CM Siddaramaiah: ಸಿಎಂ ಬದಲಾವಣೆ ಕುರಿತು ಮೌನ ಮುರಿದ ಸಿದ್ದರಾಮಯ್ಯ- ಭಾರೀ ಕುತೂಹಲ ಕೆರಳಿಸಿದ ಹೇಳಿಕೆ !!

CM Siddaramaiah: ರಾಜ್ಯ ರಾಜಕೀಯದಲ್ಲಿ ಸಿಎಂ ಸ್ಥಾನದ ಹಂಚಿಕೆ ಕುರಿತು ಬಹಳಷ್ಟು ದಿನಗಳಿಂದ ಚರ್ಚೆ ಆಗುತ್ತಿತ್ತು. ಎರಡೂವರೆ ವರ್ಷಗಳ ಕಾಲ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ಮುಂದಿನ ಎರಡುವರೆ ವರ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಅವರ ಪಕ್ಷದ ಶಾಸಕರು, ಸಚಿವರೇ ಹೇಳಿಕೆಗಳನ್ನು ನೀಡುತ್ತಿದ್ದರು. ಆದರೀಗ ಈ ಎಲ್ಲಾ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯನವರು(CM Siddaramaiah)ತೆರೆ ಎಳೆದಿದ್ದಾರೆ.

 

ಹೌದು, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಣ ಹಾಗೂ ಡಿಕೆಶಿ ಬಣ ಎಂದು 2 ಬಣಗಳಿರುವುದು ಗೊತ್ತೇ ಇದೆ. ಇದು ಬಹಿರಂಗವಾಗಿ ಕಾಣದಿದದ್ದರೂ ಪಕ್ಷದ ಆಂತರಿಕವಾಗಿರೋದು ಸತ್ಯ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರೇ ಕೆಲವು ದಿನಗಳಿಂದ ಸಿಎಂ ಸ್ಥಾನದ ಹಂಚಿಕೆ ಕುರಿತು ಸಾಕಷ್ಟು ಹೇಳಿಕೆ ನೀಡಿದ್ದರು. ಅವರ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದವು. ಆದರೀಗ ಇದೆಲ್ಲದಕ್ಕೂ ತೆರೆ ಎಂಬಂತೆ ಸಿಎಂ ಸಿದ್ದರಾಮಯ್ಯನವರು 5 ವರ್ಷಗಳ ಕಾಲ ನಾನೇ ಸಿಎಂ ಎಂದು ಹೇಳಿದ್ದಾರೆ.

ಅಂದಹಾಗೆ ಕರ್ನಾಟಕ ನಾಮಕರಣದ 50 ವರ್ಷದ ಸಂಭ್ರಮಕ್ಕಾಗಿ ವಿಜಯನಗರದ ಹಂಪಿಗೆ ಬಂದ ಸಿದ್ದರಾಮಯ್ಯನವರು ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ಪ್ರಶ್ನೆ ಎದುರಾಗಿದ್ದು, ಸಿಎಂ ಬದಲಾವಣೆ ವಿಚಾರದ ಬಗ್ಗೆ ನಡೆಯುತ್ತಿರುವ ಭಾರೀ ಚರ್ಚೆಗೆ ಪ್ರತಿಕ್ರಿಯಿಸಿದ ಅವರು ನಾನು ಈಗ ಮುಖ್ಯಮಂತ್ರಿ, ಮುಂದಿನ 5 ವರ್ಷ ನಮ್ದೇ ಸರ್ಕಾರ ಇರುತ್ತೆ. ಡಿಸಿಎಂ ವಿಚಾರ ತಿರ್ಮಾನ ಮಾಡೋದು ಹೈಕಮಾಂಡ್. ನಮ್ಮದು ನ್ಯಾಷನಲ್ ಪಾರ್ಟಿ. ಏನೇ ತೀರ್ಮಾನ ಆದರೂ ಹೈಕಮಾಂಡ್ ಜೊತೆ ಚರ್ಚೆ ಮಾಡಿಯೇ ಆಗೋದು ಎಂದು ಉತ್ತರಿಸಿ ಪರೋಕ್ಷವಾಗಿ ನಾನೇ 5 ವರ್ಷವೂ ಸಿಎಂ ಆಗಿರುತ್ತೇನೆ ಎಂದು ಸಿಎಂ ಬದಲಾವಣೆ ವಿಚಾರಕ್ಕೆ ತೆರೆ ಎಳೆದಿದ್ದಾರೆ.

 

ಇದನ್ನು ಓದಿ: CM Siddaramaiah: ರುದ್ರಾಕ್ಷಿ ಧರಿಸಿ ಹಂಪಿ ವಿರೂಪಾಕ್ಷನಿಗೆ ಸಿಎಂ ಸಿದ್ದರಾಮಯ್ಯರಿಂದ ವಿಶೇಷ ಪೂಜೆ- ಮೌಢ್ಯ ವಿರೋಧಿ ಮುಖ್ಯಮಂತ್ರಿಗಳಿಂದ ಅಚ್ಚರಿಯ ನಡೆ.

Leave A Reply

Your email address will not be published.