Anna Bhagya Scheme: ಬೆಳ್ಳಂಬೆಳಗ್ಗೆಯೇ BPL ಕಾರ್ಡ್ ದಾರರಿಗೆ ಶಾಕ್- ಈ ತಿಂಗಳು ಬೇಗ ರೇಷನ್ ಸಿಗುವುದು ಡೌಟ್ !!

Karnataka news Congress guarantee Anna Bhagya Scheme ration shop owners protest for rice demand

Anna Bhagya Scheme: ಪಡಿತರ ಚೀಟಿದಾರರಿಗೆ(Ration Card Holder)ಅಕ್ಕಿ (Rice)ಬದಲು ಹಣ ನೀಡುವುದರಿಂದ ನ್ಯಾಯಬೆಲೆ ಅಂಗಡಿ(Ration Shop)ಮಾಲೀಕರಿಗೆ ಕಮಿಷನ್ ಸಿಗುತ್ತಿಲ್ಲ. ಹೀಗಾಗಿ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿ ಮಾಲೀಕರು 10 ಕೆಜಿ ಅಕ್ಕಿಯನ್ನೇ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ(Anna Bhagya Scheme) ಪಡಿತರ ಚೀಟಿದಾರರಿಗೆ(Ration Card)ಹಣದ ಬದಲು ಅಕ್ಕಿ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ್ಯಾಯಬೆಲೆ ಅಂಗಡಿ ಮಾಲೀಕರು ರಾಜ್ಯಾದ್ಯಂತ ರೇಷನ್ ಎತ್ತುವಳಿ ನಿಲ್ಲಿಸಿರುವ ಹಿನ್ನೆಲೆ ಪಡಿತರ ಚೀಟಿದಾರರಿಗೆ ಪ್ರಸಕ್ತ ತಿಂಗಳಿನಲ್ಲಿ ಪಡಿತರ ಸಿಗುವಾಗ ತಡವಾಗುವ ಸಾಧ್ಯತೆಯಿದೆ.

ನ್ಯಾಯಬೆಲೆ ಅಂಗಡಿ ಮಾಲೀಕರ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಆಹಾರ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು ಕೂಡ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. ಹೀಗಾಗಿ, ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಒತ್ತಾಯ ಮಾಡಿದ್ದಾರೆ. ಈ ನಡುವೆ,ನ್ಯಾಯಬೆಲೆ ಅಂಗಡಿ ಮಾಲೀಕರು ನವೆಂಬರ್ 7ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.

ಇದನ್ನೂ ಓದಿ: ರೈತರಿಗೆ ಇಂಧನ ಸಚಿವರಿಂದ ಭರ್ಜರಿ ಗುಡ್ ನ್ಯೂಸ್ – ಇನ್ನು ಪ್ರತಿದಿನವೂ ಕೃಷಿಗೆ ಸಿಗಲಿದೆ ಇಷ್ಟು ಗಂಟೆ ವಿದ್ಯುತ್ !!

Leave A Reply

Your email address will not be published.