Weight Loss Tips: ಕರಿಬೇವನ್ನು ಹೀಗೆ ಸೆವಿಸಿದ್ರೆ ಕೆಲವೇ ದಿನಗಳಲ್ಲಿ ಸೊಂಟದ ಬೊಜ್ಜು ಮಾಯ !!

Lifestyle health tips health benefits of curry leaves for weight loss diabetes

Weight Loss Tips: ಬೊಜ್ಜು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಕುಗ್ಗಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹೌದು, ತುಂಬಾ ಬೊಜ್ಜು ತುಂಬಿಕೊಂಡಿದ್ದರೆ ಅದನ್ನು ಕರಗಿಸುವುದು ಹೇಗೆ ಎನ್ನುವ ಚಿಂತೆ ಕಾಡುವುದು ಸಹಜ. ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿ, ನಂತರ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ. ಹೊಟ್ಟೆಯ ಕೊಬ್ಬು ನಿಂದ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು. ಸದ್ಯ ಈ ಅಪಾಯಕಾರಿ ಹೊಟ್ಟೆಯ ಬೊಜ್ಜನ್ನು ಕರಿಬೇವನ್ನು ಬಳಸಿ ಕರಗಿಸಬಹುದುದಾಗಿದೆ (Weight Loss Tips).

 

ಮುಖ್ಯವಾಗಿ ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಇ ಜೊತೆಗೆ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಹೆಚ್ಚಿನ ಪ್ರಮಾಣದ ತಾಮ್ರ, ಕಬ್ಬಿಣ ಮತ್ತು ಫೈಬರ್ ಅನ್ನು ಸಹ ಒಳಗೊಂಡಿದೆ.
ಆದ್ದರಿಂದ ಕರಿಬೇವಿನ ಎಲೆಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಕರಿಬೇವಿನ ಎಲೆಗಳು ಬೊಜ್ಜು ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ. ಅಧಿಕ ಕೊಲೆಸ್ಟ್ರಾಲ್ ಇರುವವರು ಇದನ್ನು ಪ್ರತಿದಿನ ಸೇವಿಸಬಹುದು. ಖಾಲಿ ಹೊಟ್ಟೆಯಲ್ಲಿ 3-4 ಕರಿಬೇವಿನ ಎಲೆಗಳನ್ನು ಅಗಿದು ತಿನ್ನಬೇಕು. ಅಥವಾ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಇದರ ರಸವನ್ನು ಸಹ ಕುಡಿಯಬಹುದು. ಇದಕ್ಕಾಗಿ 10-15 ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ. ನಂತರ ಜೇನು ಮತ್ತು ನಿಂಬೆ ರಸದೊಂದಿಗೆ ಕುಡಿಯಬಹುದು.

ಅಲ್ಲದೇ ಈ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಕರಿಬೇವಿನ ಸೊಪ್ಪು ಹೊಟ್ಟೆಯನ್ನು ತಂಪಾಗಿಸುತ್ತದೆ. ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಸುಡುತ್ತದೆ. ಇದರ ಮೂಲಕ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ತೂಕದ ಇಳಿಕೆಗೂ ಕಾರಣವಾಗುತ್ತದೆ.
ಇನ್ನು ಮಧುಮೇಹ ಇರುವವರಿಗೂ ಕರಿಬೇವಿನ ಎಲೆಗಳು ಪ್ರಯೋಜನಕಾರಿ. ಇದು ಸಕ್ಕರೆಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಇದು ಮಧುಮೇಹಿಗಳ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

ಅಲ್ಲದೇ ಹೆಚ್ಚಿನ ಪ್ರಯೋಜನಗಳಿಗಾಗಿ ನೀವು ಕರಿಬೇವಿನ ಎಲೆಗಳ ಚಹಾವನ್ನು ಸಹ ಮಾಡಬಹುದು. ಇದಕ್ಕಾಗಿ 10-15 ಕರಿಬೇವಿನ ಎಲೆಗಳು ಮತ್ತು ಒಂದು ಸಣ್ಣ ತುಂಡು ಶುಂಠಿಯನ್ನು ನೀರಿನಲ್ಲಿ ಹಾಕಿ ಸ್ವಲ್ಪ ಸಮಯ ಕುದಿಸಿ. ನಂತರ ಸೋಸಿ ಅದಕ್ಕೆ ನಿಂಬೆ ಸೇರಿಸಿ ಕುಡಿಯಿರಿ ನಂತರ ನೀವು ಇದರ ಉಪಯೋಗ ಕಂಡು ಆಶ್ಚರ್ಯ ಪಡುತ್ತೀರಿ.

ಇದನ್ನೂ ಓದಿ: Canara Bank: ಕೆನರಾ ಬ್ಯಾಂಕ್ ನಲ್ಲಿ ನೀವು ಖಾತೆ ಹೊಂದಿದ್ದೀರಾ ?! ದೀಪಾವಳಿ ಟೈಮಲ್ಲೇ ಕಾದಿದೆ ನಿಮಗೆ ಶಾಕಿಂಗ್ ನ್ಯೂಸ್

Leave A Reply

Your email address will not be published.