Aadhaar Card new Update: ಆಧಾರ್ ಕಾರ್ಡ್ ಕುರಿತು ಹೊಸ ಅಪ್ಡೇಟ್ ಕೊಟ್ಟ ಕೇಂದ್ರ !! ತಕ್ಷಣ ಹೀಗೆ ಮಾಡಿ

Business news Central Government released new update on Aadhaar card

Aadhaar Card new Update: ಆಧಾರ್ ಕಾರ್ಡ್‌ಗೆ ಅಪ್‌ಡೇಟ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಹೌದು, ಇನ್ನುಮುಂದೆ ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ನಲ್ಲಿ ಏನಾದರೂ ಬದಲಾವಣೆಗಳನ್ನು( Aadhaar Card new Update)ಮಾಡಿಸಬೇಕಾದರೆ ಏನು ಮಾಡಬೇಕು ಎನ್ನುವುದನ್ನು ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರ ಭಾರತದಲ್ಲಿ ಹೊಸ ಆಧಾರ್ ದಾಖಲಾತಿ ಮತ್ತು ಆಧಾರ್ ನವೀಕರಣಕ್ಕಾಗಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಆಧಾರ್ ಕಾರ್ಡ್ ಹೊಂದಿರುವವರು ಅದರಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಿಸಬೇಕಾದರೆ ಹೆಚ್ಚಿಗೆ ಹಣ ಪಾವತಿಸುವ ಅಗತ್ಯವಿಲ್ಲ. ಪತ್ರಿ ಅಪ್ಡೇಟ್ ಗೂ ಪ್ರಾಧಿಕಾರ ಇಂತಿಷ್ಟೇ ಹಣ ಎನ್ನುವುದನ್ನು ನಿಗದಿಪಡಿಸಿರುವುದರಿಂದ ಅಷ್ಟೇ ಮೊತ್ತ ಪಾವತಿಸಿದರೆ ಸಾಕು. ಒಂದು ವೇಳೆ ಕಚೇರಿ ಸಿಬ್ಬಂದಿ ಪ್ರಾಧಿಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟರೆ, ಏನು ಮಾಡಬೇಕು ಎನ್ನುವುದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ. ಅಂದರೆ, ಆಧಾರ್ ಅನ್ನು ನವೀಕರಿಸಲು ಹೆಚ್ಚಿನ ಹಣವನ್ನು ನಿಮ್ಮಿಂದ ಕೇಳಿದಾಗ ನೀವು ನಿಮ್ಮ ದೂರನ್ನು ಮೂರು ರೀತಿಯಲ್ಲಿ ಸಲ್ಲಿಸಬಹುದು.

ದೂರು ಸಲ್ಲಿಸುವ ವಿಧಾನ :
ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡಿ ಮತ್ತು ನಿಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದು.
ಎರಡನೆಯದಾಗಿ ಇಮೇಲ್ help@uidai.gov.in . ಮೂಲಕವೂ ದೂರು ದಾಖಲಿಸಬಹುದು.
ಯುಐಡಿಎಐ ಲಿಂಕ್ resident.uidai.gov.in/file-complaint ನಲ್ಲಿ ನೇರವಾಗಿ ಲಾಗ್ ಇನ್ ಮಾಡುವ ಮೂಲಕ ಕೂಡಾ ದೂರು ಸಲ್ಲಿಸಬಹುದು.

ಇನ್ನು ಹೊಸ ಆಧಾರ್ ನೋಂದಣಿ ಮತ್ತು MBU (5 ಮತ್ತು 15 ವರ್ಷಗಳು) ಉಚಿತವಾಗಿರುತ್ತದೆ ಎಂದು UIDAI ಹೇಳಿದೆ. ಅಲ್ಲದೆ, ಆಧಾರ್ ನವೀಕರಿಸಲು ಶುಲ್ಕವನ್ನು ನಿಗದಿಪಡಿಸಲಾಗಿದೆ. ಮನೆ ವಿಳಾಸ ಬದಲಾವಣೆಗೆ 50 ಮತ್ತು ಬಯೋಮೆಟ್ರಿಕ್ ಅಪ್‌ಡೇಟ್‌ಗೆ 50 ರೂ. ಎಂದು ನಿಗದಿಪಡಿಸಲಾಗಿದೆ. ಆದ್ದರಿಂದ, ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಅಥವಾ ಯಾವುದೇ ಇತರ ನವೀಕರಣ ಅಥವಾ ಆಧಾರ್ ದಾಖಲಾತಿಗೆ ಹೆಚ್ಚುವರಿ ಶುಲ್ಕದ ಬೇಡಿಕೆ ಇಟ್ಟರೆ ಈ ಮೇಲೆ ತಿಳಿಸಿದ ಹಂತ ಅನುಸರಿಸಿ ನಿಮ್ಮ ದೂರನ್ನು ದಾಖಲಿಸಬಹುದು.

ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಅಪ್ಡೇಟ್:
ಇನ್ನು ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ಆಧಾರ್ ದಾಖಲಾತಿ ಮತ್ತು ನವೀಕರಣ ನಿಯಮಗಳು, 2016 ರ ಅಡಿಯಲ್ಲಿ ತಮ್ಮ ಡೇಟಾದ ನಿಖರತೆಯನ್ನು ಕಾಪಾಡಿಕೊಳ್ಳಲು ದಾಖಲಾತಿ ದಿನಾಂಕದಿಂದ ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್‌ನಲ್ಲಿ ತಮ್ಮ ಆಧಾರ್ ದಾಖಲೆಗಳನ್ನು ನವೀಕರಿಸಬೇಕಾಗುತ್ತದೆ.

ಇದನ್ನೂ ಓದಿ: ರೇಷನ್ ಕಾರ್ಡ್’ಗೆ ಆಧಾರ್ ಲಿಂಕ್ ಕಡ್ಡಾಯ – ಡಿ. 30 ಡೆಡ್ ಲೈನ್; ತಕ್ಷಣ ಹೀಗೆ ಲಿಂಕ್ ಮಾಡಿ

Leave A Reply

Your email address will not be published.