾಗಲೇ ಹಿಂದೂ ಕಾರ್ಯಕರ್ತರು ಯಾವುದಕ್ಕೋಸ್ಕರ ಕೇಸ್ ಹಾಕೊಂಡ್ರು ..? ಅವಲೋಕನ ಮಾಡಿ ಎಂದ ಸ್ವಾಮೀಜಿ, ಗೋವುಗಳನ್ನ ರಕ್ಷಣೆ ಮಾಡಿ 10-20 ಕೇಸ್ ಬಿದ್ದಿದೆ. ಜಿಲ್ಲಾಡಳಿತಕ್ಕೆ ತಾಕತ್ತಿದ್ರೆ ನನ್ನನ್ನ ಗಡಿಪಾರು ಮಾಡಲಿ ಸರಕಾರಕ್ಕೆ ನಮ್ಮ ಮಕ್ಕಳನ್ನ ಕಂಡರೆ ಭಯ. ಹಿಂದೂ ಕಾರ್ಯಕರ್ತ ಲತೇಶ್ ನನ್ನ ಗಡಿಪಾರು ಮಾಡಬಹುದು, ಲತೇಶ್ ನಂತಹ ಸಾವಿರ ಯುವಕರು ಹುಟ್ಟಿದ್ರೆ ಮುಂದಿನ ದಿನಗಳು ನಿಮಗೆ ಕಷ್ಟವಾಗಬಹುದು ಎಂದು ಸುಳ್ಯದ ಕಾರ್ಯಕ್ರಮವೊಂದರಲ್ಲಿ ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಸಿದ್ದಾರೆ.
ಇದನ್ನು ಓದಿ: U.T Khader: ಸ್ಪೀಕರ್ ಸ್ಥಾನದ ಕುರಿತು ಜಮೀರ್ ಅಹ್ಮದ್ ಖಾನ್ ಹೇಳಿಕೆ: ಸ್ಪೀಕರ್ ಯು. ಟಿ ಖಾದರ್ ಕೊಟ್ರು ಶಾಕಿಂಗ್ ಹೇಳಿಕೆ!!
[…] […]