Mugaluru: ʼಆಂಟಿ ಪ್ರೀತ್ಸೆʼ ಎಂದ ಯುವಕನ ಬರ್ಬರ ಕೊಲೆ! ಕೊಲೆಯ ಹಿಂದಿತ್ತು ಸಿರಿವಂತನ ಮೋಹ, ಬಿಗ್‌ ಟ್ವಿಸ್ಟ್‌ ಬಹಿರಂಗ!!!

Mugaluru woman kills live in relationship patner and throw body in Lake latest news

Share the Article

Mugaluru: ಮುಗಳೂರು ಹೊಳೆಯಲ್ಲಿ ಅಪರಿಚಿತ ಯುವಕನೋರ್ವನ ಶವ ಪತ್ತೆ ಪ್ರಕರಣವೊಂದಕ್ಕೆ ಟ್ವಿಸ್ಟ್‌ ದೊರಕಿದ್ದು, ಮೃತ ಯುವಕನ ಪ್ರೇಯಸಿಯೇ ಈತನನ್ನು ಕೊಂದಿರುವ ಮಾಹಿತಿ ಲಭ್ಯವಾಗಿದೆ(Mugaluru). ಪೊಲೀಸರು ಈ ಪ್ರಕರಣವನ್ನು ಬೇಧಿಸಿದ್ದು ಮೃತ ಯುವಕನನ್ನು ಕೋಲಾರ ಮಾಲೂರು ತಾಲೂಕಿನ ಅಯ್ಯಪ್ಪನಗರದ ನಿವಾಸಿ ಚೇತನ್‌ (28) ಎಂದು ಗುರುತಿಸಲಾಗಿದೆ. ಬೆಂಗಳೂರು ಹೊರವಲಯ ಆನೇಕಲ್‌ ತಾಲ್ಲೂಕಿನ ಮುಗಳೂರು ಹೊಳೆಯಲ್ಲಿ ಅನಾಮಿಕ ವ್ಯಕ್ತಿಯ ಶವ ಪತ್ತೆಯಾಗಿದ್ದು, ಇದೀಗ ಕೊಲೆ ಪ್ರಕರಣವನ್ನು ಬೇಧಿಸಲಾಗಿದೆ.

ಮಾಲೂರು ಸೊನ್ನಾಪುರ ಗ್ರಾಮದ ಸತೀಶ್‌ (30), ಶಶಿ (29), ಶೋಭಾ (28) ಕೊಲೆ ಆರೋಪಿಗಳು. ಅ.26 ರಂದು ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಮೃತ ದೇಹದ ಗುರುತು ಪತ್ತೆಯಾಗಿರಲಿಲ್ಲ. ಸರ್ಜಾಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ನಂತರ ಮರ್ಡರ್‌ ಕಹಾನಿ ಗೊತ್ತಾಗಿದೆ.

ಮೃತ ಚೇತನ್‌ ಗಂಡ ಬಿಟ್ಟಿದ್ದ ಮಹಿಳೆಯ ಜೊತೆ ಸಹಜೀವನ ಆರಂಭಿಸಿದ್ದ. ಈ ಸಂದರ್ಭದಲ್ಲಿ ಚೇತನ್‌ ಮೂಲಕ ಸತೀಶ್‌ ಪರಿಚಯವಾಗಿದೆ. ಸತೀಶ್‌ ಸಿರಿವಂತನಾಗಿದ್ದು, ಆತನ ಮೇಲೆ ಗಂಡ ಬಿಟ್ಟಿದ್ದ ಮಹಿಳೆ ಶೋಭಾ ಕಣ್ಣು ಬಿದ್ದಿದೆ. ಆತ ಶೋಭಳಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ್ದ. 25ಲಕ್ಷ ಖರ್ಚು ಮಾಡಿ ಆತ ಶೋಭಳಿಗಾಗಿ ಬ್ಯೂಟಿ ಪಾರ್ಲರ್‌ ಆರಂಭ ಮಾಡಿದ್ದ. ಆದರೆ ಇವರ ಸಂಬಂಧಕ್ಕೆ ಚೇತನ್‌ ಅಡ್ಡಿಯಾಗಿದ್ದ.

ಈ ಸಂಬಂಧ ಚೇತನ್‌ ಆಟ ಮುಗಿಸಲು ಶೋಭಾ ಪ್ಲ್ಯಾನ್‌ ಮಾಡಿದ್ದಾಳೆ. ಕಂಠಪೂರ್ತಿ ಕುಡಿಸಿ ಚೇತನ್‌ಗೆ ಕಳೆದ ತಿಂಗಳು 25 ನೇ ತಾರೀಖಿನಂದು ರಾತ್ರಿ ಚೇತನ್‌ ಮರ್ಡರ್‌ ಮಾಡಿಸಿದ್ದಾಳೆ. ಕುಡಿದು ಟೈಟಾಗಿದ್ದ ಚೇತನ್‌ ತಲೆಗೆ ಹೊಡೆದ ಗ್ಯಾಂಗ್‌ ಹೊಳೆಗೆ ಎಸೆದಿದ್ದಾರೆ. ಸದ್ಯ ಆರೋಪಿಗಳನ್ನು ಪತ್ತೆ ಹಚ್ಚಿರುವ ಪೊಲೀಸರು, ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: Bagar Hukum Land issue: ಭೂರಹಿತ ರೈತರಿಗೆ ಗುಡ್‌ನ್ಯೂಸ್‌!!

Leave A Reply