7th Pay Commission: ಡಿಎ ಹೆಚ್ಚಳ ಜೊತೆಗೆ ಈ ಭತ್ಯೆಗಳಲ್ಲಿಯೂ ಹೆಚ್ಚಳ!

Business news 7th pay commission update increase in house rent allowance of govt employees

7th Pay Commission Updates: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಹೆಚ್ಚಳ ಜೊತೆಗೆ ಇನ್ನೊಂದು ಸಿಹಿಸುದ್ದಿ ನೀಡಲಾಗಿದೆ. ಹೌದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ), ಸರ್ಕಾರಿ ನೌಕರರ ಪ್ರಯಾಣ ಭತ್ಯೆ ಶೀಘ್ರದಲ್ಲೇ ಹೆಚ್ಚಾಗುವ ಸಾಧ್ಯತೆ ಇದೆ.

ಮುಖ್ಯವಾಗಿ ಇತ್ತೀಚಿನ ಡಿಎ ಹೆಚ್ಚಳದ (7th Pay Commission Updates) ನಂತರ, ಕೇಂದ್ರ ಸರ್ಕಾರಿ ನೌಕರರ ಪ್ರಯಾಣ ಭತ್ಯೆ ಕೂಡ ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಮುಖ TPTA ನಗರಗಳಲ್ಲಿ, ಈ ಬಾರಿ ಗ್ರೇಡ್ 1 ರಿಂದ 2 ಉದ್ಯೋಗಿಗಳು ಕ್ರಮವಾಗಿ ರೂ.1800 ಮತ್ತು ರೂ.1900 ಪಡೆಯಬಹುದು. ಅಲ್ಲದೇ ಗ್ರೇಡ್ 3 ರಿಂದ 8 ರ ಉದ್ಯೋಗಿಗಳು ರೂ.3600 + ಡಿಎ ನಿರೀಕ್ಷಿಸಬಹುದು. ಇತರೆ ನಗರಗಳಲ್ಲಿನ ನೌಕರರು ರೂ. 1800 + ಡಿ.ಎ ಪಡೆಯಬಹುದು ಎನ್ನಲಾಗುತ್ತಿದೆ.

2024 ಆರಂಭದಲ್ಲಿ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಿಸಲಾಗುವುದು ಎಂದು ಹೇಳಲಾಗಿದ್ದು, ಈ ಹಿನ್ನೆಲೆ ಶೇ.3 ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಹಿಂದಿನ ನಿಯಮ ಪ್ರಕಾರ, ಡಿಎ 50 ಪ್ರತಿಶತಕ್ಕಿಂತ ಹೆಚ್ಚಿದ್ದರೆ HRA ಪರಿಷ್ಕರಣೆಗಳಿಗೆ ಒಳಗಾಗುತ್ತದೆ. ಪ್ರಸ್ತುತ 27, 24, ಮತ್ತು 18 ಪ್ರತಿಶತ HRA ಅನ್ನು X, Y ಮತ್ತು Z ವರ್ಗದ ನಗರಗಳಲ್ಲಿ ಒದಗಿಸಲಾಗಿದೆ. ಈಗಿರುವ ಹೆಚ್ಚಳವು ಈ ದರಗಳನ್ನು ಕ್ರಮವಾಗಿ 30, 27 ಮತ್ತು 21 ಪ್ರತಿಶತಕ್ಕೆ ಏರಿಸುತ್ತದೆ, ಆದರೂ ದರವು 50 ಪ್ರತಿಶತವನ್ನು ತಲುಪಿದರೆ ಮಾತ್ರ HRA ಅನ್ನು ಪರಿಷ್ಕರಿಸಲಾಗುತ್ತದೆ. ಒಟ್ಟಿನಲ್ಲಿ ಮಾರ್ಚ್ 2024 ರಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ HRA ಶೇಕಡಾ 3 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಸದ್ಯ ಕೇಂದ್ರ ಸರ್ಕಾರಿ ನೌಕರರ ಸಂಬಳವು ತುಟ್ಟಿಭತ್ಯೆ (ಡಿಎ), ಪ್ರಯಾಣ ಭತ್ಯೆ (ಟಿಎ), ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ), ವೈದ್ಯಕೀಯ ಮರುಪಾವತಿಯಂತಹ ಭತ್ಯೆಗಳನ್ನು ಒಳಗೊಂಡಿದ್ದು, ರಿಯಾಯಿತಿಯನ್ನು ಹೆಚ್ಚಿಸಿದ ನಂತರ, ಪ್ರಯಾಣ ದರವನ್ನು ಸಹ ಹೆಚ್ಚಿಸಲಾಗುತ್ತದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Benefits of Tulasi: ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ತುಳಸಿಯನ್ನು ಈ ರೀತಿ ಉಪಯೋಗಿಸಿ!

Leave A Reply

Your email address will not be published.