Crime News: ಯಪ್ಪಾ.. ವ್ಯಕ್ತಿಯ ಖಾಸಗಿ ಭಾಗಕ್ಕೆ ಪಟಾಕಿ ಇಟ್ಟು ಪ್ರಾಣವನ್ನೇ ತೆಗೆದ ಪಾಪಿಗಳು !!

Ghaziabad crime news man killed with firecrackers shot in private part

Ghaziabad Crime News: ಘಾಜಿಯಾಬಾದ್ ನ(Ghaziabad) ಝಂದಾಪುರ ಪ್ರದೇಶದಲ್ಲಿ ದೀಪಾವಳಿಯ ಸಂಭ್ರಮದ ನಡುವೆ ಆಘಾತಕಾರಿ ಘಟನೆ ವರದಿಯಾಗಿದೆ.

ದೀಪಾವಳಿಯ ರಾತ್ರಿ 40 ವರ್ಷದ ವ್ಯಕ್ತಿಯೊಬ್ಬರ ಖಾಸಗಿ ಅಂಗಕ್ಕೆ (Private part)ಪಟಾಕಿ (firecracker)ಗನ್ ನಿಂದ ಸ್ಪೋಟಕ ಸಿಡಿಸಿದ್ದರಿಂದ ವ್ಯಕ್ತಿ ಮೃತಪಟ್ಟ ಘಟನೆ(Ghaziabad Crime News)  ವರದಿಯಾಗಿದೆ. ಈ ಕೃತ್ಯ ಎಸಗಿರುವ ಆರೋಪಿಗಳನ್ನು ಪ್ರದೀಪ್, ನಾಟು ಎಂದು ಗುರುತಿಸಲಾಗಿದೆ. ಆರೋಪಿ ಅಪ್ಟಲ್‌ನ ಸೊಂಟದ ಕೆಳಗೆ ಕಬ್ಬಿಣದ ಪೈಪ್ ನಿಂದ ಪಟಾಕಿ ಗನ್ ನಿಂದ ಸ್ಪೋಟಿಸಿದ್ದಾನೆ. ಈ ಘಟನೆಯ ಬಳಿಕ, ಅಪ್ಪಲ್ ಅವರನ್ನು ಕೂಡಲೇ ಅಸ್ಪತ್ರೆಗೆ ಸಾಗಿಸಿದರು ಕೂಡ ಗಂಭೀರವಾಗಿ ಗಾಯಗೊಂಡಿದ್ದ ಅಪ್ಪಲ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಈ ಪ್ರಕರಣದ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ : UT Khader: ಮಂಗಳೂರಿಗರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಯು ಟಿ ಖಾದರ್ !!

Leave A Reply

Your email address will not be published.