Udupi: ಉಡುಪಿಯ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ಆಟೋ ಡ್ರೈವರ್ ಹೇಳಿದ್ದೇನು ?!
Udupi news 4 members of same family murder case auto driver gives information
Udupi family murder case : ಉಡುಪಿ ಜಿಲ್ಲೆಯಲ್ಲಿ ಒಂದೇ ಮುಸ್ಲಿಂ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ(Udupi family Murder Case) ಹತ್ಯೆ ಮಾಡಿರುವ ಘಟನೆಗೆ ರೋಚಕ ಟ್ವಿಸ್ಟ್ ಸಿಕ್ಕಿದ್ಧು, ಸಾವಿನ ರಹಸ್ಯ ಕೂಡ ಬಯಲಾಗಿದೆ.
ಉಡುಪಿ(Udupi) ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ಒಂದೇ ಕುಟುಂಬದ ತಾಯಿ-ಮಕ್ಕಳಾದ ಹಸೀನಾ, ಅವರ ಮಕ್ಕಳಾದ ಅಫ್ನಾನ್(23), ಅಯ್ನಾಝ್ (21) ಮತ್ತು ಅಸೀಮ್(14) ಎಂಬ ನಾಲ್ವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ (Crime news)ಮಾಡಿರುವ ಘಟನೆ ಕರಾವಳಿಗರನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಈ ಕೊಲೆಯ ರಹಸ್ಯ ಬಯಲಾಗಿದ್ದು, ಒಬ್ಬಳ ಮೇಲಿನ ದ್ವೇಷಕ್ಕೆ ಇನ್ನೂ ಮೂವರು ಬಲಿಯಾಗಿರುವುದು ಇದೀಗ ತಿಳಿದುಬಂದಿದೆ. ಹೌದು, ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅಫ್ನಾನ್ ಮೇಲಿನ ದ್ವೇಷಕ್ಕೆ ದುಷ್ಕರ್ಮಿ ಇನ್ನೂ ಮೂವರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದ್ದು, ಕೊಲೆಗಡುಕನನ್ನು ಕೊಲೆಯಾದವರ ಮನೆಗೆ ಕರೆತಂದ ಆಟೋ ಡ್ರೈವರ್ ಹೇಳಿಕೆಗಳು ಈ ಪ್ರಕರಣಕ್ಕೆ ರೋಚಕ ತಿರುವು ನೀಡಿವೆ.
ಹೌದು, ಕೊಲೆ ಪಾತಕಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದು, ಈ ವೇಳೆ ಸ್ಥಳೀಯ ಆಟೋ ಡ್ರೈವರ್ ಪೊಲೀಸರಿಗೆ ಕೊಲೆಗಡುಕನನ್ನು ನೋಡಿದ ಕುರಿತು ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಕೊಲೆ ಪ್ರಕರಣಕ್ಕೆ ಪೊಲೀಸರಿಗೆ ರೋಚಕ ಸುಳಿವೊಂದು ಸಿಕ್ಕಂತಾಗಿದೆ.
ಆಟೋ ಡ್ರೈವರ್ ಹೇಳಿದ್ದೇನು?
ಸಂತೆಕಟ್ಟೆಯ ರಿಕ್ಷಾ ಚಾಲಕ ಶ್ಯಾಮ್ ಅವರು, ಕೊಲೆಯ ಆರೋಪಿ ನನ್ನ ಆಟೋದಲ್ಲಿ ಮನೆಗೆ ತೆರಳಿದ್ದಾನೆ. ಸಂತೆ ಕಟ್ಟೆಯಿಂದ ಈಗ ಕೊಲೆ ನಡೆದಿರುವ ಘಟನೆಯ ಮನೆಯ ವಿಳಾಸವನ್ನು ಆರೋಪಿ ಸರಿಯಾಗಿ ಹೇಳಿದ್ದನು. ನಾನು ಹೋಗುವಾಗ ದಾರಿ ತಪ್ಪಿದಾಗ ಆತನೇ ಈ ದಾರಿಯಲ್ಲ, ಪಕ್ಕದ ರಸ್ತೆಯಲ್ಲಿ ಹೋಗಬೇಕು ಎಂದು ಸೀದಾ ಮನೆಯ ಬಳಿ ಕರೆದುಕೊಂಡು ಹೋಗಿದ್ದನು. ಇನ್ನು ಆಟೋವನ್ನು ಹತ್ತಿದ ವ್ಯಕ್ತಿಗೆ ಸುಮಾರು 45 ವರ್ಷ ವಯಸ್ಸಾಗಿರಬಹುದು. ಬ್ರೌನ್ ಕಲರ್ ಅಂಗಿ ಹಾಗೂ ಮುಖಕ್ಕೆ ಬಿಳಿ ಬಣ್ಣದ ಮಾಸ್ಕ್ ಧರಿಸಿದ್ದನು. ಅವನು ಹೇಳಿದಂತೆ ನಾನು ಮನೆಯ ಬಳಿ ಬಿಟ್ಟು ಹೋದೆನು. ವ್ಯಕ್ತಿಯನ್ನು ನಾನು ಮನೆಯ ಬಳಿ ಬಿಟ್ಟು 15 ನಿಮಿಷದಲ್ಲಿ ಪುನಃ ಸಂತೆಕಟ್ಟೆಯ ಸ್ಟ್ಯಾಂಡ್‌ಗೆ ಬಂದಿದ್ದನು. ಅಲ್ಲಿಂದ ಬೇರೊಂದು ಸ್ಥಳಕ್ಕೆ ತೆರಳಿದ್ದನು. ಅವನು ಬೆಂಗಳೂರು ಕನ್ನಡವನ್ನು ಮಾತನಾಡುತ್ತಿದ್ದನು. ಈತ ಮನೆಯ ಪರಿಚಿತನೇ ಇರಬೇಕು ಎಂದು ಆಟೋ ಚಾಲಕ ಶ್ಯಾಮ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : Adhar card: ಸಾರ್ವಜನಿಕರೇ ಎಚ್ಚರ.. !! ಆಧಾರ್ ಕಾರ್ಡ್ ಕಳೆದುಹೋದರೆ ಯಾವುದೇ ಕಾರಣಕ್ಕೂ ಈ ಕೆಲಸ ಮಾಡ್ಬೇಡಿ !!