CCTV in girls toilet: ಹೆಣ್ಣು ಮಕ್ಕಳ ಟಾಯ್ಲಟ್ನಲ್ಲಿ ಸಿಸಿ ಕ್ಯಾಮರ ಇಟ್ಟ ಶಾಲೆ! ಶಾಕ್ ಆದ ಪೇರೆಂಟ್ಸ್! ಮುಂದೇನಾಯ್ತು?
World news School installed CCTV camera in girls toilet what happened next
CCTV in girls toilet: ಶಾಲಾ – ಕಾಲೇಜುಗಳಲ್ಲಿ ವಿದ್ಯಾಭ್ಯಾಸಕ್ಕೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೋ ಅದೇ ರೀತಿಯಾಗಿ ಸೆಕ್ಯುರಿಟಿಗೂ ಅಷ್ಟೇ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಅದೇ ವಿದ್ಯಾ ಕೇಂದ್ರದಿಂದ ಮಕ್ಕಳು ಸಾಕಷ್ಟು ವಿಷಯಗಳನ್ನು ಕೂಡ ಕಲಿಯುತ್ತಾರೆ. ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಹಾಗಾದ್ರೆ ಇದ್ಯಾವ ಶಾಲೆ? ಈ ಶಾಲೆಯಲ್ಲಿ ಹೆಣ್ಣು ಮಕ್ಕಳ ಶೌಚಾಲಯದಲ್ಲಿಯೇ ಸಿಸಿ ಕ್ಯಾಮರಾವನ್ನು(CCTV in girls toilet) ಹಾಕಿದ್ದಾರಂತೆ. ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.
ಬಾಲಕಿಯರ ಶೌಚಾಲಯಗಳಲ್ಲಿ ಕ್ಯಾಮೆರಾ ಅಳವಡಿಸಿರುವ ಪ್ರಕರಣ ರಷ್ಯಾದ ಬೊಲ್ಶೊಯ್ ಕಮೆನ್ ಪ್ರದೇಶದ ಶಾಲೆಯೊಂದರಲ್ಲಿ ಬೆಳಕಿಗೆ ಬಂದಿದೆ. ಈ ಶಾಲೆಯಲ್ಲಿ ಭದ್ರತಾ ವ್ಯವಸ್ಥೆ ಎಷ್ಟು ಕಟ್ಟುನಿಟ್ಟಾಗಿದೆ ಎಂದರೆ ಸ್ನಾನಗೃಹದಲ್ಲಿಯೂ ವಿದ್ಯಾರ್ಥಿಗಳಿಗೆ ಖಾಸಗಿತನವಿರೋದಿಲ್ಲ. ಅದಕ್ಕಾಗಿ ಅಲ್ಲಿಯೂ ಸಿಸಿಕ್ಯಾಮೆರಾ ಅಳವಡಿಸಿದ್ದಾರೆ.ಇನ್ನು ಶೌಚಾಲಯದ ಹೊರಗೆ ಈ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಶಾಲೆಯವರು ಹೇಳಿಕೊಂಡಿದ್ದಾರೆ.
ವಿಷಯ ಏನೆಂದರೆ ಈ ಕ್ಯಾಮೆರಾಗಳನ್ನು ಬಾಲಕಿಯರ ಶೌಚಾಲಯದ ಹೊರಗೆ ಮಾತ್ರ ಅಳವಡಿಸಲಾಗಿದೆಯೇ ಹೊರತು ಹುಡುಗರ ಶೌಚಾಲಯದಲ್ಲಿಲ್ಲ. ಬಾಲಕಿಯರ ಆಕ್ಟಿವಿಟಿಗಳನ್ನು ನೋಡಲು ಕ್ಯಾಮೆರಾಗಳ ಅಗತ್ಯವಿದೆಯೇ ಎಂಬ ಪ್ರಶ್ನೆ ಶಾಲಾ ಆಡಳಿತ ಮಂಡಳಿಗೆ ಕೇಳಿ ಬರುತ್ತಿದೆ.
ಮಕ್ಕಳ ಜಗಳ, ಧೂಮಪಾನ ಅಥವಾ ಯಾವುದೇ ರೀತಿಯ ಚಟುವಟಿಕೆಗಳನ್ನು ತಡೆಗಟ್ಟಲು ಶೌಚಾಲಯಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು. ಇನ್ನು ಈ ಕ್ಯಾಮೆರಾಗಳ ಮೇಲೆ ಹೆಚ್ಚು ನಿಗಾ ಇಡಲಾಗುವುದಿಲ್ಲ, ಆದ್ದರಿಂದ ಖಾಸಗಿತನಕ್ಕೆ ಯಾವುದೇ ಧಕ್ಕೆ ಇಲ್ಲ, ಆದರೂ ಈ ಬಗ್ಗೆ ಯಾವುದೇ ಔಪಚಾರಿಕ ದೂರುಗಳು ಬಂದಿಲ್ಲವಾದರೂ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿಲ್ಲ ಮತ್ತು ಇದು ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಈ ಎಲ್ಲಾ ವಿಷಯಗಳಿಗಾಗಿ ಹುಡುಗಿಯರ ಶೌಚಾಲಯದಲ್ಲಿ ಸಿಸಿಕ್ಯಾಮರ ಅಳವಡಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ. ಇದೆಲ್ಲವೂ ಸೆಕ್ಯುರಿಟಿಗಾಗಿ ಎಂದು ಶಾಲಾ ಸಂಸ್ಥೆಯು ತಿಳಿಸುತ್ತದೆ.
ಇದನ್ನೂ ಓದಿ: ತಹಶೀಲ್ದಾರ್‌ಗೆ ಹಲ್ಲೆ ಮಾಡಿದ ಶಾಸಕ : ಶಾಸಕರಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ