Sowa Fish: ಮೀನುಗಾರರೇ, ಈ ಒಂದು ಮೀನಿಗೆ ಬಲೆ ಬೀಸಿದ್ರೆ ಸಾಕು, ರಾತ್ರಿ ಬೆಳಗಾಗೋದ್ರೊಳಗೆ ಕೋಟ್ಯಾಧೀಶ್ವರಾಗ್ತೀರಾ !!
viral news fisherman became Millionaire Overnight after selling sowa fish
Sowa Fish: ಅದೃಷ್ಟ ಎಂಬುದು ಯಾರಿಗೆ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದೃಷ್ಟವೇನಾದರೂ ಯಾರಿಗಾದರೂ ಖುಲಾಯಿಸಿದರೆ ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧೀಶ್ವರ ಆಗುವುದು ಉಂಟು. ಅಂತೆಯೇ ಪಾಕಿಸ್ತಾನದಲೊಂದು ಅಪರೂಪದ ಈ ಘಟನೆ ನಡೆದಿದ್ದು ಕರಾಚಿಯ ಮೀನುಗಾರನೊಬ್ಬ (Pakistan Fisherman) ರಾತ್ರಿ ಬೆಳಗಾಗುವದರೊಳಗೆ ಕೋಟ್ಯಧೀಶನಾಗಿದ್ದಾನೆ(Millionaire).
ಹೌದು, ಪಾಕಿಸ್ತಾನದ ಕರಾಚಿಯ ಬಡ ಇಬ್ರಾಹಿಂ ಹೈದರಿ ಮೀನುಗಾರಿಕಾ ಗ್ರಾಮದಲ್ಲಿ ವಾಸಿಸುವ ಹಾಜಿ ಬಲೋಚ್ ಮತ್ತು ಅವರ ಕೆಲಸಗಾರರು ಸೋಮವಾರ ಅರಬ್ಬಿ ಸಮುದ್ರದಿಂದ (Arabian Sea) ಸ್ಥಳೀಯ ಆಡುಭಾಷೆಯಲ್ಲಿ ಗೋಲ್ಡನ್ ಫಿಶ್ ಅಥವಾ “ಸೋವಾ” (Sowa Fish) ಎಂದು ಕರೆಯಲ್ಪಡುವ ಮೀನುಗಳನ್ನು ಹಿಡಿದಿದ್ದಾರೆ. ಶುಕ್ರವಾರ ಬೆಳಗ್ಗೆ ಕರಾಚಿ ಬಂದರಿನಲ್ಲಿ ಮೀನುಗಾರರು ತಮ್ಮ ಮೀನುಗಳನ್ನು ಹರಾಜು ಹಾಕಿದಾಗ ಸಂಪೂರ್ಣವಾಗಿ ಎಲ್ಲ ಮೀನುಗಳು ಬರೋಬ್ಬರಿ 7 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದ್ದು, ಈ ಮೀನುಗಳ ಹರಾಜಿನಿಂದಾಗಿ ಅವರು ದಿನ ಬೆಳಗಾಗುವುದರಲ್ಲೇ ಕೋಟ್ಯಧಿಪತಿಯಾಗಿದ್ದಾರೆ ಎಂದು ಪಾಕಿಸ್ತಾನದ ಮೀನುಗಾರರ ಒಕ್ಕೂಟದವರು ತಿಳಿಸಿದ್ದಾರೆ.
ಸೋವಾ ಅಥವಾ ಗೋಲ್ಡನ್ ಫಿಶ್ ವಿಶೇಷತೆ ಏನು?
ಸೋವಾ ಅಥವಾ ಗೋಲ್ಡನ್ ಮೀನುಗಳು ಹಲವು ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಮೀನುಗಳಾಗಿವೆ. ಏಕೆಂದರೆ ಅದರ ಹೊಟ್ಟೆಯಲ್ಲಿರುವ ಪದಾರ್ಥಗಳು ಉತ್ತಮ ಗುಣಪಡಿಸುವ ಮತ್ತು ಔಷಧೀಯ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಇವು ಸುಮಾರು 20ರಿಂದ 49 ಕೆಜಿ ತೂಗುತ್ತದೆ ಮತ್ತು 1.5 ಮೀಟರ್‌ವರೆಗೂ ಬೆಳೆಯಬಲ್ಲದು. ಈ ಮೀನಿಗೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ವಿಶೇಷವಾದ ಬೇಡಿಕೆ ಇದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: V Somanna: ವಿ. ಸೋಮಣ್ಣ ಕಾಂಗ್ರೆಸ್ ಸೇರೋದು ಫಿಕ್ಸ್ ?! ಈ ಕ್ಷೇತ್ರದಿಂದಲೇ ಲೋಕಸಭೆ ಸ್ಪರ್ಧೆ ?!