LPG Cylinder Price: ಕನ್ನಡ ರಾಜ್ಯೋತ್ಸವದ ದಿನ ಭಾರೀ ಏರಿಕೆ ಕಂಡ LPG ಬೆಲೆ, ಗ್ರಾಹಕರಲ್ಲಿ ತಲ್ಲಣ !
Business news LPG cylinder price hike commercial gas rate today here is details
LPG Cylinder Price: ಇಂದು ಕನ್ನಡ ರಾಜ್ಯೋತ್ಸವ. ಇಂದು, ನವೆಂಬರ್ ತಿಂಗಳ ಮೊದಲ ದಿನವೇ ಜನತೆಗೆ ಬಿಗ್ ಶಾಕ್ ದೊರೆತಿದ್ದು ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ(LPG Cylinder Price) ಬರೋಬ್ಬರಿ 103 ರೂ. ಏರಿಕೆ ಮಾಡಲಾಗಿದೆ.
19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 103 ರೂ. ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್ಪಿಜಿ ಸಿಲಿಂಡರ್ 1833 ರೂ.ಗೆ ಲಭ್ಯವಾಗಲಿದೆ. ಮುಂಬೈನಲ್ಲಿ 1785.50 ರೂ., ಕೋಲ್ಕತ್ತಾದಲ್ಲಿ 1943.00 ರೂ., ಚೆನ್ನೈನಲ್ಲಿ 1999.50 ರೂಪಾಯಿಗೆ ಬೆಲೆ ಏರಿಕೆ ಆಗಿದೆ. ಕಳೆದ 32 ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 310 ರೂ.
ಈ ಮೊದಲು, ಅಕ್ಟೋಬರ್ 1 ರಂದು ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಸುಮಾರು 209 ರೂ.ಗೆ ಹೆಚ್ಚಿಸಲಾಯಿತು. ಈಗ ಮತ್ತೆ ಏರಿಕೆ ಆಗಿದ್ದು, ಕಳೆದ ಒಂದು ತಿಂಗಳಲ್ಲಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆ 310 ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ 1943.00 ರೂ., ಕಳೆದ ತಿಂಗಳು 203 ರೂ. ಅಂದರೆ, ಒಂದು ತಿಂಗಳಲ್ಲಿ, ಪ್ರತಿ ಸಿಲಿಂಡರ್ಗೆ 304.50 ರೂ.ಗಳ ಹೆಚ್ಚಳವಾಗಿದೆ.
ದೇಶದ ವಿವಿಧ ನಗರಗಳಲ್ಲಿ ಇಂದು ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಗಳು ಹೀಗಿವೆ:
ಬೆಂಗಳೂರು: 1813 ರೂಪಾಯಿ (203 ರೂಪಾಯಿ ಜಾಸ್ತಿ ಅಗಿದೆ)
ಮುಂಬೈ: 1785.5 ರೂಪಾಯಿ
ದೆಹಲಿ 1833 ರೂಪಾಯಿ
ಕೊಲ್ಕತ್ತಾ 1943 ರೂಪಾಯಿ
ಚೆನ್ನೈ 1999.5 ರೂಪಾಯಿ
ಆದರೆ 14.2 ಕೆಜಿ ಸಿಲಿಂಡರ್ ಬಳಸುವ ಗ್ರಾಹಕರಿಗೆ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ಸುಮಾರು ಎರಡು ತಿಂಗಳ ಹಿಂದೆ, ಆಗಸ್ಟ್ 30 ರಂದು, ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 200 ರೂ.ಗೆ ಇಳಿಸಲಾಗಿತ್ತು. ಇಂದಿಗೂ 14.2 ಕೆಜಿ ದೇಶೀಯ ಎಲ್ಪಿಜಿ ಸಿಲಿಂಡರ್ ಗಳು 2 ತಿಂಗಳ ಹಿಂದಿನ ಬೆಲೆಯಲ್ಲಿ, ಅಂದರೆ ಆಗಸ್ಟ್ 30 ರಂತೆಯೇ ಲಭ್ಯವಿದೆ. ಕರ್ನಾಟಕದಲ್ಲಿ (ಬೆಂಗಳೂರು) ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆ ರೂ. 905.50 ಇದೆ. ದೆಹಲಿಯಲ್ಲಿ ಪ್ರತಿ ಸಿಲಿಂಡರ್ಗೆ 903 ರೂ., ಕೋಲ್ಕತಾದಲ್ಲಿ 929 ರೂ., ಮುಂಬೈನಲ್ಲಿ 902.50 ರೂ. ಚೆನ್ನೈನಲ್ಲಿ ಇಂದು, ಅಂದರೆ ನವೆಂಬರ್ 1, 2023 ರಂದು, ಇದನ್ನು ಪ್ರತಿ ಸಿಲಿಂಡರ್ಗೆ 918.50 ರೂ.ಗಳ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: ಉಂಡು ಮಲಗಿದ ಮೇಲೆ ಕೂಡಾ ನಿಲ್ಲದ ಪತಿ ಪತ್ನಿ ಜಗಳ – ಪತಿಯ ಗುಪ್ತಾಂಗಕ್ಕೆ ಚಾಕು ಹಾಕಿದ ಪತ್ನಿ !