Shivamurthy murugha sharanaru: ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ: ಶ್ರೀಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲು!!

Karnataka news another complaint file against Shivamurthy murugha sharanaru

Shivamurthy murugha sharanaru:ಕಳೆದ 13 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು (Shivamurthy Murugha Sharanaru) ಚಿತ್ರದುರ್ಗ ಜೈಲಿನಿಂದ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದರು. ಇದೀಗ, ಮುರುಘಾ ಶ್ರೀ ಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮುರುಘಾ ಶ್ರೀಗಳಿಗೆ (Karnataka High Court) ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಶ್ರೀಗಳು ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗಮುರುಘಾ ಶ್ರೀ ವಿರುದ್ಧ ಮತ್ತೊಂದು ದೂರು ದಾಖಲಾಗಿದ್ದು, ಮುರುಘಾಶ್ರೀ ದಾವಣಗೆರೆ ವಿರಕ್ತ ಮಠದಲ್ಲಿ ವಾಸ್ತವ್ಯ ಮಾಡುವುದು ಕೂಡ ಅಪರಾಧ ಎಂದು ಆರೋಪಿಸಿ ವಕೀಲರೊಬ್ಬರು ದೂರು ನೀಡಿದ್ದಾರೆ ಎನ್ನಲಾಗಿದೆ.

ಮುರುಘಾಶ್ರೀ ವಿರುದ್ಧ ಚಿತ್ರದುರ್ಗದ ಎಸ್‌ಪಿ ಕಚೇರಿಗೆ ವಕೀಲರೊಬ್ಬರು ದೂರು ನೀಡಿದ್ದಾರೆ ಎನ್ನಲಾಗಿದೆ. ಶ್ರೀಗಳು ಸಾಕ್ಷ್ಯಗಳ ಮೇಲೆ ತಮ್ಮ ಪ್ರಭಾವ ತೋರಿ ಸಾಕ್ಷ್ಯ ನಾಶ ಮಾಡುವ ಹಿನ್ನೆಲೆಯಲ್ಲಿ ಮುರುಘಾಶ್ರೀಗೆ ಮಠದಲ್ಲಿರಲು ಅವಕಾಶ ನೀಡದೆ ಬೇರೆಡೆಗೆ ಸ್ಥಳಾಂತರಿಸಲು ಕೋರಿ ವಕೀಲರು ಹೈಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Electricuted : ತವರು ಮನೆಗೆ ಹೊರಟವಳು ಜವರಾಯನ ಮನೆ ಅತಿಥಿಯಾದಳು : ಬೆಸ್ಕಾಂ ನಿರ್ಲಕ್ಷ್ಯಕ್ಕೆ ಎರಡು ಜೀವ ಬಲಿ! ವೀಡಿಯೋ ವೈರಲ್‌!

Leave A Reply

Your email address will not be published.