Mysore: 50 ಜನರಿಂದ ಸಿಎಂ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ?!

Mysore 50 people besiege CM Siddaramaiah's house

Mysore: ರಾಜ್ಯದ ಜನರು, ರೈತರು ಬರಗಾಲದಿಂದ ತತ್ತರಿಸಿಹೋಗಿದ್ದಾರೆ. ಸರ್ಕಾರದ ಪರಿಹಾರವಿಲ್ಲದೆ ದೇಶಕ್ಕೆ ಅನ್ನ ನೀಡುವ ರೈತರು ಕಂಗಾಲಾಗಿದ್ದಾರೆ. ನಮ್ಮ ಬೇಡಿಕೆಗಳು ಇಂದು ಈಡೇರಬಹುದು, ಬರ ಪರಿಹಾರ ಇಂದು ಸಿಗಬಹುದು, ನಾಳೆ ಸಿಗಬಹುದು ಎಂದು ಕಾದಿದ್ದ ರೈತರು ಕಾದು ಕಾದು ಸಾಕಾಗಿ ಇಂದು 50 ಜನರು ಒಗ್ಗೂಡಿ ರಾಜ್ಯದ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರ ಮನೆಗೆ ಮುತ್ತಿಗೆ ಹಾಕಲೆನ್ನಿಸಿದ್ದಾರೆ.

ISRO : ಆರ್ ಎಲ್ ವಿ ವಾಹನ ‘ ಪುಷ್ಪಕ್ ‘ ನ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ

ಹೌದು, ಇಂದು ಗುರುವಾರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 50 ರೈತರು ಮೈಸೂರಿನ(Mysore) ರಾಮಕೃಷ್ಣನಗರದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದ ಘಟನೆ ನಡೆದಿದೆ. ಬಳಿಕ ಮುತ್ತಿಗೆ ಹಾಕಲು ಬಂದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Sports Minister Anurag Thakur: ಕ್ರೀಡಾಪಟುಗಳಿಗೆ ಸಂತಸದ ಸುದ್ದಿ : ಇನ್ಮುಂದೆ ಖೇಲೋ ಇಂಡಿಯಾ ಪದಕ ಗೆದ್ದವರಿಗೂ…

ಅಂದಹಾಗೆ ಸಿಎಂ ಮನೆ ಎದುರು ಹಾಕಿದ್ದ ಬ್ಯಾರಿಕೇಡ್ ಮುಂಭಾಗವೇ ಧರಣಿ ನಡೆಸಲು ಮುಂದಾದರೂ ಈ ವೇಳೆ ಪ್ರತಿಭಟನೆಗೂ ಅವಕಾಶ ನೀಡದ ಪೊಲೀಸರ ತಂಡ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಯಿತು.

ಪ್ರತಿಭಟನೆ ಏಕೆ?
• ಕಬ್ಬಿಗೆ ಬೆಂಬಲ ಬಿಡುಗಡೆಗೊಳಿಸಬೇಕು.
• ರಾತ್ರಿ ಹೊತ್ತು ನೀಡುತ್ತಿರುವ ವಿದ್ಯುತ್ ಅನ್ನು ಹಗಲಲ್ಲೇ ರೈತರಿಗೆ ನೀಡಬೇಕು.
• ಬರ ಪರಿಹಾರ ಶೀಘ್ರ ಬಿಡುಗಡೆಗೊಳಿಸಬೇಕು.
• ವೈಜ್ಞಾನಿಕ ಮಾನದಂಡದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು ಇತ್ಯಾದಿ ಬೇಡಿಕೆ ಈಡೇರಿಸಬೇಕೆಂದು.

 

ಇದನ್ನು ಓದಿ: Mangaluru: Karnataka Bank ಮ್ಯಾನೇಜರ್ ಕತ್ತು ಸೀಳಿ ಸಾವು! ಆತ್ಮಹತ್ಯೆ ಶಂಕೆ!

Leave A Reply

Your email address will not be published.