Bagar Hukum Land issue: ಭೂರಹಿತ ರೈತರಿಗೆ ಗುಡ್‌ನ್ಯೂಸ್‌!!

Bagar Hukum Land issue Good news for landless farmers

Bagar Hukum Land issue: ಮುಂದಿನ ವರ್ಷದೊಳಗೆ ಹಕ್ಕುಪತ್ರ ನೀಡಲು 10 ದಿನಗಳಲ್ಲಿ ಬಗರ್‌ಹುಕುಂ(Bagar Hukum Land issue) ಸಮಿತಿಯನ್ನು ರಚನೆ ಮಾಡಲಾಗುವುದು, ಈ ಮೂಲಕ ರಾಜ್ಯದಲ್ಲಿನ ಭೂ ರಹಿತ ಬಡವರಿಗೆ ಗುಡ್‌ನ್ಯೂಸ್‌ವೊಂದನ್ನು ಸರಕಾರ ನೀಡಿದೆ ಎನ್ನಲಾಗಿದೆ

ಶುಕ್ರವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕಂದಾಯ, ಭೂ ಮಾಪನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೃಷ್ಣ ಬೈರೇಗೌಡರು ಈ ಮಾಹಿತಿಯನ್ನು ನೀಡಿದ್ದಾರೆ.

ಐದು ಎಕರೆಗಿಂತ ಕಡಿಮೆ ಸಾಗುವಳಿ ಹೊಂದಿದ ರೈತರು ಬಗರ್‌ಹುಕುಂ ಅಡಿ ಅರ್ಜಿ ಸಲ್ಲಿಸಲು ಅವಕಾಶವಿದೆ. 2004ರ ಹಿಂದೆ ಸರಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದಲ್ಲಿ ಮಾತ್ರ ಅವಕಾಶವಿದ್ದು, ಅಂದಿಗೆ 18ವರ್ಷ ವಯಸ್ಸಾಗಿರಬೇಕು. ಜಂಟಿ ಕುಟುಂಬದ ಎಲ್ಲಾ ಆಸ್ತಿ ಸೇರಿ ಐದು ಎಕರೆಗಿಂತ ಕಡಿಮೆ ಇರಬೇಕು. ಈ ಅರ್ಜಿಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡಲು ಬಗರ್‌ಹುಕುಂ ಆಪ್‌ನ್ನು ಒಂದು ವಾರದಲ್ಲಿ ರೆಡಿಯಾಗಲಿದ್ದು, ಆನ್‌ಲೈನ್‌ ಮೂಲಕ ಪರಿಶಿಲನೆ ಮಾಡಲು ಅವಕಾಶ ನೀಡಲಾಗುತ್ತದೆ. ಬಗರ್‌ಹುಕುಂ ಅಡಿ ಅರ್ಜಿ ಹಾಕಿ ಈ ಹಿಂದೆ ಜಮೀನು ಮಂಜೂರು ಮಾಡಿದ್ದಲ್ಲಿಯೂ ಅನರ್ಹರಾಗಿದ್ದಲ್ಲಿ ಮರು ವಶಕ್ಕೆ ಪಡೆಯಬಹುದಾಗಿದೆ ಎಂದು ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡರು ವಿವರಿಸಲಿದ್ದಾರೆ.

ಹಾಗೆನೇ ಬಗರ್‌ಹುಕುಂ ದುರ್ಬಳಕೆ ತಡೆಗಟ್ಟಲು ಮಂಜೂರಾತಿಗೆ ಡಿಜಿಟಲ್‌ ಸಹಿಗೆ ಅವಕಾಶ ಮಾಡಿಕೊಟ್ಟಿದ್ದು, ಡಿಜಿಟಲ್‌ ಸಾಗುವಳಿ ಚೀಟಿಯನ್ನು ನೀಡಲಾಗುತ್ತದೆ. ಸಾಗುವಳಿ ಚೀಟಿಯ ಕುರಿತು ಈ ಹಿಂದೆ ನೈಜತೆಯ ಬಗ್ಗೆ ಲಕ್ಷಾಂತರ ಪ್ರಕರಣಗಳು ರಾಜ್ಯದ ನ್ಯಾಯಾಲಯದಲ್ಲಿದೆ. ಮುಂದಿನ ದಿನದಲ್ಲಿ ಈಗಾಗದಂತೆ ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ: ಬೆಳ್ತಂಗಡಿ : ಅಪಘಾತವೆಸಗಿ ಮಾವನ ಕೊಲೆಗೆ ಯತ್ನಿಸಿದ ಅಳಿಯ ಮಹಾಶಯ !

Leave A Reply

Your email address will not be published.