Home latest Good Morning Tips: ಬೆಳಗ್ಗೆ ಎದ್ದ ಕೂಡಲೇ ತುಳಸಿಗೆ ನೀರು ಅರ್ಪಿಸೋದು ಯಾಕೆ ?! ಏನಿದರ...

Good Morning Tips: ಬೆಳಗ್ಗೆ ಎದ್ದ ಕೂಡಲೇ ತುಳಸಿಗೆ ನೀರು ಅರ್ಪಿಸೋದು ಯಾಕೆ ?! ಏನಿದರ ಮಹತ್ವ ?!

Good Morning Tips

Hindu neighbor gifts plot of land

Hindu neighbour gifts land to Muslim journalist

Good Morning Tips: ಹಿಂದೂ ಧರ್ಮದಲ್ಲಿ(Hindu) ತುಳಸಿ ಗಿಡಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ತುಳಸಿಯು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾದದ್ದು ಜೊತೆಗೆ ತುಳಸಿ ಗಿಡವನ್ನು ತಾಯಿ ಲಕ್ಷ್ಮಿಯ ರೂಪವೆಂದು ನಂಬಲಾಗುತ್ತದೆ. ಹೀಗಾಗಿ, ಭಾರತದಲ್ಲಿ ಬಹುತೇಕ ಪ್ರತಿ ಮನೆಗಳಲ್ಲೂ ಸಹ ತುಳಸಿ ಬೆಳೆಸಿ(Tulsi Growing)ಪೂಜೆ (Pooja)ಮಾಡುವ ಪದ್ಧತಿ ರೂಢಿಯಲ್ಲಿದೆ. ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಸ್ನಾನ ಮಾಡಿ ಸೂರ್ಯನಿಗೆ ನೀರನ್ನು ಅರ್ಪಿಸುವುದರ ಜೊತೆಗೆ ತುಳಸಿಗೆ ನೀರು ಹಾಕಬೇಕು ಎಂದು ಹೇಳಲಾಗುತ್ತದೆ.

ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು(Tulasi Plant) ನೆಡುವುದು ಮಂಗಳಕರವಾಗಿದ್ದು, ತುಳಸಿ ಗಿಡವನ್ನು(Tulsi Vastu Tips) ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಧನಾತ್ಮಕತ ಶಕ್ತಿ ಹೆಚ್ಚಾಗಿ ಸಂತೋಷ ಮತ್ತು ಸಮೃದ್ಧಿ ವೃದ್ದಿಯಾಗುತ್ತದೆ ಎಂಬ ನಂಬಿಕೆಯಿದೆ. ತುಳಸಿ ಸಸ್ಯವನ್ನು ಮಹಿಳೆಯರು ನಿತ್ಯ ಪೂಜಿಸುವುದರಿಂದ ಆ ಮನೆಯಲ್ಲಿ ಎಂದಿಗೂ ಕೂಡ ಹಣಕಾಸಿನ ಸಮಸ್ಯೆ ಎದುರಾಗದು.

ತುಳಸಿಗೆ ನೀರನ್ನು ಅರ್ಪಿಸುವುದರಿಂದ ದಿನ ಮಂಗಳಕರವಾಗಿರುವ ಜೊತೆಗೆ ಜೀವನದಲ್ಲಿ ತೊಂದರೆಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ನೀರನ್ನು ಅರ್ಪಿಸಿದ ಬಳಿಕವೇ ತುಳಸಿಗೆ ನೀರು ಹಾಕಿದರೆ ಇದರಿಂದ ಲಾಭವನ್ನು ಪಡೆಯಬಹುದು ಎನ್ನಲಾಗುತ್ತದೆ. ತುಳಸಿಗೆ ನೀರನ್ನು ಅರ್ಪಿಸುವಾಗ 11 ಅಥವಾ 21 ಬಾರಿ ಓಂ ಎಂದು ಜಪಿಸುವುದು ಉತ್ತಮ. ತುಳಸಿ ಗಿಡಕ್ಕೆ ನೀರು ಹಾಕಿದರೆ ಏನೆಲ್ಲ ಪ್ರಯೋಜನಗಳಿವೆ ಗೊತ್ತಾ?

# ತುಳಸಿಗೆ ನೀರನ್ನು ಅರ್ಪಿಸುವಾಗ, ಶ್ರೀಗಂಧದ ತಿಲಕವನ್ನು ಹಚ್ಚಿ, ಇದನ್ನು ಮಾಡುವುದರಿಂದ ನೀವು ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆಯಬಹುದು.
#  ತುಳಸಿಗೆ ನೀರನ್ನು ಅರ್ಪಿಸುವುದರಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು.
# ತುಳಸಿಗೆ ನೀರನ್ನು ಅರ್ಪಿಸುವುದರಿಂದ ಜೀವನದ ಸಮಸ್ಯೆಗಳು ಪರಿಹಾರವಾಗಲಿದ್ದು, ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ.
# ಪ್ರತಿದಿನ ತುಳಸಿಗೆ ನೀರನ್ನು ಅರ್ಪಿಸುವುದು ಆರ್ಥಿಕ ಲಾಭವನ್ನು ತರುತ್ತದೆ.
# ಅದೇ ರೀತಿ, ಹಾಗೆಯೇ ಪೂಜೆ ಮಾಡುವಾಗ ತುಪ್ಪದ ದೀಪವನ್ನು ಹಚ್ಚುವುದು ಒಳ್ಳೆಯದು.