Girl Child Savings: ಪೋಷಕರೇ, ನಿಮ್ಮ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಸರ್ಕಾರ ತಂದಿದೆ ಹಲವು ವಿಶೇಷ ಯೋಜನೆಗಳು – ತಕ್ಷಣ ಅರ್ಜಿ ಸಲ್ಲಿಸಿ !!
Girl Child Savings: ಕೇಂದ್ರ ಸರ್ಕಾರ (Central Government)ಹೆಣ್ಣು ಮಕ್ಕಳಿಗಾಗಿ (Girl Child)ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.ಸಣ್ಣ ಹೂಡಿಕೆಗಳು(Savings scheme)ಕೂಡ ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ. ಮಗಳ ವಿದ್ಯಾಭ್ಯಾಸ ಮತ್ತು ಮದುವೆಯ ಖರ್ಚು ವೆಚ್ಚಗಳ ಕುರಿತು ನೀವು ಚಿಂತಿತರಾಗಿದ್ದರೆ, ಈ ಯೋಜನೆಗಳಲ್ಲಿ (Girl Child Savings)ಹೂಡಿಕೆ ಮಾಡುವ ಮೂಲಕ ಪೋಷಕರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಮದುವೆ ಮೊದಲಾದ ಅವಶ್ಯಕ ಖರ್ಚುಗಳನ್ನು ಭರಿಸಬಹುದು.
# ಬಾಲಿಕಾ ಸಮೃದ್ಧಿ ಯೋಜನೆ
ಕೇಂದ್ರ ಸರ್ಕಾರ ಈ ಯೋಜನೆಯನ್ನು ಆರಂಭಿಸಿದ್ದು ಈಗ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗಾಗಿ ಬಾಲಿಕಾ ಸಮೃದ್ಧಿ ಯೋಜನೆ ಪ್ರಾರಂಭಿಸಲಾಗಿದ್ದು, ಇದರಲ್ಲಿ ಮಗಳ ಜನನದ ಮೇಲೆ 500 ರೂಪಾಯಿಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಹೆಣ್ಣು ಮಗು ಶಾಲೆಗೆ ಹೋಗಲು ಪ್ರಾರಂಭಿಸಿದ ಸಂದರ್ಭ ಅವಳಿಗೆ ವಾರ್ಷಿಕ ವಿದ್ಯಾರ್ಥಿವೇತನವನ್ನು ಕೂಡ ನೀಡಲಾಗುತ್ತದೆ.
# ಸುಕನ್ಯಾ ಸಮೃದ್ಧಿ ಯೋಜನೆ
ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಪೋಷಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು(Sukanya Samriddhi Yojana) ಕೇಂದ್ರ ಸರ್ಕಾರ(Central Government)ಜಾರಿಗೆ ತಂದಿದೆ.ಸರ್ಕಾರದ ಈ ಯೋಜನೆಯಲ್ಲಿ ವಾರ್ಷಿಕ ಶೆ. 8ರಷ್ಟು ಬಡ್ಡಿ ನಿಗದಿ ಮಾಡಲಾಗಿದೆ. ಕನಿಷ್ಠ ಒಂದು ವರ್ಷಕ್ಕೆ 250 ರೂ ಹೂಡಿಕೆ ಮಾಡಬಹುದಾಗಿದ್ದು, ಗರಿಷ್ಠ 1.5 ಲಕ್ಷ ರೂವರೆಗೂ ಹೂಡಿಕೆ ಮಾಡಲು ಅವಕಾಶವಿದೆ. ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಒಂದು ವರ್ಷಕ್ಕೆ 1,50,000 ರೂವರೆಗೆ ಹೂಡಿಕೆ ಮಾಡಬಹುದಾಗಿದ್ದು, ಈ ಯೋಜನೆಯ ಮೂಲಕ ಆದಾಯವು 100% ತೆರಿಗೆ ಮುಕ್ತವಾಗಿದೆ. ಈ ಯೋಜನೆಯು PPF ಗಿಂತ ಉತ್ತಮ ಆದಾಯವನ್ನು ನೀಡುತ್ತದೆ.
# ರಾಷ್ಟ್ರೀಯ ಪ್ರೋತ್ಸಾಹಕ ಯೋಜನೆ
ಕೇಂದ್ರ ಸರ್ಕಾರ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಎಸ್ಸಿ / ಎಸ್ಟಿ ವರ್ಗದ ಬಾಲಕಿಯರು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭಿಸಿದೆ. 8 ನೇ ತರಗತಿಯಲ್ಲಿ ಉತ್ತೀರ್ಣರಾಗಿ 9 ನೇ ತರಗತಿಗೆ ಪ್ರವೇಶ ಪಡೆಯುವ ಹುಡುಗಿಯರಿಗೆ 3000 ರೂ.ಗಳಲ್ಲಿ ಎಫ್ಡಿ ನೀಡಲಾಗುತ್ತದೆ. ಅವಳು 18 ವರ್ಷ ಮತ್ತು 10 ನೇ ತರಗತಿ ಉತ್ತೀರ್ಣರಾದ ನಂತರ ಬಡ್ಡಿಯೊಂದಿಗೆ ಅದನ್ನು ಹಿಂಪಡೆಯಬಹುದು.
# ಉಡಾನ್ ಸಿಬಿಎಸ್ಇ ವಿದ್ಯಾರ್ಥಿವೇತನ ಕಾರ್ಯಕ್ರಮ
ಉಡಾನ್ ಯೋಜನೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಸಿಬಿಎಸ್ಇ ಮಂಡಳಿ ನಡೆಸುತ್ತಿದೆ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹುಡುಗಿಯರ ಪ್ರವೇಶವನ್ನು ಹೆಚ್ಚಳ ಮಾಡಲಾಗುತ್ತದೆ. ವಾರ್ಷಿಕ ಆದಾಯ 6 ಲಕ್ಷ ರೂ.ಗಿಂತ ಕಡಿಮೆ ಇರುವ ಕುಟುಂಬಗಳ ಹೆಣ್ಣುಮಕ್ಕಳಿಗೆ ಶೇಕಡಾ 3 ರಷ್ಟು ಸೀಟುಗಳನ್ನು ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ 11 ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಉಚಿತ ಆನ್ಸೆನ್ ಅಥವಾ ಆಫ್ ಲೈನ್ ಕೋಚಿಂಗ್ ತೆಗೆದುಕೊಳ್ಳಬಹುದು. ಇದರ ಫಾರ್ಮ್ ಅನ್ನು ಸಿಬಿಎಸ್ಇ ವೆಬ್ ಸೈಟ್ ಮೂಲಕ ಭರ್ತಿ ಮಾಡಬಹುದು.
ಇದನ್ನು ಓದಿ: ಉಡುಪಿ ಹತ್ಯೆ: ಆರೋಪಿ ಪ್ರವೀಣ್ ಚೌಗಲೆ ಕರೆತಂದು ಮಹಜರು! ಉದ್ವಿಗ್ನಗೊಂಡ ಜನ, ಜನರ ಆಕ್ರೋಶ!