Mandya Murder Case : ಆಸ್ತಿಗಾಗಿ ಹೆಂಡತಿಯನ್ನೇ ಕೊಂದ ಪಾಪಿ ಗಂಡ – ಕೊಂದದ್ದು ಹೇಗೆಂದು ತಿಳಿದ್ರೆ ನೀವೂ ಭಯಬೀಳುತ್ತೀರಾ !!

Karnataka crime news Mandya murder case man kill his wife for asset

Mandya Murder case: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್(Crime news)ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಮಂಡ್ಯದಲ್ಲಿ ವ್ಯಕ್ತಿಯೊಬ್ಬ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ದುರಾಸೆಯಲ್ಲಿ ತನ್ನ ಪತ್ನಿಯನ್ನೇ ಕೊಲೆ (Mandya Murder case)ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಮಂಡ್ಯದ (Mandya News) ವಿ.ವಿ. ನಗರ ಬಡಾವಣೆಯಲ್ಲಿ ಆಸ್ತಿಗಾಗಿ ಪತಿಯೇ ಪತ್ನಿ ಮಲಗಿದ್ದ ಸಂದರ್ಭ ಮುಖಕ್ಕೆ ದಿಂಬು ಇಟ್ಟು, ಬೆಡ್‌ ಶೀಟ್‌ನಿಂದ ಉಸಿರುಗಟ್ಟಿಸಿ (Man kills wife) ಕೊಲೆ ಮಾಡಿದ ಘಟನೆ (Murder Case)ವರದಿಯಾಗಿದೆ. ಮೃತ ದುರ್ದೈವಿಯನ್ನು ಎಸ್.ಶೃತಿ(32) ಎಂದು ಗುರುತಿಸಲಾಗಿದೆ.

ಕೊಲೆಗೆ ಕಾರಣವೇನು?
ಕೋಟ್ಯಂತರ ರೂ. ಮೌಲ್ಯದ ಆಸ್ತಿಯ ಒಡತಿಯಾಗಿದ್ದ ಶ್ರುತಿ ಅದರ ಒಂದು ಭಾಗವನ್ನು ಮಾರುವ ಯೋಜನೆ ಹಾಕಿಕೊಂಡಿದ್ದರು. ಆದರೆ, ಪತಿ ಸೋಮಶೇಖರ್‌ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಂತೆ. ಒಟ್ಟಿನಲ್ಲಿ ಹೇಗಾದರೂ ಸರಿ ಆಸ್ತಿ ತನ್ನದಾಗಬೇಕೆಂಬ ಅಭಿಲಾಷೆ ಹೊತ್ತ ಪತಿ ಪತ್ನಿಯನ್ನು ಕೊಂದಾದರೂ ಸರಿ ಭೂಮಿ ಮತ್ತು ಆಸ್ತಿಯನ್ನು ಕಬಳಿಸಲು ಮುಂದಾಗಿದ್ದಾನೆ.

ಟಿ.ಎನ್.ಸೋಮಶೇಖರ್(41) ಎಂಬಾತ ದಿಂಬು ಮತ್ತು ಬೆಡ್‌ ಶೀಟ್‌ನಿಂದ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಇದೊಂದು ಸಹಜ ಸಾವೆಂದು ಬಿಂಬಿಸಲು ಹರಸಾಹಸಪಟ್ಟಿದ್ದ. ಸೋಮಶೇಖರ್‌ ಆಸ್ತಿ ವಿಚಾರಕ್ಕೆ ಆಗಾಗ ತಗಾದೆ ತೆಗೆಯುತ್ತಿದ್ದ. ಹೀಗಾಗಿ, ಹಲವು ಬಾರಿ ರಾಜೀ ಪಂಚಾಯಿತಿ ಕೂಡ ನಡೆದಿತ್ತು. ಆದಾಗ್ಯೂ, ಆತ ಕಿರುಕುಳ ಮುಂದುವರಿಸಿದ್ದನಂತೆ. ಹೀಗಾಗಿ ಆತನ ಮೇಲೆ ಮನೆಯವರಿಗೆಲ್ಲ ಅನುಮಾನ ಭುಗಿಲೆದ್ದಿದೆ. ಶ್ರುತಿ ಸಾವನ್ನಪ್ಪಿದ ಬಳಿಕ ಸಂಬಂಧಿಯೊಬ್ಬರು ಪತಿಯ ಮೇಲೆ ದೂರು ನೀಡಿದ್ದಾರೆ. ಪೊಲೀಸರ ತನಿಖೆ ಬಳಿಕ ಸತ್ಯ ಹೊರಬಿದ್ದಿದ್ದು, ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Crime News :ಯಪ್ಪಾ.. ವ್ಯಕ್ತಿಯ ಖಾಸಗಿ ಭಾಗಕ್ಕೆ ಪಟಾಕಿ ಇಟ್ಟು ಪ್ರಾಣವನ್ನೇ ತೆಗೆದ ಪಾಪಿಗಳು !!

1 Comment
Leave A Reply

Your email address will not be published.